ಬೆಂಗಳೂರು: ನಗರದ ಅರಮನೆ ಮೈದಾನದ ಸಮೀಪ ನಾಳೆ (ನವೆಂಬರ್ 28, 2025) ಪ್ರಮುಖ ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧಗಳು ಜಾರಿಗೊಳ್ಳಲಿವೆ ಎಂದು ಬೆಂಗಳೂರಿನ ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವವನ್ನು ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ಸಂಖ್ಯೆ-01 ರಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಿದೆ. ಈ ಮಹೋತ್ಸವಕ್ಕೆ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯದ ಕ್ಯಾಬಿನೆಟ್ ದರ್ಜೆ ಸಚಿವರು, ಗಣ್ಯ ವ್ಯಕ್ತಿಗಳು ಸೇರಿದಂತೆ ಸುಮಾರು 40,000 ಸಾರ್ವಜನಿಕರು ಮತ್ತು 959 ವಾಹನಗಳು ಆಗಮಿಸುವ ಸಾಧ್ಯತೆ ಇದೆ. ಹೆಚ್ಚಿನ ಜನಸ್ತೋಮ ಕಂಡುಬರುವ ಹಿನ್ನೆಲೆ ಆ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ವಿಶೇಷ ಟ್ರಾಫಿಕ್ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಅರಮನೆ ಮೈದಾನ, ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಹಾಗೂ ಸಿ.ವಿ ರಾಮನ್ ರಸ್ತೆಯಲ್ಲಿ ಸಾರಿಗೆ ಒತ್ತಡ ಹೆಚ್ಚಾಗುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹಲವು ಮಾರ್ಗ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.
ಪ್ರಮುಖ ಮಾರ್ಗ ಬದಲಾವಣೆಗಳು
1. ಏರ್‌ಪೋರ್ಟ್ ಕಡೆಗೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ
ಏರ್‌ಪೋರ್ಟ್‌ಗೆ ತೆರಳುವವರು ಕೆಳ್ಕಂಡ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
-
ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್
-
ಕಲ್ಪನಾ ಜಂಕ್ಷನ್
-
ಓಲ್ಡ್ ಉದಯ ಟಿವಿ ಜಂಕ್ಷನ್
-
ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್
-
ಟ್ಯಾನರಿ ರಸ್ತೆ
-
ನಾಗಾವರ
-
ನಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಕ್ಕಿಗೆ ಮುಂದುವರಿಯಬಹುದು.
ಈ ಮಾರ್ಗ ಬಳಸುವ ಮೂಲಕ ಪ್ರಮುಖ ಸಂಚಾರ ದಟ್ಟಣೆ ಇರುವ ಬಳ್ಳಾರಿ ರಸ್ತೆ ತಪ್ಪಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
2. ಏರ್‌ಪೋರ್ಟ್‌ನಿಂದ ನಗರಕ್ಕೆ ಬರುವವರಿಗೆ ಪರ್ಯಾಯ ಮಾರ್ಗ
ಏರ್‌ಪೋರ್ಟ್ ದಿಕ್ಕಿನಿಂದ ಸಂಚರಿಸುವವರು ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಳಗಿನ ಎರಡು ಮಾರ್ಗಗಳಲ್ಲಿ ಒಂದನ್ನು ಬಳಸಬಹುದು.
-
ಮಾರ್ಗ 1: ಹೆಬ್ಬಾಳ → ಎಡ ತಿರುವು → ನಾಗಾವರ ಜಂಕ್ಷನ್ → ಬಂಬು ಬಜಾರ್ → ಕ್ಲೀನ್ಸ್ ರೋಡ್ → ಸಿಟಿ
-
ಮಾರ್ಗ 2: ಹೆಬ್ಬಾಳ ರಿಂಗ್‌ರೋಡ್ → ಕುವೆಂಪು ಸರ್ಕಲ್ → ಗೊರಗುಂಟೆ ಪಾಳ್ಯ ಜಂಕ್ಷನ್ → ಎಡ ತಿರುವು → ಡಾ.ರಾಜ್ ಕುಮಾರ್ ರಸ್ತೆ → ಸಿಟಿ
ಈ ಮಾರ್ಗಗಳು ಸಂಚಾರ ಒತ್ತಡ ತಪ್ಪಿಸಿ ನೇರವಾಗಿ ನಗರ ಕೇಂದ್ರ ಭಾಗಕ್ಕೆ ತಲುಪಲು ಸಹಾಯಕವಾಗಲಿದೆ.
3. ಯಶವಂತಪುರದಿಂದ ಏರ್‌ಪೋರ್ಟ್ ಕಡೆಗೆ ತೆರಳುವವರಿಗೆ ಮಾರ್ಗ
ಯಶವಂತಪುರದಿಂದ ಪ್ರಯಾಣಿಸುವವರು.
-
ಮತ್ತಿಕೆರೆ ರಸ್ತೆ
-
ಬಿ.ಇ.ಎಲ್ ವೃತ್ತ
-
ಬಲ ತಿರುವು → ರಿಂಗ್ ರೋಡ್
-
ನಂತರ ಏರ್‌ಪೋರ್ಟ್‌ಗೆ ಸಂಚಾರ
ಈ ಮಾರ್ಗ ಹೆಚ್ಚು ವೇಗವಾಗಿ ಮತ್ತು ಸುಗಮವಾಗಿ ವಿಮಾನ ನಿಲ್ದಾಣ ತಲುಪಲು ಅನುಕೂಲ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
4. ಯಶವಂತಪುರದಿಂದ ನಗರ ಕೇಂದ್ರಕ್ಕೆ ತೆರಳುವವರು
-
ಯಶವಂತಪುರ → ಡಾ. ರಾಜ್ ಕುಮಾರ್ ರಸ್ತೆ → ನಗರ ಕೇಂದ್ರ
ಭಾರೀ ವಾಹನಗಳಿಗೆ ವಿಶೇಷ ನಿಯಮಗಳು
5. ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಬಂಧ
ಭಾರೀ ವಾಹನಗಳು ಹೆಬ್ಬಾಳದಿಂದ ಬಳ್ಳಾರಿ ರಸ್ತೆ ಕಡೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
-
ಔಟರ್ ರಿಂಗ್ ರೋಡ್ ನಲ್ಲೇ ಚಲಿಸಬೇಕು.
6. ಓಲ್ಡ್ ಹೈ ಗ್ರೌಂಡ್ಸ್–ಕಲ್ಪನಾ ಜಂಕ್ಷನ್ ಪ್ರದೇಶ
ಭಾರೀ ವಾಹನಗಳು ಈ ಕಡೆ ಸಂಚರಿಸಬಾರದು.
-
ಕಲ್ಪನಾ ಜಂಕ್ಷನ್ → ಓಲ್ಡ್ ಉದಯ ಟಿವಿ ಜಂಕ್ಷನ್ → ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ → ಟ್ಯಾನರಿ ರಸ್ತೆ → ನಾಗಾವರ ಮಾರ್ಗ ಬಳಸಬೇಕು.
7. ಯಶವಂತಪುರದಿಂದ ಸಿ.ವಿ ರಾಮನ್ ರಸ್ತೆ ಕಡೆ
ಸಿ.ವಿ ರಾಮನ್ ರಸ್ತೆಯ ಕಡೆಗೆ ಭಾರೀ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ.
ವಾಹನ ನಿಲುಗಡೆ ನಿಷೇಧ ಇರುವ ರಸ್ತೆಗಳನ್ನು ಗಮನಿಸಿ
ನಾಳೆ ಬೆಳಿಗ್ಗೆ 7 ರಿಂದ ಸಂಜೆ 4ರವರೆಗೆ ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
-
ಪ್ಯಾಲೇಸ್ ರಸ್ತೆ
-
ನಂದಿದುರ್ಗ ರಸ್ತೆ
-
ಬಳ್ಳಾರಿ ರಸ್ತೆ
-
ಸಿ.ವಿ ರಾಮನ್ ರಸ್ತೆ
-
ಜಯಮಹಲ್ ರಸ್ತೆ
-
ಗುಟ್ಟಹಳ್ಳಿ ರಸ್ತೆ
ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಪ್ರಯಾಣಕ್ಕೆ ಮುಂಚಿತವಾಗಿ ಯೋಜನೆ ಮಾಡಿಕೊಂಡು ಹೊರಡಲು ಹಾಗೂ ಸಂಚಾರ ನಿಯಮಗಳನ್ನು ಪಾಲಿಸಲು ವಿನಂತಿಸಿದ್ದಾರೆ.





