ಬೆಂಗಳೂರು: ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ ಅಂತಾರೆ. ಕೆಲವೊಂದು ಪ್ರೇಮಿಗಳು ಈ ಮಾತು ನಿಜ ಎಂದು ಆಗಾಗ್ಗೆ ತೋರಿಸಿಕೊಡುತ್ತಿರುತ್ತಾರೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಂದು ಕಾರಿನ ಸನ್‌ರೂಫ್‌ನಿಂದ ಹೊರಬಂದು ಯುವಕ-ಯುವತಿ ನಡು ರಸ್ತೆಯಲ್ಲಿ ಕಿಸ್ ಮಾಡುತ್ತಾ ಅತಿರೇಕದ ವರ್ತನೆ ತೊಡಗಿದ್ದಾರೆ. ಯುವಕ- ಯುವತಿಯ ಕಿಸ್ಸಿಂಗ್ ದೃಶ್ಯವನ್ನು ಹಿಂಬದಿಯ ಸವಾರನೊಬ್ಬ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದೆ.
ಘಟನೆಯ ವಿವರ
ನಿನ್ನೆ ರಾತ್ರಿ, ಬೆಂಗಳೂರಿನ ಟ್ರಿನಿಟಿ ರಸ್ತೆಯಲ್ಲಿ KA03 NR2922 ನೋಂದಣಿ ಸಂಖ್ಯೆಯ ಕಾರೊಂದರಲ್ಲಿ ಈ ಘಟನೆ ನಡೆದಿದೆ. ಕಾರಿನ ಸನ್‌ರೂಫ್‌ನಿಂದ ಯುವಕ-ಯುವತಿಯ ಜೋಡಿಯು ಸಾರ್ವಜನಿಕವಾಗಿ ಅನುಚಿತ ವರ್ತನೆಯಲ್ಲಿ ತೊಡಗಿರುವ ದೃಶ್ಯವನ್ನು ಹಿಂಬದಿಯ ಸವಾರನೊಬ್ಬ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಯುವ ಜೋಡಿಯು ರಸ್ತೆಯ ಮಧ್ಯದಲ್ಲಿ ರೊಮ್ಯಾಂಟಿಕ್ ವರ್ತನೆಯಲ್ಲಿ ತೊಡಗಿದ್ದು, ಇದು ಸಾರ್ವಜನಿಕರ ಗಮನ ಸೆಳೆದಿದೆ. ಈ ಘಟನೆಯು ರಾತ್ರಿಯ ಸಮಯದಲ್ಲಿ ನಡೆದಿದೆ.
ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸವಾರ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ಇಂತಹ ಘಟನೆಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅನೇಕ ಎಕ್ಸ್ ಬಳಕೆದಾರರು ಈ ಘಟನೆಯನ್ನು ಖಂಡಿಸಿದ್ದು, ಇಂತಹ ವರ್ತನೆಯು ರಸ್ತೆ ಸುರಕ್ಷತೆಗೆ ಧಕ್ಕೆ ತರುವುದರ ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಕುಟುಂಬಗಳಿಗೆ ಮುಜುಗರವನ್ನುಂಟುಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಬೆಂಗಳೂರು ಪೊಲೀಸರು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವುದರಿಂದ, ಈ ಘಟನೆಯ ಕುರಿತು ತನಿಖೆ ನಡೆಸುವ ಸಾಧ್ಯತೆಯಿದೆ.