ಬೆಂಗಳೂರು, ನವೆಂಬರ್ 17: ನಗರದಲ್ಲಿ ವಿದ್ಯುತ್ ಸಮಸ್ಯೆ ಎಂಬುದು ಹೊಸದೇನಲ್ಲ, ಆದರೆ ನಾಳೆ (ನವೆಂಬರ್ 18, ಮಂಗಳವಾರ) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಎರಡು ಬೃಹತ್ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಿದ್ದು, ದಕ್ಷಿಣ ಮತ್ತು ಉತ್ತರ ಬೆಂಗಳೂರಿನ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಆಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಆಡುಗೋಡಿ ಪ್ರದೇಶದಲ್ಲಿ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಕೆಲವು ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಲಿವೆ. ವಿದ್ಯುತ್ ಇಲ್ಲದೇ ಇರುವ ಪ್ರಮುಖ ಪ್ರದೇಶಗಳು.
- ಆಡುಗೋಡಿ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಚಿನ್ನಯ್ಯನಪಾಳ್ಯ
- ಫೋರಮ್ ಮಾಲ್, ಕ್ರೈಸ್ಟ್ ಯೂನಿವರ್ಸಿಟಿ ಸುತ್ತಮುತ್ತ
- ಬೆಂಗಳೂರು ಡೈರಿ, ನಿಮ್ಹಾನ್ಸ್ ಆಡಳಿತ ಘಟಕ, ಆಕ್ಸೆಂಚರ್ ಆಫೀಸ್
- ಸಲಾಪುರಿಯಾ ಟವರ್, ಬಿಗ್ ಬಜಾರ್, ಕೆ.ಎಮ್.ಎಫ್ ಗೋಡೌನ್
- ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಣೆ
- ರಂಗದಾಸಪ್ಪ ಲೇಔಟ್, ಚಂದ್ರಪ್ಪ ನಗರ, ಲಾಲ್‌ಜಿ ನಗರ, ಶಾಮಣ್ಣ ಗಾರ್ಡನ್
- ಸುಣ್ಣದಕಲ್ಲು, ಬೃಂದಾವನ ಸ್ಲಂ, ಬಂಡೆ ಸ್ಲಂ, ಎನ್‌ಡಿಆರ್‌ಐ, ಪೊಲೀಸ್ ವಸತಿ ಸಮುಚ್ಚಯ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಪ್ರದೇಶಗಳು
ಈ ಪ್ರದೇಶಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳ ಆಡಳಿತ ವಿಭಾಗ, ಶೈಕ್ಷಣಿಕ ಸಂಸ್ಥೆಗಳು, ದೊಡ್ಡ ಐಟಿ ಕಂಪನಿಗಳ ಕಛೇರಿಗಳು ಇರುವುದರಿಂದ ಜನರಿಗೆ ತೀವ್ರ ತೊಂದರೆಯಾಗಲಿದೆ.
ಉತ್ತರ ಬೆಂಗಳೂರಿನಲ್ಲಿ 66/11 ಕೆ.ವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯಲಿದ್ದು, ಹೆಗ್ಗನಹಳ್ಳಿ, ಥಣಿಸಂದ್ರ, ಕೋಗಿಲು ರಸ್ತೆ ಸುತ್ತಮುತ್ತಲಿನ ಹಲವು ವಸತಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ. ಪ್ರಮುಖ ಪ್ರದೇಶಗಳು.
- ಶೋಭಾ ಸಿಟಿ, ಚೊಕ್ಕನಹಳ್ಳಿ, ನೂರ್ ನಗರ, ಆರ್.ಕೆ. ಹೆಗ್ಡೆನಗರ
- ವಿಧಾನಸೌಧ ಲೇಔಟ್, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೊಲೀಸ್ ಕ್ವಾರ್ಟರ್ಸ್
- ಥಣಿಸಂದ್ರ, ನಾಗೇನಹಳ್ಳಿ, ತಿರುಮೇನಹಳ್ಳಿ, ಕೋಗಿಲು, ಮಿತ್ತಗಾನಹಳ್ಳಿ ಗ್ರಾಮಗಳು
- ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್, ಬಾಲಾಜಿ ಲೇಔಟ್, ಅರ್ಕಾವತಿ ಲೇಔಟ್
- ಶಬರಿ ನಗರ, ಹೊಸ ಶಾಂತಿ ನಗರ, ಸ್ಲಂ ಬೋರ್ಡ್ ಪ್ರದೇಶಗಳು ಮತ್ತು ಸುತ್ತಲಿನ ಎಲ್ಲ ಕಡೆ
ಜನರು ಏನು ಮಾಡಬೇಕು?
- ಮೊಬೈಲ್, ಲ್ಯಾಪ್‌ಟಾಪ್, ಪವರ್ ಬ್ಯಾಂಕ್‌ಗಳನ್ನು ಈಗಲೇ ಫುಲ್ ಚಾರ್ಜ್ ಮಾಡಿ
- ಮನೆಯಲ್ಲಿ ಇನ್ವರ್ಟರ್/ಜನರೇಟರ್ ಇದ್ದರೆ ಸಿದ್ಧಪಡಿಸಿ
- ಆನ್‌ಲೈನ್ ಸಭೆಗಳನ್ನು ಬೆಳಗ್ಗೆ 10ಕ್ಕಿಂತ ಮೊದಲು ಅಥವಾ ಸಂಜೆ 5ರ ನಂತರ ಫಿಕ್ಸ್ ಮಾಡಿ
- ಆಸ್ಪತ್ರೆ, ಬ್ಯಾಂಕ್, ಎಟಿಎಂಗಳು ಜನರೇಟರ್ ಬಳಸುತ್ತವಾದರೂ ಮುಂಜಾಗ್ರತೆ ವಹಿಸಿ
- ಮಕ್ಕಳ ಪರೀಕ್ಷೆ/ಆನ್‌ಲೈನ್ ತರಗತಿ ಇದ್ದರೆ ಬ್ಯಾಕಪ್ ವ್ಯವಸ್ಥೆ ಮಾಡಿಕೊಳ್ಳಿ
ಬೆಸ್ಕಾಂ ಈ ಕಾಮಗಾರಿಗಳು ದೀರ್ಘಕಾಲೀನ ಸ್ಥಿರ ವಿದ್ಯುತ್ ಸರಬರಾಜಿಗೆ ಅನಿವಾರ್ಯ ಎಂದು ತಿಳಿಸಿದೆ. ಆದರೂ ನಗರದ ಜನರಿಗೆ ಒಂದು ದಿನದ ಈ ತೊಂದರೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.





