ಬಾಗಲಕೋಟೆ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕ ಚಾಕು ಇರಿದ ಘಟನೆ ಬಾಗಲಕೋಟೆ ತಾಲೂಕಿನ ಹೊಸ ಮುರನಾಳ ಗ್ರಾಮದಲ್ಲಿ ನಡೆದಿದೆ.
ಹಸಿರು ಧ್ವಜ ಹಾಕಲು ಬಂದಿದ್ದ ಆಸಿಫ್ ಬೆಳಗಾಂವ್ ಎಂಬ ಯುವಕನಿಂದ ನವೀನ್ ಕುಡ್ಲೆಪ್ಪನವರ (22) ಎಂಬ ಯುವಕನಿಗೆ ಚಾಕು ಇರಿದಿದ್ದಾನೆ. ಈ ಘಟನೆಯಿಂದ ನವೀನ್‌ಗೆ ಮುಖ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ, ಆಸಿಫ್ ಬೆಳಗಾಂವ್ ಎಂಬಾತನು ಹಸಿರು ಧ್ವಜವನ್ನು ಹಾಕಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇದನ್ನು ವಿರೋಧಿಸಿದ ನವೀನ್ ಕುಡ್ಲೆಪ್ಪನವರ ಮತ್ತು ಆಸಿಫ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದವು ಕೆಲವೇ ಕ್ಷಣಗಳಲ್ಲಿ ತೀವ್ರಗೊಂಡು, ಆಸಿಫ್ ಚಾಕುವಿನಿಂದ ನವೀನ್‌ಗೆ ಇರಿದಿದ್ದಾನೆ ಎಂಬ ಆರೋಪವಿದೆ. ಘಟನೆಯಿಂದ ಗಾಯಗೊಂಡ ನವೀನ್‌ಗೆ ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.