ಬೆಂಗಳೂರು: ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್)ಯ 54ನೇ ರಾಷ್ಟ್ರೀಯ ಕ್ರೀಡಾಕೂಟ 2025-26ರ 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್ ಆಟವು ಇಂದು ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂಎಫ್‌ನಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಪಿ. ದೇವಕುಮಾರ್ (ಕೆವಿಎಸ್ ಆಯುಕ್ತರ ಸಲಹೆಗಾರ, ದೆಹಲಿ) ಭಾಗವಹಿಸಿದರು. ಉಪಮುಖ್ಯ ಅತಿಥಿಗಳಾಗಿ ಶ್ರೀ ಶೂಜಾ ಮೊಹಮ್ಮದ್ ಮತ್ತು ಶ್ರೀ ಶೇಕ್ ತಾಜುದ್ದೀನ್ ಉಪಸ್ಥಿತರಿದ್ದರು. ಇತರ ಗಣ್ಯ ಅತಿಥಿಗಳು ಸೇರಿದಂತೆ ಇತರೆ ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭಕ್ಕೆ ದೀಪ ಹಚ್ಚುವ ಮೂಲಕ ಆಧ್ಯಾತ್ಮಿಕ ಶುಭಾರಂಭ ನೀಡಲಾಯಿತು. ಸ್ವಾಗತ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡೆಯೊಂದಿಗೆ ಸಂಸ್ಕೃತಿಯ ಸಮ್ಮಿಲನವನ್ನು ತೋರಿಸಿದವು.
ಸಮಾರಂಭದಲ್ಲಿ ಸುಸ್ಥಿರತೆಯ ಬದ್ಧತೆಯನ್ನು ಸಂಕೇತಿಸುವಂತೆ ಹೂ ಗಿಡಗಳನ್ನ ಕೊಡುವ ಮುಖಾಂತರ ಸ್ವಾಗತ ಮಾಡಲಾಯಿತು. ನಂತರ, ಶೇಕ್ ತಾಜುದ್ದೀನ್ ಅವರು ಪ್ರೇರಕ ಭಾಷಣ ಮಾಡಿ, ಕ್ರೀಡಾಪಟುಗಳನ್ನು ಹುಮ್ಮಸ್ಸು ಮತ್ತು ಶಿಸ್ತಿನೊಂದಿಗೆ ಸ್ಪರ್ಧಿಸಲು ಪ್ರೋತ್ಸಾಹಿಸಿದರು.
ನಂತರ ಕೆವಿಎಸ್ ಧ್ವಜಾರೋಹಣವನ್ನು ನೆರವೇರಿಸಿದರು.ಬಳಿಕ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಪಿ. ದೇವಕುಮಾರ್, ಕ್ರೀಡೆಯು ಕೇವಲ ದೈಹಿಕ ಚಟುವಟಿಕೆಯಲ್ಲ, ಇದು ಪಾತ್ರ ಮತ್ತು ನಾಯಕತ್ವದ ಅಭಿವೃದ್ಧಿಗೆ ಮಾರ್ಗದರ್ಶಿ. ಆಟಗಾರರು ತಮ್ಮ ಆಟದ ಮೌಲ್ಯಗಳನ್ನು ಕಲಿಯಬೇಕು ಎಂದು ಹೇಳಿದರು.
ಈ ಕೂಟದಲ್ಲಿ 14 ವರ್ಷದೊಳಗಿನ ಬಾಲಕರ ಕ್ರಿಕೆಟ್ ವಿಭಾಗಕ್ಕೆ ರಾಷ್ಟ್ರಾದ್ಯಂತದಿಂದ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ರೋಚಕ ಪಂದ್ಯಗಳು ನಡೆಯಲಿವೆ. ಇದರೊಂದಿಗೆ ಇತರ ಕ್ರೀಡೆಗಳಾದ ಫುಟ್‌ಬಾಲ್, ವಾಲಿಬಾಲ್, ಏಥ್ಲೆಟಿಕ್ಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಆಯೋಜನೆಯಾಗಿವೆ. ದು.