ಫಿಟ್ ಆಗೋದು ಅಂದ್ರೆ ಮೊದಲು ನೆನಪಿಗೆ ಬರುವುದು ಹೊಟ್ಟೆಯ ಬೊಜ್ಜು ಕಡಿಮೆ ಮಾಡೋದು. ಆದರೆ ನಿಜವಾಗಿ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದದ್ದು ಕೋರ್ ಮಸಲ್ಸ್ ಅಂದ್ರೆ ಹೊಟ್ಟೆ, ಬೆನ್ನು, ಪಕ್ಕೆಗಳು ಮತ್ತು ಪೆಲ್ವಿಕ್ ಸುತ್ತಲಿನ ಸ್ನಾಯುಗಳು. ಇವು ಗಟ್ಟಿಯಾಗಿದ್ದರೆ ಬರೀ ನೋಡಲು ಚೆಂದವಲ್ಲ, ಬೆನ್ನು ನೋವು ಕಡಿಮೆಯಾಗುತ್ತದೆ, ಬ್ಯಾಲೆನ್ಸ್ ಸುಧಾರಿಸುತ್ತದೆ, ಒಟ್ಟಾರೆ ದೇಹದ ಸ್ಥಿರತೆ ಹೆಚ್ಚುತ್ತದೆ.
ಕೋರ್ ಮಸಲ್ಸ್ ವೀಕ್ ಆದ್ರೆ ಬೆನ್ನು ನೋವು, ಬ್ಯಾಡ್ ಪೋಸ್ಚರ್, ಸಮತೋಲನ ಕಳೆದುಕೊಳ್ಳುವುದು ಸಾಮಾನ್ಯ. ಇದಕ್ಕೆ ಉತ್ತಮ ಪರಿಹಾರ ಯೋಗ ಯೋಗಾಸನಗಳು ಜಿಮ್ ಅಥವಾ ಯಾವುದೇ ಎಕ್ವಿಪ್‌ಮೆಂಟ್ ಇಲ್ಲದೆ ಮನೆಯಲ್ಲೇ ಮಾಡಬಹುದು. ಇಲ್ಲಿವೆ ಕೋರ್ ಸ್ನಾಯುಗಳನ್ನು ಗಟ್ಟಿಯಾಗಿಸುವ 4 ಅದ್ಭುತ ಯೋಗಾಸನಗಳು:
- ಪ್ಲ್ಯಾಂಕ್ ಪೋಸ್:ಹೇಗೆ ಮಾಡುವುದು: ಮೊದಲು ಪುಷ್-ಅಪ್ ಸ್ಥಿತಿಯಲ್ಲಿ ನಿಲ್ಲಿ. ಕೈಗಳು ಭುಜದ ಕೆಳಗೆ, ದೇಹ ನೇರವಾಗಿ ಒಂದು ರೇಖೆಯಲ್ಲಿ. ಹೊಟ್ಟೆಯನ್ನು ಒಳಗೆ ಸೆಳೆದುಕೊಂಡು ಹಿಡಿದುಕೊಳ್ಳಿ.
- ಲಾಭ: ಇಡೀ ಕೋರ್ (ಅಬ್ಡಾಮಿನಲ್ಸ್, ಒಬ್ಲಿಕ್ಸ್, ಬ್ಯಾಕ್) ಗಟ್ಟಿಯಾಗುತ್ತದೆ. ಭುಜಗಳು, ಕೈಗಳು, ಗ್ಲೂಟ್ಸ್‌ಗೂ ಬಲ.
- ಹೊಸಬರಿಗೆ: ಮೊದಲು ಮೊಣಕಾಲುಗಳ ಮೇಲೆ ಮಾಡಿ, ನಂತರ ಪೂರ್ಣ ಪ್ಲಾಂಕ್‌ಗೆ ಹೋಗಿ. 20-60 ಸೆಕೆಂಡ್‌ಗಳಿಂದ ಆರಂಭಿಸಿ.
- ಬೋಟ್ ಪೋಸ್ (ನಾವಾಸನ)
- ಹೇಗೆ ಮಾಡುವುದು: ನೆಲದ ಮೇಲೆ ಕೂತುಕೊಳ್ಳಿ. ಕಾಲುಗಳನ್ನು ಮೇಲಕ್ಕೆತ್ತಿ 45 ಡಿಗ್ರಿ ಮಾಡಿ, ಮುಂದೆ ಬಾಗಿ ಕೈಗಳನ್ನು ಮುಂದಕ್ಕೆ ಚಾಚಿ. ದೇಹ ‘V’ ಆಕಾರದಲ್ಲಿ.
- ಲಾಭ: ಡೀಪ್ ಅಬ್ಡಾಮಿನಲ್ ಮಸಲ್ಸ್‌ಗೆ ಅತ್ಯುತ್ತಮ. ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯಕ, ಬ್ಯಾಲೆನ್ಸ್ ಸುಧಾರಣೆ.
- ಟಿಪ್: ಮೊದಲು ಮೊಣಕಾಲುಗಳನ್ನು ಬಗ್ಗಿಸಿ ಮಾಡಿ, ನಂತರ ನೇರಗೊಳಿಸಿ.
- ಸೈಡ್ ಪ್ಲಾಂಕ್ (ವಸಿಷ್ಠಾಸನ)
- ಹೇಗೆ ಮಾಡುವುದು: ಒಂದು ಕೈಯ ಮೇಲೆ ದೇಹವನ್ನು ಎತ್ತಿಕೊಂಡು ಬದಿಯಲ್ಲಿ ನಿಲ್ಲಿ. ಇನ್ನೊಂದು ಕೈ ಮೇಲಕ್ಕೆ ಚಾಚಿ. ದೇಹ ನೇರವಾಗಿರಲಿ.
- ಲಾಭ: ಒಬ್ಲಿಕ್ಸ್ (ಪಕ್ಕೆಯ ಸ್ನಾಯುಗಳು) ಗಟ್ಟಿಯಾಗುತ್ತವೆ, ಸ್ಪೈನ್ ಸ್ಥಿರತೆ, ಬ್ಯಾಲೆನ್ಸ್ ಹೆಚ್ಚು.
- ಮಾರ್ಪಾಡು: ಕೆಳಗಿನ ಮೊಣಕಾಲನ್ನು ನೆಲಕ್ಕೆ ಇಟ್ಟು ಮಾಡಿ.
- ಬ್ರಿಡ್ಜ್ ಪೋಸ್ (ಸೇತು ಬಂಧಾಸನ)
- ಹೇಗೆ ಮಾಡುವುದು: ಬೆನ್ನುಮೇಲೆ ಮಲಗಿ, ಕಾಲುಗಳನ್ನು ಬಗ್ಗಿಸಿ. ಹಿಪ್‌ಗಳನ್ನು ಮೇಲಕ್ಕೆತ್ತಿ, ಹೊಟ್ಟೆಯನ್ನು ಟೈಟ್ ಮಾಡಿ. ಕೈಗಳನ್ನು ಕೆಳಗೆ ಇಟ್ಟುಕೊಳ್ಳಿ.
- ಲಾಭ: ಲೋಯರ್ ಬ್ಯಾಕ್, ಗ್ಲೂಟ್ಸ್, ಕೋರ್ ಬಲಪಡಿಸುತ್ತದೆ. ಬೆನ್ನು ನೋವಿಗೆ ಉತ್ತಮ, ಹಿಪ್ ಫ್ಲೆಕ್ಸರ್‌ಗಳನ್ನು ಸ್ಟ್ರೆಚ್ ಮಾಡುತ್ತದೆ.
ಈ 4 ಯೋಗಾಸನಗಳನ್ನು ದಿನಕ್ಕೆ 10-15 ನಿಮಿಷ ಮಾಡಿ. ಉಸಿರಾಟದ ಮೇಲೆ ಗಮನ ಕೊಡಿ. ಉಸಿರು ಒಳಗೆ ಎಳೆದಾಗ ರಿಲ್ಯಾಕ್ಸ್, ಹೊರಹಾಕುವಾಗ ಎಂಗೇಜ್ ಮಾಡಿ. ಹೊಸಬರಾಗಿದ್ದರೆ ಯೋಗ ಟೀಚರ್ ಮಾರ್ಗದರ್ಶನದಲ್ಲಿ ಆರಂಭಿಸಿ. ನಿಯಮಿತ ಅಭ್ಯಾಸದಿಂದ ಕೋರ್ ಸ್ಟ್ರಾಂಗ್ ಆಗಿ, ದೇಹ ಸುಂದರ ಮತ್ತು ಆರೋಗ್ಯಕರವಾಗುತ್ತದೆ.





