ಹಲಸಿನ‌ ಹಣ್ಣು ತಿಂದು ವಾಹನ ಚಾಲನೆ ಮಾಡೋರೇ ಹುಷಾರ್..!

ನೀವು ಮದ್ಯಪಾನ ಮಾಡಿಲ್ಲ ಅಂದ್ರು ರಿಸಲ್ಟ್ ಪಾಸಿಟಿವ್ ಬರುತ್ತೆ ಎಚ್ಚರ....!

Web 2025 07 27t181243.898

ಹಲಸಿನ ಹಣ್ಣು ಆಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ, ಸಿಸನ್‌‌‌ನಲ್ಲಿ ಸಿಗೋ ಹಣ್ಣು ಯಾರದ್ರೂ ಬೇಡ ಅಂತಾರೆ ಆದ್ರೆ ಚಾಲಕರೇ ನೀವೂ ಹಲಸಿನ ಹಣ್ಣು ತಿನ್ನೋ ಮುನ್ನ ಹುಷಾರ್, ಡ್ರೈವಿಂಗ್ ಸೀಟ್ ಮೇಲೆ ಕೂತು ಈ ಹಣ್ಣು ತಿಂದ್ರೆ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಅಲ್ಲಿ ಲಾಕ್ ಆಗೋದು ಪಕ್ಕಾ ಆರ್ರೆ ಹಲಸಿನ ಹಣ್ಣಿಗೂ ಅಲ್ಕೋಹಾಲಿಗೂ ಎಲ್ಲಿಂದ ಎಲ್ಲಿಗೆ ಸಂಭಂಧ ಅಂತೀರಾ ಡಾಕ್ಟರ್ ಹೇಳ್ತಾರೆ ನೋಡಿ.

ಸೀಸನಲ್ ಫ್ರೋಟ್ ಆಗಿರುವ ಹಲಸಿನ‌ ಹಣ್ಣು ಮಾರುಕಟ್ಟೆಗೆ ಬಂದ್ರೆ ಸಾಕು ಜನ ಮುಗಿಬಿದ್ದು ಖರೀದಿ ಮಾಡುತ್ತಾರೆ. ಈ ಸಿಸನ್‌‌‌ನ ಹಣ್ಣು ಹೇಗೆ ಇದೆ ಅಂತಾ ಎಲ್ಲಾ ಸವಿತಾರೆ. ಅದ್ರೆ ಅದು ಚಾಲಕರ ಪಾಲಿಗೆ ಶಾಪವಾಗುತಿದೆ ಹಣ್ಣು ತಿಂದ ಬಳಿಕ ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ನಲ್ಲಿ ಪಾಸಿಟಿವ್ ತೋರಸುತಂತೆ.

ಹೌದು ಹಲಸಿನ‌ ಹಣ್ಣು ತಿಂದ KSRTC ಚಾಲಕರಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ‌.ಕೇರಳದಲ್ಲಿ ಪತ್ತನಂತಿಟ್ಟ ಜಿಲ್ಲೆಯ ಪಂದಳಂ ಡಿಪೋದಲ್ಲಿ‌ ಈ ಘಟನೆ ನಡೆದಿದೆ. ಪ್ರತಿದಿನ ಡಿಪೋದಿಂದ ಬಸ್ ತೆಗೆಯುವ ಮುನ್ನ ಚಾಲಕರಿಗೆ ಬ್ರೀತಲೈಸರ್ ಪರೀಕ್ಷೆ ಮಾಡಲಾಗುತ್ತೆ ಚಾಲಕರು ಮಧ್ಯಪಾನ ಮಾಡಿದ್ದಾರಾ? ಇಲ್ವಾ ಅಂತ ಟೆಸ್ಟ್ ಆಗುತ್ತೆ  ಹೀಗೆ ಚೆಕ್ ಮಾಡಿದಾಗ ಮೂವರು ಬಸ್ ಚಾಲಕರಿಗೆ ಆಲ್ಕೋಹಾಲ್ ಅಂಶ ಪತ್ತೆ ಆಗಿದೆ.  ಆ ಚಾಲಕರು ಮದ್ಯಪಾನ ಮಾಡಿರಲ್ಲ  ಮದ್ಯಪಾನ ಮಾಡದೇ ಹೋದರು ಆಲ್ಕೋಹಾಲ್ ಟೆಸ್ಟಿಂಗ್‌‌ನಲ್ಲಿ ಪಾಸಿಟಿವ್ ಹೇಗೆ ಬಂತು ಅನ್ನೋ ಅನುಮಾನ ಶುರುವಾಗಿದೆ.‌ಇನ್ನೂ ಟೆಸ್ಟ್ ಮಾಡೋಕು ಮುಂಚೆ ಹಲಸಿನ ಹಣ್ಣು ತಿಂದಿದ್ದ ಮೂವರು ಚಾಲಕರು ಸ್ನೇಹಿತರು ತಂದಿದ್ದ ಹೆಚ್ಚು ಹಣ್ಣಾಗಿದ್ದ ಹಲಸಿನ ಹಣ್ಣು ಸೇವಿಸಿದ್ದರು.‌ ಬಳಿಕ ನೆಗಟಿವ್ ಬಂದಿದ್ದ ಚಾಲಕನಿಗೆ ಹಲಸಿನ‌ ಹಣ್ಣು ತಿನ್ನಿಸಿ ಪರೀಕ್ಷೆ ಮಾಡಿದಾಗ ಆತನಿಗೂ ಪಾಸಿಟಿವ್ ಬಂದಿದೆ.

ಇನ್ನೂ ಹೆಚ್ಚು ಹಣ್ಣಾದ ಹಲಸಿನ ಹಣ್ಣಿನಲ್ಲಿ ETHANOL-ಎತನಾಲ್ ಎನ್ನುವ ಆಲ್ಕೋಹಾಲ್ ಕಂಟೆಂಟ್‌ ಇರುತ್ತೆ ರೊಟಿನ್ ಚೆಕ್ ಅಪ್ ಮಾಡುವ ಮುನ್ನ ಹಣ್ಣು ತಿಂದಿದ್ದಕ್ಕೆ ಆಲ್ಕೋಹಾಲ್ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಇನ್ನೂ ವೈದ್ಯರು ಹೇಳುವ ಪ್ರಕಾರ ಹಲಸಿನ ಹಣ್ಣಿನಲ್ಲಿ ಆಲ್ಕೋಹಾಲ್ ಉತ್ಪತ್ತಿ ಆಗುತ್ತೆ, ಫ್ರೆಶ್ ಆಗಿ ಹಲಸಿನ ಹಣ್ಣು ತಿಂದರೆ ಅದರಲ್ಲಿ ಆಲ್ಕೋಹಾಲ್ ಇರಲ್ಲ ಆದರೆ, ಹಣ್ಣಾಗಿರುವ ಹಲಸಿನ ಹಣ್ಣು ಸೇವನೆ ಮಾಡಿದ್ರೆ ಆಲ್ಕೊಹಾಲ್ ಅಂಶ ಪತ್ತೆಯಾಗುವ ಸಾಧ್ಯತೆ ಇದೆ. ಹಲಸಿನ‌ ಹಣ್ಣಿನಲ್ಲಿ 7-10 % ಆಲ್ಕೋಹಾಲ್ ಪತ್ತೆಯಾಗಬಹುದು ಅಂತೀದ್ದಾರೆ ವೈದ್ಯರು.

ಓಟ್ನಲ್ಲಿ ಕುಡಿಯುವ ಅಭ್ಯಾಸ ಇಲ್ಲದೆ ಹೋದ್ರೂ ಬರೀ ಹಲಸಿನ ಹಣ್ಣು ತಿಂದ್ರೂ ಅಲ್ಕೋಹಾಲ್ ಅಂಶ ಪತ್ತೆ ಆಗಿದ್ದು ಚಾಲಕರ ಡ್ರೈವಿಂಗ್ ಸೀಟ್‌‌‌ಗೆ ಏರುವ ಮುನ್ನ ಹಲಸಿನ ಹಣ್ಣಿನಿಂದ ದೂರ ಉಳಿಯೋದು ಉತ್ತಮ ಇಲ್ಲ ಅಂದ್ರೆ ಸಂಚಾರ ಪೋಲಿಸರು ಫೈನ್  ಹಾಕೋದಂತು ಪಕ್ಕಾ.

Exit mobile version