ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ದುಬೈ ಚಾಕೊಲೇಟ್ ಆರೋಗ್ಯದ ಮೇಲೆ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಎಚ್ಚರಿಕೆ ತಜ್ಞರಿಂದ ದೊರಕಿದೆ. ವಿಶಿಷ್ಟ ಹಸಿರು ಬಣ್ಣ ಮತ್ತು ಪಿಸ್ತಾದ ಅಲಂಕರಣದಿಂದ ಗಮನ ಸೆಳೆಯುವ ಈ ಚಾಕೊಲೇಟ್, ಪ್ರಥಮವಾಗಿ 2022 ರಲ್ಲಿ ಯುಎಇ ಮೂಲದ Fix Dessert Chocolatier ಎಂಬ ಸಂಸ್ಥೆಯು ತಯಾರಿಸಿತು.
ಆರಂಭದಲ್ಲಿ ಕುನಾಫಾ ಹಾಗೂ ಪಿಸ್ತಾದಿಂದ ತಯಾರಾಗುತ್ತಿದ್ದ ಈ ಚಾಕೊಲೇಟ್, ಜನಪ್ರಿಯತೆಯ ಬೆನ್ನು ಹತ್ತಿ ಭಾರತದಲ್ಲೂ ವ್ಯಾಪಕವಾಗಿ ಬೇಡಿಕೆಗೆ ಕಾರಣವಾಯಿತು. ಆದರೆ ಇದರ ಹಿನ್ನಲೆಯಲ್ಲಿ ನಕಲಿ ಉತ್ಪನ್ನಗಳ ತಯಾರಿಕೆಯಾಗುತ್ತಿದ್ದು, ಇವು ಆರೋಗ್ಯಕ್ಕೆ ಅಪಾಯಕಾರಿಯೆಂದು ತಜ್ಞರು ಎಚ್ಚರಿಸಿದ್ದಾರೆ.
ಪಿಸ್ತಾದಲ್ಲಿ ಇರುವ ಅಫ್ಲಾಟಾಕ್ಸಿನ್ ಎಂಬ ವಿಷಕಾರಿ ಪದಾರ್ಥ, ಈ ನಕಲಿ ಅಥವಾ ನಿರ್ವಹಣೆಯಿಲ್ಲದ ದುಬೈ ಚಾಕೊಲೇಟ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದ್ದು, ದೀರ್ಘಕಾಲ ಸೇವನೆಯಿಂದ ಲಿವರ್ ಹಾನಿಗೆ ಹಾಗೂ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಅಷ್ಟೇ ಅಲ್ಲ, ಕೆಲವೊಂದು ತಯಾರಕರು ಗ್ರಾಹಕರ ಸ್ವಾದ ಅನ್ವಯ ವಿವಿಧ ಫ್ಲೇವರ್‌ಗಳನ್ನು ಸೇರಿಸುತ್ತಿದ್ದಾರೆ. ಇತ್ತೀಚೆಗೆ ಕೆಲವು ತಯಾರಕರು ಎಳ್ಳನ್ನು ಸೇರಿಸುತ್ತಿದ್ದಾರೆ ಎಂಬುದು ಗಮನಾರ್ಹ. ಎಳ್ಳು ಅಲರ್ಜಿ ಇರುವವರಿಗೆ ಇದು ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಟ್ಟೆ ನೋವು, ದದ್ದು, ಉಬ್ಬರ, ಅಲರ್ಜಿ ರೀತಿ ಪ್ರತಿಕ್ರಿಯೆಗಳು ಸಂಭವಿಸಬಹುದು.
ಜರ್ಮನಿಯ ಸ್ಪಟ್‌ಗಾರ್ಟ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ, ಮಧ್ಯಪ್ರಾಚ್ಯದಿಂದ ಆಮದು ಆಗುವ ದುಬೈ ಚಾಕೊಲೇಟ್‌ಗಳಲ್ಲಿ ವಿಷಕಾರಿ ದ್ರವ್ಯಗಳು ಪತ್ತೆಯಾಗಿವೆ. ಪಾಮ್ ಎಣ್ಣೆ, ಗ್ರೀನ್ ಫುಡ್ ಕಲರ್ ಹಾಗೂ ಕೆಮಿಕಲ್ ಕಾಂಪೌಂಡ್ಸ್‌ಗಳಿಂದ ಕೂಡಿರುವ ಈ ಉತ್ಪನ್ನಗಳು ಹೃದಯ ಕಾಯಿಲೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದೆಂಬ ಆತಂಕವಿದೆ.
ಪಾಮ್ ಎಣ್ಣೆಯಲ್ಲಿ ಕಂಡುಬರುವ 3-MCPD ಎಂಬ ಅಂಶವು ಕ್ಯಾನ್ಸರ್ ಕಾರಕವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಪ್ಯಾಕೇಜಿಂಗ್ ಮತ್ತು ತಾಪಮಾನದ ಪರಿಣಾಮವಾಗಿ ಚಾಕೊಲೇಟ್‌ನಲ್ಲಿ ಕಾಣಿಸಿಕೊಳ್ಳಬಹುದು.
ಹುಡುಕಾಟದಲ್ಲಿ, ಈ ಚಾಕೊಲೇಟ್‌ಗಳಲ್ಲಿ ಸಾಲ್ಮನೆಲ್ಲಾ ಬ್ಯಾಕ್ಟೀರಿಯಾ ಕೂಡ ಕಂಡುಬಂದಿದೆ. ಇದರಿಂದ ಜ್ವರ, ಅತಿಸಾರ, ಹೊಟ್ಟೆ ನೋವುಗಳಾದ ಇಂತಹ ಗಂಭೀರ ಸಮಸ್ಯೆಗಳು ಉಂಟಾಗಿವೆ. ಕೆಲವು ಪ್ರಕರಣಗಳಲ್ಲಿ ಮಲಬದ್ಧತೆ ಮತ್ತು ವಾಕರಿಕೆ ಕೂಡ ವರದಿಯಾಗಿದೆ. ಈ ರೀತಿ ಜೀರ್ಣಾಂಗಗಳ ಅಸ್ವಸ್ಥತೆ ಗಂಭೀರ ಸಮಸ್ಯೆಗೆ ದಾರಿ ಮಾಡಬಹುದು.
Dubai Chocolate ತಯಾರಕರಾಗಿ ಪ್ರಸಿದ್ಧಿ ಪಡೆದ ಸಾರಾ ಹಮೌದಾ ಬ್ರಿಟಿಷ್-ಈಜಿಪ್ಟಿಯನ್ ಮೂಲದ ದುಬೈನಲ್ಲಿ ನೆಲೆಯೂರಿದ ಉದ್ಯಮಿ. ತನ್ನ ಗರ್ಭಧಾರಣಾ ಸಮಯದಲ್ಲಿ ಕ್ರೇವಿಂಗ್ ನಿಂಪಿಸಲು ಆರಂಭಿಸಿದ ಈ ಪ್ರಯೋಗವೇ ಇಂದು ಜಗತ್ತಿನಲ್ಲಿ ಟ್ರೆಂಡ್ ಆಗಿದೆ. Original Dubai Chocolate ಎಲ್ಲೆಡೆ ಖ್ಯಾತಿ ಪಡೆದ ಕಾರಣ, ಹಲವರು ಇದರ ನಕಲಿ ಆವೃತ್ತಿಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲಾ ವೈರಲ್ ಆಹಾರಗಳೂ ಸುರಕ್ಷಿತವಲ್ಲ. ದುಬೈ ಚಾಕೊಲೇಟ್ ಹಾವಳಿ ಬೆಳೆದಂತೆ, ಅದರ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅವಶ್ಯಕ. ಆರೋಗ್ಯವನ್ನು ಹಾಳುಮಾಡುವ ಮೊದಲು ತಜ್ಞರ ಸಲಹೆ, ಉತ್ಪನ್ನದ ಮೂಲ ಮತ್ತು ಶುದ್ಧತೆ ಪರಿಶೀಲಿಸುವುದು ಅತ್ಯಂತ ಅಗತ್ಯ.