ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದ ಮರ್ರಾ ಪರ್ವತಗಳಲ್ಲಿ ಸಂಭವಿಸಿದ ಭಯಾನಕ ಭೂಕುಸಿತ ತಾರಾಸಿನ್ ಗ್ರಾಮವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ. ಈ ದುರಂತದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ ಎಂದು ಪ್ರದೇಶವನ್ನು ನಿಯಂತ್ರಿಸುವ ಸುಡಾನ್ ವಿಮೋಚನಾ ಸೇನೆ (SLF) ಸೋಮವಾರ ತಡರಾತ್ರಿ ತಿಳಿಸಿದೆ.
ತಾರಾಸಿನ್ ಈ ಗ್ರಾಮವು ಭೂಕುಸಿತದ ರಭಸಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಯಿತು. ಭೂಕುಸಿತದ ತೀವ್ರತೆಯು ಗ್ರಾಮದ ಮನೆಗಳು, ರಸ್ತೆಗಳು, ಮತ್ತು ಕೃಷಿ ಭೂಮಿಯನ್ನು ಸಂಪೂರ್ಣವಾಗಿ ನಾಶಪಡಿಸಿತ್ತು.
ಸುಡಾನ್ ವಿಮೋಚನಾ ಸೇನೆಯ ಪ್ರಕಾರ, ಈ ಭೂಕುಸಿತವು ದಿನಗಟ್ಟಲೆ ಸಂಭವಿಸಿದ ಭಾರೀ ಮಳೆಯಿಂದ ಉಂಟಾಗಿರಬಹುದು. ಆರಂಭಿಕ ವರದಿಗಳ ಪ್ರಕಾರ, ಗ್ರಾಮದ ಎಲ್ಲಾ ನಿವಾಸಿಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬ ಬದುಕುಳಿದವನಿಗೆ ತೀವ್ರ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ದುರಂತದ ನಂತರ, ಸುಡಾನ್ ವಿಮೋಚನಾ ಸೇನೆಯು ತುರ್ತು ಸಹಾಯಕ್ಕಾಗಿ ವಿಶ್ವಸಂಸ್ಥೆ (UN) ಮತ್ತು ಇತರ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳಿಗೆ ಮನವಿ ಮಾಡಿದೆ.