ಉಕ್ರೇನ್‌ನ ರಾಜಧಾನಿ ಕೈವ್‌ನ ಬಳಿಯ ಪೆರ್ಚೆ ಪ್ರದೇಶದ ಮೇಲೆ ರಷ್ಯಾ ಭಾನುವಾರ ತೀವ್ರ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ರಾಜಧಾನಿಯ ಆಡಳಿತ ಕಟ್ಟಡದ ಮೇಲ್ಬಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೈವ್‌ನ ಮಿಲಿಟರಿ ಆಡಳಿತದ ಮುಖ್ಯಸ್ಥ ತೈಮೂರ್ ಟ್ಕಾಚೆಂಕೊ ತಿಳಿಸಿದ್ದಾರೆ. ಈ ದಾಳಿಯಲ್ಲಿ ಶಿಶುವೊಂದು ಸೇರಿದಂತೆ ಮೂವರು ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾದ ಡ್ರೋನ್‌ಗಳ ಮಳೆಗೆ ಒಳಗಾದ ನಂತರ ಕ್ಷಿಪಣಿ ದಾಳಿಗಳು ಆರಂಭವಾದವು ಎಂದು ಕೈವ್‌ನ ಮೇಯರ್ ವಿಟಾಲಿ ಕ್ಲಿಟ್ರೋ ಹೇಳಿದ್ದಾರೆ.
ವಸತಿ ಕಟ್ಟಡಗಳಿಗೆ ಭಾರೀ ಹಾನಿ
ಡಾರ್ನಿಟ್ಟಿ ಪ್ರದೇಶದಲ್ಲಿ 16 ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡವೊಂದರ ನಾಲ್ಕು ಅಂತಸ್ತುಗಳಲ್ಲಿ ಎರಡು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಇದರ ಜೊತೆಗೆ, ಎರಡು 9 ಅಂತಸ್ತಿನ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಮಹಡಿಗಳು ಭಾಗಶಃ ಕುಸಿದಿವೆ. ಯುಕ್ರೇನ್‌ನ ರಾಜ್ಯ ತುರ್ತು ಸೇವಾ ಅಧಿಕಾರಿಗಳ ಪ್ರಕಾರ, ಈ ಕಟ್ಟಡಗಳ ಮುಂಭಾಗದ ಗೋಡೆಗಳು ಸಂಪೂರ್ಣವಾಗಿ ಕುಸಿದಿವೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಯುಕ್ರೇನ್ ಅಧಿಕಾರಿಗಳು ಈ ದಾಳಿಯ ದೃಶ್ಯಗಳನ್ನು ಹಂಚಿಕೊಂಡಿದ್ದು, ಅಪಾರ್ಟ್‌ಮೆಂಟ್‌ಗಳಿಂದ ದಟ್ಟವಾದ ಹೊಗೆ ಹೊರಬರುವ ದೃಶ್ಯಗಳು ಕಂಡುಬಂದಿವೆ.
ಉಕ್ರೇನ್‌ನ ನಗರವಾದ ಕ್ರೆಮೆನ್‌ಚುಕ್‌ನಲ್ಲಿ ಡಜನ್‌ಗಟ್ಟಲೆ ಸ್ಪೋಟಗಳು ಸಂಭವಿಸಿವೆ. ಈ ದಾಳಿಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ರಷ್ಯಾದ ಈ ದಾಳಿಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಎಂದು ಟ್ಕಾಚೆಂಕೊ ಆರೋಪಿಸಿದ್ದಾರೆ. ರಾಜಧಾನಿಯ ಹಲವು ಕಟ್ಟಡಗಳು, ಸರ್ಕಾರಿ ಕಚೇರಿಗಳು ಸೇರಿದಂತೆ, ಬೆಂಕಿಗೆ ಆಹುತಿಯಾಗಿವೆ.
2022ರ ಫೆಬ್ರವರಿಯಲ್ಲಿ ರಷ್ಯಾ ಯುಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಆರಂಭಿಸಿತ್ತು. ಈ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ರಷ್ಯಾದ ದಾಳಿಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಎಂದು ಯುಕ್ರೇನ್ ಸತತವಾಗಿ ಆರೋಪಿಸುತ್ತಿದೆ. ಈ ಇತ್ತೀಚಿನ ದಾಳಿಗಳು ಉಕ್ರೇನ್‌ನ ನಾಗರಿಕ ಜನತೆಗೆ ಮತ್ತಷ್ಟು ಭೀತಿಯನ್ನುಂಟುಮಾಡಿವೆ.
 
			
 
					




 
                             
                             
                             
                             
                            