ಭಾರತದ ಮಿಂಚಿನ ದಾಳಿಗೆ ಪಾಕ್‌ ಪ್ರಧಾನಿ ರಹಸ್ಯ ತಾಣಕ್ಕೆ ಶಿಫ್ಟ್!

Untitled design (98)

ಇಸ್ಲಾಮಾಬಾದ್: ಭಾರತದ ದಾಳಿಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭಾರತ ನಡೆಸಿದ ದಾಳಿಯಿಂದ ಇಡೀ ದೇಶವೇ ಕಂಗಾಲಾಗಿದೆ. ಈ ದಾಳಿಯ ತೀವ್ರತೆಗೆ ಭಯಭೀತರಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ರಹಸ್ಯ ಅಡಗುದಾಣಕ್ಕೆ ಶಿಫ್ಟ್ ಆಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಲಭ್ಯವಾಗಿದೆ. ವರದಿಗಳ ಪ್ರಕಾರ, ಈ ದಾಳಿಯು ಪಾಕ್ ಪ್ರಧಾನಿಯ ಮನೆಯಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ ನಡೆದಿದೆ. ಇದರಿಂದ ಇಸ್ಲಾಮಾಬಾದ್‌ನಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಭಾರತದ ಈ ದಾಳಿಯು ಪಾಕಿಸ್ತಾನದ ರಾಜಧಾನಿಯ ಹೃದಯಭಾಗದಲ್ಲಿ ನಡೆದಿದ್ದು, ಶೆಹಬಾಜ್ ಶರೀಫ್ ಅವರ ನಿವಾಸದ ಸಮೀಪದಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ. ಈ ಘಟನೆಯಿಂದ ಪಾಕ್ ಸರ್ಕಾರವು ತೀವ್ರ ಆಘಾತಕ್ಕೊಳಗಾಗಿದ್ದು, ದೇಶದಲ್ಲಿ ದಿಕ್ಕು ತೋಚದ ಪರಿಸ್ಥಿತಿ ಉಂಟಾಗಿದೆ. ಭಾರತದ ಈ ದಾಳಿಯು ಕೇವಲ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ಪಾಕಿಸ್ತಾನದ ಹಲವು ನಗರಗಳು ಕತ್ತಲಿನಲ್ಲಿ ಮುಳುಗಿವೆ. ಕೆಲವು ಪ್ರಮುಖ ನಗರಗಳಲ್ಲಿ ವಿದ್ಯುತ್ ಸಂಪರ್ಕವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ಪಾಕಿಸ್ತಾನದ ಸ್ಥಳೀಯ ಆಡಳಿತವು ತಮ್ಮ ನಾಗರಿಕರಿಗೆ ರಸ್ತೆಗಳಿಗೆ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದೇ ವೇಳೆ, ಭಾರತೀಯ ಸೇನೆಯು ಪಾಕಿಸ್ತಾನದ ಒಬ್ಬ ಪೈಲಟ್‌ನನ್ನು ವಶಕ್ಕೆ ಪಡೆದಿರುವ ಮಾಹಿತಿಯೂ ಬೆಳಕಿಗೆ ಬಂದಿದೆ..

ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ಸಂಬಂಧಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ದಾಳಿಯಿಂದ ಪಾಕಿಸ್ತಾನದ ಸೇನಾ ನಿಯಂತ್ರಣದ ಕೇಂದ್ರಗಳಿಗೂ ಧಕ್ಕೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಈ ದಾಳಿಯಿಂದ ಪಾಕ್ ಸರ್ಕಾರವು ತನ್ನ ರಕ್ಷಣಾ ವ್ಯವಸ್ಥೆಯನ್ನು ಪುನರ್‌ಪರಿಶೀಲನೆ ಮಾಡುವ ಸಾಧ್ಯತೆ ಇದೆ.

ಭಾರತದ ಈ ದಾಳಿಯು ಕೇವಲ ಶೆಹಬಾಜ್ ಶರೀಫ್‌ರ ನಿವಾಸದ ಸಮೀಪದಲ್ಲಿ ನಡೆದಿರುವುದಷ್ಟೇ ಅಲ್ಲ, ಇದು ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.

Exit mobile version