ಚೀನಾ ದೇಶವು ಹೊಸ ರೀತಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ತಯಾರಿಸಿದೆ. ಇದು ದೇಶವನ್ನು ಕ್ಷಿಪಣಿ ದಾಳಿಗಳಿಂದ ರಕ್ಷಿಸುವ ಒಂದು ಶಕ್ತಿಶಾಲಿ ವ್ಯವಸ್ಥೆಯಾಗಿದೆ. ಇಸ್ರೇಲ್ ದೇಶದ ಐರನ್ ಡೋಮ್, ಭಾರತ & ರಷ್ಯಾ ದೇಶಗಳಲ್ಲಿ ಇರುವ ಎಸ್-400 ಹಾಗೂ ಅಮೆರಿಕದ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗಿಂತಲೂ ನೂರು ಪಟ್ಟು ಶಕ್ತಿಶಾಲಿ ಹಾಗೂ ಪರಿಣಾಮಕಾರಿ ವ್ಯವಸ್ಥೆ ಅಂತಾನೇ ಚೀನಾದ ಈ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಣ್ಣಿಸಲಾಗ್ತಿದೆ.
ಚೀನಾ ಬತ್ತಳಿಕೆಗೆ ಹೊಸ ಅಸ್ತ್ರ..! ಏನಿದು..?
ಅಭಿವೃದ್ಧಿ: ಪ್ರಾಯೋಗಿಕ ವ್ಯವಸ್ಥೆ ತಯಾರಾಗಿದೆ ಎಂದು ಚೀನಾ ಘೋಷಣೆ
ಸಾಮರ್ಥ್ಯ: 1,000 ಕ್ಷಿಪಣಿಗಳನ್ನು ಒಂದೇ ಸಮಯದಲ್ಲಿ ಗುರುತಿಸಬಲ್ಲ ಸಾಮರ್ಥ್ಯ..!
ತಂತ್ರಜ್ಞಾನ: ಬಹುತೇಕ ಎಲ್ಲಾ ಅತಿ ವೇಗದ ಕ್ಷಿಪಣಿಗಳನ್ನೂ ಭೇದಿಸುವ ಸಾಮರ್ಥ್ಯ..!
ವ್ಯವಸ್ಥೆಯ ವಿಶೇಷತೆಗಳು
1.ಬಹುಮುಖಿ ಸಂವೇದಕಗಳು
– ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಬಾಹ್ಯಾಕಾಶದ ಉಪಗ್ರಹಗಳ ಬಳಕೆ
– ಜೊತೆಯಲ್ಲೇ ಭೂಮಿಯ ರಡಾರ್ ವ್ಯವಸ್ಥೆಗಳ ಬಳಕೆ
– ಏಕಕಾಲಕ್ಕೆ ಸಮುದ್ರ ಮತ್ತು ವಾಯು ಸೇನೆಯ ಉಪಕರಣಗಳ ಬಳಕೆ
2. ಅತಿ ವೇಗವಾಗಿ ಒಂದಾಗಿ ಕಾರ್ಯನಿರ್ವಹಿಸುತ್ತವೆ ಎಲ್ಲ ಉಪಕರಣಗಳು..!
– ಯಾವುದೇ ದೇಶದಿಂದ ಉಡಾಯಿಸುವ ಕ್ಷಿಪಣಿಗಳ ದಾಳಿ ಸಾಧ್ಯತೆಗಳನ್ನು ಕೆಲವೇ ನಿಮಿಷಗಳಲ್ಲಿ ಗುರ್ತಿಸುವ ಸಾಮರ್ಥ್ಯ
– ತಕ್ಷಣವೇ ಶತ್ರು ದೇಶಗಳ ಕ್ಷಿಪಣಿಗಳ ಮೇಲೆ ಪ್ರತಿದಾಳಿ ಮಾಡುವ ಸಾಮರ್ಥ್ಯ
– ನಕಲಿ ಕ್ಷಿಪಣಿಗಳು, ಹುಸಿ ಬೆದರಿಕೆಗಳನ್ನೂ ಸಮರ್ಥವಾಗಿ ಗುರುತಿಸುವ ತಂತ್ರಜ್ಞಾನ..!
ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬೆಳೆದು ಬಂದ ಹಾದಿ..
– 1990ರ ದಶಕದಿಂದಲೇ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಗಾಗಿ ಸಂಶೋಧನೆ ಪ್ರಾರಂಭ
– 2010ರಲ್ಲಿ ಮೊದಲ ಪರೀಕ್ಷೆ
– 2025 ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಪ್ರದರ್ಶನ
– 6 ವಿವಿಧ ರೀತಿಯ ಕ್ಷಿಪಣಿ ನಾಶಕ ಉಪಕರಣಗಳ ವಿನ್ಯಾಸ
ಚೀನಾದ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ಜಾಗತಿಕವಾಗಿ ಎದುರಾಗುವ ಪರಿಣಾಮಗಳೇನು..?
1. ಸೈನ್ಯಿಕ ಸ್ಪರ್ಧೆ:
– ಅಮೆರಿಕ ಮತ್ತು ಚೀನಾ ನಡುವೆ ಹೊಸ ರೀತಿಯ ಪೈಪೋಟಿ ಏರ್ಪಡಬಹುದು
– ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಮೇಲುಗೈ ಸಾಧಿಸಲು ತಿಕ್ಕಾಟ ಆರಂಭ ಆಗಬಹುದು
– ಹೊಸ ರೀತಿಯ ಅಸ್ತ್ರ ಹೊಂದಿರುವ ದೇಶಗಳು ವಿಶ್ವ ಶಾಂತಿಗೇ ಸವಾಲೊಡ್ಡಬಹುದು..!
2. ಆರ್ಥಿಕ ಪರಿಣಾಮ:
– ಚೀನಾದ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅತಿ ಹೆಚ್ಚು ವೆಚ್ಚದ ಪ್ರಾಜೆಕ್ಟ್..!
– ಈ ವ್ಯವಸ್ಥೆಯ ಸಂಶೋಧನೆ, ಅಭಿವೃದ್ಧಿಗೆ ಭಾರೀ ಪ್ರಮಾಣದ ಹಣ ಬೇಕು..!
– ಬೇರೆ ದೇಶಗಳು ಇದೇ ಮಾದರಿಯ ವ್ಯವಸ್ಥೆ ನಿರ್ಮಿಸಲು ಮುಂದಾದರೆ ಆರ್ಥಿಕ ಒತ್ತಡದ ಅಪಾಯ
ಚೀನಾ V/S ಅಮೆರಿಕ: ಹೇಗಿದೆ ಎರಡೂ ದೇಶಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆ..?
ವಿಷಯ | ಚೀನಾ ವ್ಯವಸ್ಥೆ | ಅಮೆರಿಕ ವ್ಯವಸ್ಥೆ |
ಕ್ಷಿಪಣಿ ಗುರುತಿಸುವಿಕೆ | ಏಕಕಾಲಕ್ಕೆ 1,000 ಕ್ಷಿಪಣಿಗಳನ್ನು ಗುರ್ತಿಸುತ್ತದೆ | ಏಕಕಾಲಕ್ಕೆ 500 ಕ್ಷಿಪಣಿಗಳನ್ನು ಗುರ್ತಿಸುತ್ತದೆ |
ಸಂವೇದಕಗಳು | ಎಲ್ಲ ರೀತಿಯ ಅಪಾಯ ಸಾಧ್ಯತೆಗಳ ಗುರ್ತಿಸುವ ಸಾಮರ್ಥ್ಯ | ಕೆಲವು ರೀತಿಯ ಅಪಾಯಗಳನ್ನು ಮಾತ್ರ ಗುರ್ತಿಸುವ ಸಾಮರ್ಥ್ಯ |
ವೆಚ್ಚ | ಚೀನಾ ದೇಶ ಬಹಿರಂಗ ಮಾಡಿಲ್ಲ | 175 ಬಿಲಿಯನ್ ಡಾಲರ್ |
ಸ್ಥಿತಿಗತಿ | ಪರೀಕ್ಷೆ ಮುಗಿದಿದೆ | ಯೋಜನಾ ಹಂತದಲ್ಲಿದೆ |
ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಭವಿಷ್ಯ ಏನು..?
1. ಸುಧಾರಣೆಗಳು:
– ಈ ವ್ಯವಸ್ಥೆಗೆ AI ತಂತ್ರಜ್ಞಾನವನ್ನು ಇನ್ನಷ್ಟು ಬಳಕೆ ಮಾಡಿಕೊಳ್ಳಬಹುದು
– ಸ್ವಯಂಚಾಲಿತವಾಗಿ ತಾನೇ ತಾನಾಗಿ ಈ ವ್ಯವಸ್ಥೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಪಡೆಯಬಹುದು
– ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಇನ್ನಷ್ಟು ವೇಗ ಆಗಬಹುದು.
2. ಸವಾಲುಗಳು:
– ತಾಂತ್ರಿಕವಾಗಿ ಈ ವ್ಯವಸ್ಥೆ ಜಗತ್ತಿಗೇ ದೊಡ್ಡ ಸಮಸ್ಯೆ ತಂದೊಡ್ಡಬಹುದು
– ಈ ವ್ಯವಸ್ಥೆಯನ್ನು ಹೊಂದುವ ಪೈಪೋಟಿ ನಡೆಸಿ ಹಲವು ದೇಶಗಳು ಹಣಕಾಸಿನ ತೊಂದರೆ ಎದುರಿಸಬಹುದು
– ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಬಹುದು
ಒಟ್ಟಾರೆ ಹೇಳೋದಾದರೆ ಚೀನಾದ ಈ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ, ಆ ದೇಶದ ಸೈನ್ಯದ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆದರೆ ಈ ವ್ಯವಸ್ಥೆಯಿಂದ ವಿಶ್ವ ಶಾಂತಿಗೆ ಹೊಸ ಸವಾಲು ಉದ್ಭವಿಸಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಹೇಗೆ ಬೆಳೆಯುತ್ತದೆ, ಬಳಕೆಯಾಗುತ್ತದೆ ಹಾಗೂ ಜಾಗತಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.