ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕನ್ ಕೌಂಟಿ ನ್ಯಾಯಾಧೀಶ ಕೆಪಿ ಜಾರ್ಜ್ ಅವರನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ.
ಹೌದು ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕನ್ ಕೌಂಟಿ ನ್ಯಾಯಾಧೀಶರನ್ನು ಬಂಧಿಸಲಾಗಿದೆ. ಪೋರ್ಟ್ ಬೆಂಡ್ ಕೌಂಟಿ ಜಡ್ಜ್ ಕೆಪಿ ಜಾರ್ಜ್ ಬಂಧಿತ ನ್ಯಾಯಾಧೀಶರು. 2018 ರಿಂದ ಕೌಂಟಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಕೆಪಿ ಜಾರ್ಜ್ ಅವರನ್ನು ಶುಕ್ರವಾರ(ಏ4) ಮಧ್ಯಾಹ್ನ ವೇಳೆ ಬಂಧಿಸಿ ಕೌಂಟಿ ಜೈಲಿಗೆ ಕಳುಹಿಸಲಾಗಿತ್ತು. ನಂತರ $20,000 ಡಾಲರ್ (ಎಂದರೆ ಭಾರತದ 17,10,627 ಲಕ್ಷ) ಶ್ಯೂರಿಟಿ ಪಡೆದು ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು.
ಪ್ರಮುಖ ಚುನಾಯಿತ ಅಧಿಕಾರಿಯೂ ಆಗಿದ್ದ ಕೆ ಪಿ ಜಾರ್ಜ್ ಅವರನ್ನು ಅಕ್ರಮ ಹಣ ವರ್ಗಾವಣೆ ಹಾಗೂ ವೈರ್ ವಂಚನೆ, ಪ್ರಚಾರ ಹಣಕಾಸು ವರದಿಯ ಸುಳ್ಳು ಆರೋಪಗಳ ಕಾರಣಕ್ಕೆ ಬಂಧಿಸಲಾಗಿದೆ. ಆದರೆ ತಮ್ಮ ವಿರುದ್ಧ ಹೊರಿಸಲಾಗಿರುವ ಎಲ್ಲಾ ಆರೋಪಗಳನ್ನು ಕೆಪಿ. ಜಾರ್ಜ್ ನಿರಾಕರಿಸಿದ್ದಾರೆ. ಈ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯದ ದಾಖಲೆಗಳು ಮತ್ತು ಫೋರ್ಟ್ ಬೆಂಡ್ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಾರ ಜಾರ್ಜ್ ಅವರು $30,000 ರಿಂದ $150,000 ವರೆಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಈ ಹೊಸ ಆರೋಪಗಳು 2023 ರ ಪ್ರತ್ಯೇಕ ದೋಷಾರೋಪಣೆಗೆ ಸಂಬಂಧಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದರಲ್ಲಿ ಜಾರ್ಜ್ ಮತ್ತು ಮಾಜಿ ಮುಖ್ಯಸ್ಥ ತರಲ್ ಪಟೇಲ್ ಅವರು ಜಾರ್ಜ್ ಅವರ 2022 ರ ಅಭಿಯಾನದ ವಿರುದ್ಧ ವಂಚನೀಯ ಸಾಮಾಜಿಕ ಜಾಲತಾಣ ಖಾತೆಗಳನ್ನು ರಚಿಸುವ ಮೂಲಕ ನಕಲಿ ಜನಾಂಗೀಯ ದಾಳಿಗಳನ್ನು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಮ್ಮ ಕಚೇರಿಯು ನಮ್ಮ ಸಾರ್ವಜನಿಕರಿಗೆ ಅರ್ಹವಾದ ಸಮಗ್ರತೆ ಮತ್ತು ಎಲ್ಲಾ ಪ್ರಾಸಿಕ್ಯೂಟರ್‌ಗಳು ಪ್ರಮಾಣವಚನ ಸ್ವೀಕರಿಸುವಂತಹ ನೈತಿಕತೆಗೆ ಬದ್ಧವಾಗಿದೆ ಎಂದು ಡಿಎ ಕಚೇರಿ ಈ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದೆ. ಇತ್ತ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ಜಾರ್ಜ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು. ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ನನ್ನ ಮುಗ್ಧತೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿರುವುದು ವರದಿಯಾಗಿದೆ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54





