• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಕಿಮ್ ಜಾಂಗ್ ಉನ್‌ಗೆ ಪ್ರಾಣಭಯ : ಏನೇನೆಲ್ಲ ಮುಂಜಾಗ್ರತೆ ತೆಗೆದುಕೊಳ್ತಾರೆ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
September 4, 2025 - 1:17 pm
in ವಿದೇಶ
0 0
0
ಬೈಕ್, ಕಾರು, ಟಿವಿ, (7)

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಬಗ್ಗೆ ಬಗೆದಷ್ಟೂ ಮುಗಿಯದ ಕುತೂಹಲದ ಸಂಗತಿಗಳಿವೆ. ಈ ವ್ಯಕ್ತಿ ಹೇಗೆಂದರೆ ಪ್ರತಿಕ್ಷಣವೂ ಪ್ರಾಣಭಯದಿಂದ ಬಳಲುವ ವ್ಯಕ್ತಿ. ಮೊನ್ನೆ ಮೊನ್ನೆ ತಾನೇ ಕಿಮ್ ಜಾಂಗ್ ಉನ್ ಚೀನಾಗೆ ಭೇಟಿ ಕೊಟ್ಟಿದ್ದರು. ಬೀಜಿಂಗ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಬಳಿಕ ಕಿಮ್ ಅಂಗರಕ್ಷಕರು ಕಿಮ್ ಕುಳಿತಿದ್ದ ಜಾಗದಲ್ಲಿ ಬೆವರನ್ನೂ ಬಿಡದಂತೆ ಸ್ಯಾನಿಟೈಸ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

ಕಿಮ್ ನೀರು ಕುಡಿದ ನೀರಿನ ಗ್ಲಾಸ್, ಕುಳಿತಿದ್ದ ಕುರ್ಚಿಯ ಜಾಗ, ಓಡಾಡಿದ್ದ ಜಾಗ, ಟಚ್ ಮಾಡಿದ್ದ ಟೇಬಲ್ ಕವರ್, ಹೊದಿಕೆ, ಟೇಬಲ್ ಎಲ್ಲವನ್ನೂ ಕ್ಲೀನ್ ಮಾಡಿದ್ದಾರೆ. ಅಂದರೆ, ಈ ಜಾಗದಲ್ಲಿ ಕಿಮ್ ಇದ್ದರು ಎಂಬುದರ ಸೂಕ್ಷ್ಮ ಸಾಕ್ಷಿಗಳೂ ಸಿಕ್ಕದಂತೆ ಎಲ್ಲವನ್ನೂ ಸ್ಯಾನಿಟೈಸ್ ಮಾಡಿದ್ದಾರೆ.

RelatedPosts

ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅ*ತ್ಯಾಚಾ*ರ

ರಷ್ಯಾದ ಕಿರಿಶಿ ತೈಲ ಘಟಕದ ಮೇಲೆ ಉಕ್ರೇನ್‌ರ 361 ಡ್ರೋನ್ ದಾಳಿ

ಆಪರೇಷನ್ ಮಧ್ಯದಲ್ಲೇ ರೋಗಿ ಬಿಟ್ಟು ನರ್ಸ್ ಜೊತೆ ಸೆ**ಕ್ಸ್ ಮಾಡಿದ ವೈದ್ಯ

ರಷ್ಯಾದಲ್ಲಿ 7.4 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

ADVERTISEMENT
ADVERTISEMENT

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಅವರ ಈ ವರ್ತನೆ ಹೊಸದೇನೂ ಅಲ್ಲ. ಉ.ಕೊರಿಯಾ ಬಳಿ ಅತ್ಯಾಧುನಿಕ ವಿಮಾನಗಳಿಲ್ಲ. ಜೊತೆಗೆ ಕಿಮ್ಗೆ ವಿಮಾನ ಪ್ರಯಾಣ ಭಯ. ಹೀಗಾಗಿ 2011ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇಶದೊಳಗೆ ದೂರ ಪ್ರದೇಶಕ್ಕೆ ಸಂಚರಿಸಲು, ಮಿತ್ರ ದೇಶಗಳಾದ ರಷ್ಯಾ, ಚೀನಾ, ವಿಯೆಟ್ನಾಂಗೆ ಸಂಚರಿಸಲು ಅವರು ರೈಲನ್ನೇ ಬಳಸುತ್ತಾರೆ. ಕಾರಣ ಇಷ್ಟೇ. ವಿಮಾನದಲ್ಲಿ ಪ್ರಾಣ ಭಯ ಹೆಚ್ಚು. ಶತ್ರುಗಳು ಹೊಡೆಯಬಹುದು ಎಂಬ ಆತಂಕ. ಇದೆಲ್ಲ ಕಾರಣದಿಂದಾಗಿ ಕಿಮ್, ಎಷ್ಟೇ ದೂರ ಇರಲಿ, ರೈಲು ಪ್ರಯಾಣದಲ್ಲೇ ಪ್ರಯಾಣಿಸುತ್ತಾರೆ.

ಕಿಮ್ ಜಾಂಗ್ ಉನ್ ಅವರಿಗೆ ಅವರದ್ದೇ ಆದ ಪ್ರತ್ಯೇಕ ಬುಲೆಟ್ ಪ್ರೂಫ್ ಟ್ರೈನ್ ಇದೆ. ಆ ರೈಲಿನಲ್ಲೇ ಪ್ರಯಾಣ ಮಾಡ್ತಾರೆ. ಈ ಬಾರಿಯೂ ಅಷ್ಟೇ, ಉತ್ತರ ಕೊರಿಯಾದ ಪ್ಯೋಂಗ್ಯಾಂಗ್‌ನಿಂದ ಬೀಜಿಂಗ್‌ಗೆ ರೈಲಿನಲ್ಲೇ ಪ್ರಯಾಣ ಮಾಡಿದ್ಧಾರೆ. ಅದೂ ಕೂಡಾ ಸುಮಾರು 1000 ಕಿ.ಮೀ. ದೂರದ ಪ್ರಯಾಣ. ಈ ಹಿಂದೆ ರಷ್ಯಾಗೆ ಹೋದಾಗ, ಸಿಂಗಾಪುರಕ್ಕೆ ಹೋದಾಗಲೂ ಅಷ್ಟೇ, ಎಷ್ಟೇ ದೂರವಾಗಿದ್ದರೂ ರೈಲಿನಲ್ಲೇ ಹೋಗುತ್ತಾರೆ ಕಿಮ್ ಜಾಂಗ್ ಉನ್.

2023ರಲ್ಲಿ ರಷ್ಯಾಕ್ಕೆ ಕೂಡಾ ಕಿಮ್ ರೈಲಲ್ಲೇ ಹೋಗಿದ್ದರು. ಬಳಿಕ ಡೊನಾಲ್ಡ್ ಟ್ರಂಪ್ರನ್ನು ವಿಯೆಟ್ನಾಂನಲ್ಲಿ ಭೇಟಿ ಮಾಡಲು ರೈಲಿನಲ್ಲೇ 60 ಗಂಟೆ ಪ್ರಯಾಣ ಕೈಗೊಂಡಿದ್ದರು. ಅದಕ್ಕೂ ಮುನ್ನ 2018ರಲ್ಲಿ ಸಿಂಗಾಪುರದಲ್ಲಿ ಟ್ರಂಪ್ ಭೇಟಿಗೆ ಚೀನಾ ನೀಡಿದ್ದ ವಿಮಾನದಲ್ಲಿ ತೆರಳಿದ್ದರು.

ಕಿಮ್ ಜಾಂಗ್ ಉನ್ ಅವರಿಗೆ ರಷ್ಯಾ ಮತ್ತು ಚೀನಾ ಎರಡೂ ಮಿತ್ರ ರಾಷ್ಟ್ರಗಳೇ. ಆದರೆ, ವೈಯಕ್ತಿಕ ಭದ್ರತೆ ವಿಚಾರದಲ್ಲಿ ಆತ ಮಿತ್ರರನ್ನೂ ನಂಬುವುದಿಲ್ಲ. ಅಲ್ಲದೆ ಎರಡೂ ದೇಶಗಳ ಸೀಕ್ರೆಟ್ ಏಜೆಂಟ್‌ಗಳ ಬಗ್ಗೆ ಕಿಮ್ ಜಾಂಗ್‌ ಉನ್‌ಗೆ ಭಯವೂ ಇದೆ.

ಕಿಮ್ ಜಾಂಗ್ ಉನ್ ಎಲ್ಲಿಗೇ ಹೋಗಲಿ, ಪ್ರತ್ಯೇಕ ಟಾಯ್ಲೆಟ್, ಬಾತ್ ರೂಂ ವ್ಯವಸ್ಥೆ ಇರುತ್ತದೆ. ನೀರನ್ನೂ ಕೂಡಾ ಆತ ತನ್ನ ದೇಶದ್ದೇ ಬಳಸುವ ಕಿಮ್‌ಗೆ, ನೀರಿನಲ್ಲಿ ವಿಷಪ್ರಾಶನ ಮಾಡುವ ಭಯವೂ ಇದೆ. ಅಲ್ಲದೆ ಡಿಎನ್‌ಎ ಗುರುತು ಸಿಗದಂತೆ ಮೊಬೈಲ್ ಟಾಯ್ಲೆಟ್ ಇಟ್ಟುಕೊಂಡಿರುವ ಕಿಮ್, ತನ್ನ ದೇಹದ ತ್ಯಾಜ್ಯವನ್ನೂ ಕೂಡಾ ತನ್ನದೇ ದೇಶಕ್ಕೆ ತೆಗೆದುಕೊಂಡು ಹೋಗಿ ನಾಶ ಮಾಡುವ ಪದ್ಧತಿ ಅಳವಡಿಸಿಕೊಂಡಿದ್ಧಾರೆ. ಕಾರಣ ಸರಳ, ಎಲ್ಲಿಯೂ ಕೂಡಾ ತನ್ನ ಬಯಾಲಾಜಿಕಲ್ ಫುಟ್ ಪ್ರಿಂಟ್ ಇರಬಾರದು ಎನ್ನುವುದು.

ಟಾಯ್ಲೆಟ್ ತ್ಯಾಜ್ಯವನ್ನಷ್ಟೇ ಅಲ್ಲ, ಕಿಮ್ ಜಾಂಗ್ ಉನ್ ಸಿಗರೇಟ್ ಸೇದುತ್ತಾರೆ. ಆ ಸಿಗರೇಟಿನ ಬಟ್ಸ್ ಮತ್ತು ಬೂದಿಯನ್ನೂ ಕೂಡಾ ಉಳಿಸುವುದಿಲ್ಲ. ತಾನು ಬಳಸಿದ ಮ್ಯಾಚ್ ಬಾಕ್ಸ್‌ ಕೂಡಾ ತನ್ನದೇ ಆಗಿರುವಂತೆ ನೋಡಿಕೊಳ್ಳುವ ಕಿಮ್, ಆ ವಿಷಯದಲ್ಲಿ ನಂಬುವುದು ತನ್ನ ತಂಗಿಯನ್ನು ಮಾತ್ರ.

ಕಿಮ್ ತಾನು ಉಳಿದುಕೊಳ್ಳುವ ಹೋಟೆಲ್ಲಿನಲ್ಲಿ ಹೊರಹೋಗುತ್ತಿದ್ದಂತೆಯೇ ಆತನ ಅಂಗರಕ್ಷಕರು ಆತ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕಿಮ್ ಅವರ ಫಿಂಗರ್ ಪ್ರಿಂಟ್, ಎಂಜಲು, ಬೆವರು ಸೇರಿದಂತೆ ಯಾವುದೇ ಗುರುತು ಉಳಿಸದಂತೆ ಕ್ಲೀನ್ ಮಾಡುತ್ತಾರೆ. ಕಿಮ್ ಸುತ್ತ ಕೇವಲ ಅತ್ಯಾಧುನಿಕ ಗನ್ ಹಿಡಿದ ಅಂಗರಕ್ಷಕರಷ್ಟೇ ಅಲ್ಲ, ಅವರಲ್ಲಿ ಕೆಮಿಕಲ್ ವಾರ್ ತಜ್ಞರೂ ಇರುತ್ತಾರೆ. ಕೆಮಿಕಲ್ ಬಳಸಿ ತನ್ನನ್ನು ಕೊಲ್ಲಬಹುದು ಎಂಬ ಭಯ ಕಿಮ್‌ಗೆ ಇದೆ.

ತನ್ನ ದೇಶದಲ್ಲಿಯೂ ಅಷ್ಟೇ. ಕಿಮ್ ಅವರ ಅಡುಗೆ ಮನೆಗೆ ಕೆಲಸಕ್ಕೆಂದು ಹೋದವರು ಹೊರ ಜಗತ್ತಿಗೆ ಗೊತ್ತಾಗುವಂತಿಲ್ಲ. ಅಡುಗೆ ಮಾಡಿ ಬಡಿಸುವ ಮೊದಲು ಅಡುಗೆ ಮಾಡಿದವರು, ಅಂಗರಕ್ಷಕರು ಮೊದಲು ತಿನ್ನಬೇಕು. ಸ್ವಲ್ಪ ಸಮಯ ಕಳೆದ ಬಳಿಕವಷ್ಟೇ ಕಿಮ್ ತಾವು ಸೇವಿಸುತ್ತಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೂ ತಮ್ಮ ಮಲ, ಮೂತ್ರಗಳನ್ನೂ ಕೂಡಾ ತಮ್ಮ ಅಂಗರಕ್ಷಕರಿಂದ ಸಂಗ್ರಹಿಸಿ, ರಷ್ಯಾಗೆ ತೆಗೆದುಕೊಂಡು ಹೋಗಿ ನಾಶ ಮಾಡುವ ಪದ್ಧತಿ ಇಟ್ಟುಕೊಂಡಿದ್ದಾರೆ. ಆದರೆ, ಕಿಮ್, ಪುಟಿನ್ ಅವರನ್ನೂ ಮೀರಿಸಿದ ರಕ್ಷಣಾ ಕೋಟೆಯಲ್ಲಿ ಬದುಕುತ್ತಿದ್ದಾರೆ.

ಮಹೇಶ್ ಕುಮಾರ್ ಕೆ ಎಲ್, ಕರೆಂಟ್ ಅಫೇರ್ಸ್/ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Web (67)

ಅಜನೀಶ್ ಕಂಪೋಸ್..ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 16, 2025 - 4:06 pm
0

Web (66)

ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 16, 2025 - 3:39 pm
0

Web (65)

ಐಟಿ ರಿಟರ್ನ್ಸ್ ಫೈಲ್ ಮಾಡಿಲ್ವಾ? ಡೆಡ್​​ಲೈನ್​​ ವಿಸ್ತರಣೆ ಆಗಿದೆ..!

by ಶ್ರೀದೇವಿ ಬಿ. ವೈ
September 16, 2025 - 2:52 pm
0

Web (64)

ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ!

by ಶ್ರೀದೇವಿ ಬಿ. ವೈ
September 16, 2025 - 2:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (59)
    ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅ*ತ್ಯಾಚಾ*ರ
    September 16, 2025 | 0
  • Web (20)
    ರಷ್ಯಾದ ಕಿರಿಶಿ ತೈಲ ಘಟಕದ ಮೇಲೆ ಉಕ್ರೇನ್‌ರ 361 ಡ್ರೋನ್ ದಾಳಿ
    September 14, 2025 | 0
  • Untitled design 2025 09 13t123724.130
    ಆಪರೇಷನ್ ಮಧ್ಯದಲ್ಲೇ ರೋಗಿ ಬಿಟ್ಟು ನರ್ಸ್ ಜೊತೆ ಸೆ**ಕ್ಸ್ ಮಾಡಿದ ವೈದ್ಯ
    September 13, 2025 | 0
  • Untitled design 2025 09 13t110223.504
    ರಷ್ಯಾದಲ್ಲಿ 7.4 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ
    September 13, 2025 | 0
  • 0 (19)
    ನೇಪಾಳದಲ್ಲಿ ಮಧ್ಯಂತರ ಸರ್ಕಾರದ ಮೊದಲ ಮಹಿಳಾ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣ ವಚನ
    September 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version