ಇರಾನ್-ಇಸ್ರೇಲ್ ಸಂಘರ್ಷ: ಇರಾನ್‌ಗೆ ಅಣ್ವಸ್ತ್ರ ಪೂರೈಸಲು ರಷ್ಯಾ ಚೀನಾ ಬೆಂಬಲ

ಅಮೆರಿಕದ ಬಾಂಬ್ ದಾಳಿಗೆ ಇರಾನ್‌ನ ಎಚ್ಚರಿಕೆ!

1 (21)

ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಮೆರಿಕವು ಇರಾನ್‌ನ ಅಣ್ವಸ್ತ್ರ ಕೇಂದ್ರಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ, ಹಲವು ರಾಷ್ಟ್ರಗಳು ಇರಾನ್‌ಗೆ ಅಣ್ವಸ್ತ್ರ ಪೂರೈಸಲು ಮುಂದಾಗಿವೆ ಎಂಬ ವರದಿಗಳು ಹೊರಬಿದ್ದಿವೆ.

ರಷ್ಯಾ ಮತ್ತು ಚೀನಾವು ಇರಾನ್‌ಗೆ ಬೆಂಬಲ ಘೋಷಿಸಿವೆ. ಅಮೆರಿಕದ ದಾಳಿಯನ್ನು ಖಂಡಿಸಿರುವ ರಷ್ಯಾದ ಅಧ್ಯಕ್ಷ ಪುಟಿನ್‌ರ ಆಪ್ತ ಡಿಮಿಟ್ರಿ ಮೆಡ್ವೆಡೆವ್, ಇರಾನ್‌ಗೆ ಅಣ್ವಸ್ತ್ರ ನೀಡಲು ಹಲವು ದೇಶಗಳು ಸಿದ್ಧವಾಗಿವೆ ಎಂದು ಹೇಳಿದ್ದಾರೆ. ಚೀನಾವು ಅಮೆರಿಕವು ವಿಶ್ವಸಂಸ್ಥೆಯ ನಿಯಮಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.

ಶನಿವಾರ ಮಧ್ಯರಾತ್ರಿ, ಅಮೆರಿಕವು ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್‌ನಲ್ಲಿರುವ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ 14,000 ಕೆಜಿ ತೂಕದ ವಿಶ್ವದ ಅತ್ಯಂತ ಶಕ್ತಿಶಾಲಿ B-12 ಬಾಂಬರ್‌ ಬಳಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕಕ್ಕೆ ತೀವ್ರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. 

Exit mobile version