ವರದಿ: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್
ಕ್ಯೂಬಾ :- ಅಮೆರಿಕಾ ಹಾಗೂ ಇರಾನ್ ನಡುವಿನ ಯುದ್ದ ದಿನೇದಿನೇ ಭೀಕರ ಸ್ವರೂಪ ಪಡೆಯುತ್ತಿದ್ದು ಇದರಿಂದಾಗಿ ನಾನಾ ದೇಶಗಳು ಸಂಕಷ್ಟಕ್ಕೆ ಸಿಲುಕಿದೆ. ಈ ಯುದ್ಧದಿಂದಾಗಿ ದಿನನಿತ್ಯದ ವಸ್ತುಗಳಿಗೂ ಕೂಡ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕತ್ತಲಲ್ಲಿ ಕ್ಯೂಬಾ
ಯುದ್ಧದ ಎಫೆಕ್ಟ್ ಬರೀ ಅಮೆರಿಕಾ, ಭಾರತ, ರಷ್ಯಾ ಇಸ್ರೇಲ್ ಇರಾನ್ ಮಾತ್ರವಲ್ಲದೇ ನೇರೆಯ ಸಣ್ಣ ದೇಶ ಕ್ಯೂಬಾಕ್ಕೂ ಕೂಡ ತಟ್ಟಿದೆ. ಹೌದು ಅಮೆರಿಕಾದ ನೆರೆಯ ರಾಷ್ಟ್ರವಾಗಿರುವ ಕ್ಯೂಬಾ ಅಮೆರಿಕಾದ ಕಚ್ಚಾ ತೈಲದ ಸಹಾಯದಿಂದ ಕರೆಂಟನ್ನು ಉತ್ಪಾದಿಸುತಿತ್ತು. ಇದೀಗ ಅಮೆರಿಕಾದಿಂದ ಕಚ್ಚಾತೈಲ ರಫ್ತು ಕಳೆದ 9ನೇ ತಾರೀಖಿನಿಂದ ನಿಂತಿದ್ದು ಇದೀಗ ಕ್ಯೂಬಾ ಕತ್ತಲಲ್ಲಿ ಮುಳುಗುವಂತೆ ಮಾಡಿದೆ.
ಕ್ಯೂಬಾದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವುದಲ್ಲ ಇದು ಮೂರನೇ ಬಾರಿಯಾಗಿದ್ದು, ಒಂದು ವಾರಗಳ ಕಾಲ ಈ ಭಾರೀ ವಿದ್ಯುತ್ ಸಮಸ್ಯೆಯನ್ನ ಎದುರಿಸಬೇಕಾಗಿರುವಂತಹ ಸ್ಥಿತಿ ನಿರ್ಮಾಣವಾಗಿದೆ.
ದಿನಕ್ಕೆ 20 ಗಂಟೆಗಳ ಕಾಲ ವಿದ್ಯುತ್ ಅಭಾವವನ್ನ ಎದುರಿಸುತ್ತಿರುವ ಕ್ಯೂಬಾದಲ್ಲಿನ ಜನರು ಬಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಬಹುದಾಗಿದೆ. ಯಾಕೆಂದರೆ ದಿನಕ್ಕೆ 20 ಗಂಟೆಗಳ ಕಾಲ ವಿದ್ಯುತ್ ಕಟ್‌ನಿಂದಾಗಿ ನಿತ್ಯದ ಕೆಲಸವನ್ನೂ ಕೂಡ ನಿರ್ವಹಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಕ್ಯೂಬಾದಲ್ಲಿ ಇದೆ ಎನ್ನಬಹುದಾಗಿದೆ.
ಅಲ್ಲಿನ ಸರ್ಕಾರಿ ಕಚೇರಿಗಳು ಸೇರಿದಂತೆ ಆನೇಕ ಬಿಲ್ಡಿಂಗ್‌ಗಳು ಸಂಜೆಯಾಗುತ್ತಿದ್ದಂತೆ ಅಂಧಕಾರದಲ್ಲಿ ಮುಳುಗುತ್ತಿದೆ ಎನ್ನಬಹುದಾಗಿದೆ.
ಈ ಪರಿಸ್ಥಿತಿಯನ್ನ ಸರಿದೂಗಿಸಲು ಹೆಣಗಾಡುತ್ತಿರುವ ಅಲ್ಲಿನ ಸರ್ಕಾರ ಅದಷ್ಟು ಬೇಗ ಈ ಸಮಸ್ಯೆಯನ್ನ ಬಗೆಹರಿಸುವುದಾಗಿ ಭರವಸೆಯನ್ನ ಕೂಡ ನೀಡಿದೆ. ಅಲ್ಲದೇ ಅಲ್ಲಿನ ಇಂಧನ ಸಚಿವಾಲಯಕ್ಕೂ ಕೂಡ ಇಂಧನ ಕೊರತೆ ಕುರಿತು ಪತ್ರವನ್ನ ಬರೆದಿದ್ದು ಅದಷ್ಟು ಬೇಗ ಇಂಧನದ ಬರವನ್ನ ನೀಗಿಸುವಂತೆ ಕೋರಿದೆ.
| Reported by: ವರದಿ: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್





