ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ ಮತ್ತು ಪ್ರಮುಖ ಬಲಪಂಥೀಯ ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಉತಾಹ್ ರಾಜ್ಯದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಘಟನೆ ನಡೆದಿದ್ದು, ಈ ಭಯಾನಕ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಾರ್ಲಿ ಕಿರ್ಕ್ ತಮ್ಮ “ದಿ ಅಮೇರಿಕನ್ ಕಮ್ಯಾಕ್ ಟೂರ್” ಎಂಬ ರಾಷ್ಟ್ರೀಯ ಭಾಷಣ ಆರಂಭಿಸಲು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಆಗಮಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ, ದುಷ್ಕರ್ಮಿಯೊಬ್ಬ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಗುಂಡು ಕಿರ್ಕ್ ಅವರ ಕುತ್ತಿಗೆ ಭಾಗಕ್ಕೆ ತಗುಲಿದ್ದು, ತಕ್ಷಣವೇ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯ ದೃಶ್ಯಾವಳಿಗಳನ್ನು ಒಳಗೊಂಡ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Charlie Kirk, 31, a conservative activist and close ally of Donald Trump, was shot and killed during a campus event in Utah. A prominent political, media, and cultural figure, Kirk built a distinct personal brand as the founder of Turning Point USA. He rose from a student… pic.twitter.com/HPeYRPpgJg
— Brand (@Brand) September 10, 2025
ಚಾರ್ಲಿ ಕಿರ್ಕ್, ಬಲಪಂಥೀಯ ರಾಜಕೀಯ ಕಾರ್ಯಕರ್ತರಾಗಿ ಮತ್ತು “ಟರ್ನಿಂಗ್ ಪಾಯಿಂಟ್ ಯುಎಸ್‌ಎ” ಸಂಸ್ಥೆಯ ಸಂಸ್ಥಾಪಕರಾಗಿ ಗುರುತಿಸಿಕೊಂಡವರು. ಈ ಘಟನೆಯಿಂದಾಗಿ ಉತಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ದಾಳಿಯ ಹಿಂದಿನ ಕಾರಣಗಳನ್ನು ಮತ್ತು ದುಷ್ಕರ್ಮಿಯ ಗುರುತನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದಾರೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು, ಜನರು ಈ ದಾಳಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದನ್ನು ರಾಜಕೀಯ ದ್ವೇಷದ ಫಲಿತಾಂಶವೆಂದರೆ, ಇನ್ನೂ ಕೆಲವರು ಇದರ ಹಿಂದೆ ಇತರ ಕಾರಣಗಳಿರಬಹುದೆಂದು ಊಹಿಸುತ್ತಿದ್ದಾರೆ.
 
			
 
					




 
                             
                             
                             
                             
                            