2 ತಿಂಗಳಲ್ಲಿ ಆಚೆ ಬರ್ತಾರೆ ದರ್ಶನ್.. ಇದು ಕ್ರೇಜಿ ಭವಿಷ್ಯ..!

‘ನಿಮಗೆಲ್ಲಾ ಡಿಬಾಸ್.. ಆದ್ರೆ ನನಗೆ ಮಗ’ ಎಂದ ಕ್ರೇಜಿಸ್ಟಾರ್

Untitled design 2026 02 18T144252.970

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರೋ ಡಿಬಾಸ್ ದರ್ಶನ್‌ ಜನವರಿಯಲ್ಲಿ ಬಂದ್ಬಿಡ್ತಾರೆ ಅಂದಿದ್ರು ಝೈದ್ ಖಾನ್. ಆದ್ರೆ ಬರಲಿಲ್ಲ. ಜುಲೈ ಒಳಗೆ ಬೇಲ್ ಸಿಕ್ಕಿ ಹೊರಬರ್ತಾರೆ ಅಂತಿದ್ದಾರೆ.. ಆದ್ರೆ ಬರ್ತಾರೋ ಇಲ್ವೋ ಗೊತ್ತಿಲ್ಲ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಎರಡು ತಿಂಗಳಲ್ಲಿ ಆಚೆ ಬರ್ತಾನೆ ನನ್ನ ಮಗ ಅಂತ ಕ್ರೇಜಿ ಭವಿಷ್ಯ ನುಡಿದಿದ್ದಾರೆ.

ಡಿಬಾಸ್ ಬರ್ತಾರೆ ಬಿಡೋ.. ಇನ್ನೊಂದೆರಡು ತಿಂಗಳಲ್ಲಿ ಆಚೆ ಬರ್ತಾರಂತೆ. ಈ ಬಾಯಲ್ಲಿ ಹೇಳಿದ್ದೀನಿ ಬರ್ತಾರೆ ನೆನಪಿಟ್ಕೋ. ನಿಮಗೆಲ್ಲಾ ಡಿಬಾಸ್.. ಆ ಡಿಬಾಸ್ ನನಗೆ ಮಗ ನೆನಪಿಟ್ಕೊಳಿ. ಬರ್ತಾರೆ ಹೊರಗೆ…ಇದನ್ನ ಕೆಳೋಕೆ ಎಷ್ಟು ಚೆನ್ನಾಗಿದೆ ಅಲ್ವಾ..? ಹೀಗಂತ ಹೇಳಿರೋದು ಬೇರೆ ಯಾರೂ ಅಲ್ಲ, ನಮ್ಮ ಸ್ಯಾಂಡಲ್‌ವುಡ್‌‌ನ ಟ್ರೆಂಡ್ ಸೆಟ್ಟರ್, ಕ್ರೇಜಿಸ್ಟಾರ್ ರವಿಚಂದ್ರನ್.

2 ತಿಂಗಳಲ್ಲಿ ಆಚೆ ಬರ್ತಾರೆ ದರ್ಶನ್.. ಇದು ಕ್ರೇಜಿ ಭವಿಷ್ಯ..!

‘ನಿಮಗೆಲ್ಲಾ ಡಿಬಾಸ್.. ಆದ್ರೆ ನನಗೆ ಮಗ’ ಎಂದ ಕ್ರೇಜಿಸ್ಟಾರ್

ಒಂದು ಕೆಟ್ಟ ಗಳಿಗೆ ಮನುಷ್ಯನನ್ನ ಕುಗ್ಗಿಸುತ್ತೆ. ಅಷ್ಟು ಆಳಕ್ಕೆ ಕರೆದುಕೊಂಡು ಹೋಗಿ ಕುಗ್ಗಿಸಬೇಕಾದ್ರೆ.. ಯಾವತ್ತೋ ಒಂದು ದಿನ ಎಬ್ಬಿಸಬೇಕಾಗುತ್ತೆ. ಅಲ್ವಾ..? ಸೋ.. ಅದಕ್ಕೆ ಎಲ್ಲರೂ ಕಾಯೋಣ. ಬಟ್ ಎಲ್ಲರೂ ಒಂದೇ ಪ್ರೀತಿಯಿಂದ ಒಂದೇ ಮನಸ್ಸಿನಿಂದ ಹೃದಯದಲ್ಲಿ ಪೂಜೆ ಮಾಡಿ. ಬಂದೇ ಬರ್ತಾರೆ.. ಹೀಗಂತ ರವಿಮಾಮ ತಮ್ಮ ಮಗನ ಸಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇಲ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಕುಣಿಗಲ್‌‌ನಲ್ಲಿರೋ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಈ ಮಾತುಗಳನ್ನ ಆಡಿದ್ದಾರೆ. ಇದು ನಿಜಕ್ಕೂ ಇಡೀ ಕನ್ನಡ ಚಿತ್ರರಂಗಕ್ಕೆ ಖುಷಿ ತಂದಿದೆ. ಅಷ್ಟೇ ಅಲ್ಲ, ರವಿಮಾಮನ ಬಾಯಿಂದ ಬಂದಂತಹ ಈ ಮಾತುಗಳನ್ನ ಕೇಳಿದಾಕ್ಷಣ ಪುಳಕಿತರಾಗಿದ್ದಾರೆ ದಚ್ಚು ಡೈಹಾರ್ಡ್ ಫ್ಯಾನ್ಸ್. ಕುಟುಂಬಸ್ಥರಂತೂ ಕ್ರೇಜಿ ಭವಿಷ್ಯ ಕೇಳಿ ದಿಲ್‌ಖುಷ್ ಆಗಿದ್ದಾರೆ.

ಕ್ರಾಂತಿ ಚಿತ್ರದಲ್ಲಿ ತಂದೆ-ಮಗನಾಗಿ ಬಣ್ಣ ಹಚ್ಚಿದ್ದ ರವಿ-ದಚ್ಚು

ರವಿಚಂದ್ರನ್ ಒಂಥರಾ ಲಕ್ಕಿಮ್ಯಾನ್.. ಹೇಳಿದ್ದು ಸುಳ್ಳಾಗಿಲ್ಲ

ಅಂದಹಾಗೆ ಕ್ರೇಜಿಸ್ಟಾರ್‌‌‌‌ ರವಿಮಾಮಗೆ ಸುದೀಪ್ ಹೇಗೋ ದರ್ಶನ್ ಕೂಡ ಹಾಗೇನೇ. ಕ್ರಾಂತಿ ಚಿತ್ರದಲ್ಲಿ ತಂದೆ-ಮಗನಾಗಿ ಬಣ್ಣ ಹಚ್ಚಿದ್ದ ರವಿಚಂದ್ರನ್-ದರ್ಶನ್ ನಡುವೆ ಒಂದೊಳ್ಳೆ ಬಾಂಧವ್ಯ ಏರ್ಪಟ್ಟಿದೆ. ಹಾಗಾಗಿ ಕ್ರೇಜಿಸ್ಟಾರ್ ಅಷ್ಟು ದೊಡ್ಡ ವೇದಿಕೆಯಲ್ಲಿ ದಚ್ಚು ಬಗ್ಗೆ ಬಹಳ ಪ್ರೀತಿಯಿಂದ, ಅಭಿಮಾನದಿಂದ ಅಭಿಮಾನಿಗಳಿಗಾಗಿ ಮಾತನಾಡಿದ್ದಾರೆ. ಇದೊಂಥರಾ ಭರವಸೆಯ ಮಾತುಗಳು ಕೂಡ ಹೌದು.

ಈ ಹಿಂದೆ ಝೈದ್ ಖಾನ್ ನಮ್ಮಣ್ಣ ದರ್ಶನ್ ಜನವರಿಯಲ್ಲಿ ಪ್ರಾಪರ್ ಬೇಲ್ ತಗೊಂಡು ಬಂದ್ಬಿಡ್ತಾರೆ ಅನ್ನೋ ಸ್ಟೇಟ್‌‌ಮೆಂಟ್ ನೀಡಿದ್ರು. ಆದ್ರೆ ಅದು ಹುಸಿ ಆಯ್ತು. ಈಗ ರವಿಚಂದ್ರನ್ ಹೇಳಿದ್ದಾರೆ. ಇವರು ಅದೆಷ್ಟೋ ಮಂದಿಗೆ ಲಕ್ಕಿಮ್ಯಾನ್, ಲಕ್ಕಿ ಚಾರ್ಮ್. ಇವರು ಹೇಳಿದ್ದು ಸುಳ್ಳಾಗಿಲ್ಲ. ಸೋ.. ಅವರೇ ಅಷ್ಟು ಕಾನ್ಫಿಡೆಂಟ್ ಆಗಿ ಹೇಳ್ತಿರೋದು ಸಣ್ಣದೊಂದು ಸಮಾಧಾನ ತರಿಸಿದೆ. ಆದ್ರೆ ರಿಯಾಲಿಟಿ ಬೇರೇನೇ ಇದೆ. ಹೇಳ್ತೀವಿ ನೋಡಿ.

ಕೋರ್ಟ್‌‌‌ನಲ್ಲಿ ನಡೀತಿರೋದೇನು..? ಚಕ್ರವ್ಯೂಹ ಭೇದಿಸ್ತಾರಾ ?

2 ಸಾಕ್ಷಿ ವಿಚಾರಣೆಗೆ ಒಂದು ತಿಂಗಳು.. 270 ಸಾಕ್ಷಿಗೆ 2 ವರ್ಷ ?

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನ ಆರೋಪಿ ನಂಬರ್ 2 ಆಗಿರೋ ದರ್ಶನ್‌, ಪವಿತ್ರಾ ಗೌಡ‌‌‌ ಸೇರಿದಂತೆ ಏಳು ಮಂದಿ ಆರೋಪಿಗಳು ಸದ್ಯ ಜೈಲಲ್ಲಿದ್ದಾರೆ. ಉಳಿದ ಎಲ್ಲಾ ಆರೋಪಿಗಳಿಗೆ ಬೇಲ್ ಸಿಕ್ಕಾಗಿದೆ. ಆದ್ರೆ ಅಸಲಿ ಆಟ ಈಗ ಶುರುವಾಗಿದೆ. ಕೋರ್ಟ್ ಟ್ರಯಲ್ಸ್‌ ಆರಂಭ ಆಗಿದ್ದು, ಬರೋಬ್ಬರಿ 272 ಸಾಕ್ಷಿಗಳನ್ನ ವಿಚಾರಣೆ ನಡೆಸಿ ತೀರ್ಪು ನೀಡಬೇಕಿದೆ ಕೋರ್ಟ್. ಆದ್ರೆ ಟ್ರಯಲ್ಸ್ ಆರಂಭ ಆದ ಬಳಿಕ ಇಲ್ಲಿಯವರೆಗೆ ಆಗಿರೋದು ಎರಡೇ ಎರಡು ಸಾಕ್ಷಿಗಳ ವಿಚಾರಣೆ. ಅದು ರೇಣುಕಾಸ್ವಾಮಿ ತಂದೆ ಹಾಗೂ ತಾಯಿಯದ್ದು.

 ಎರಡೇ ಎರಡು ಸಾಕ್ಷಿಗಳ ವಿಚಾರಣೆಗೆ ಕೋರ್ಟ್ ಒಂದು ತಿಂಗಳ ಕಾಲ ಸಮಯ ತೆಗೆದುಕೊಂಡಿದೆ ಅಂದ್ರೆ ಬಾಕಿ ಉಳಿದ 270 ಸಾಕ್ಷಿಗಳನ್ನ ಪರಿಶೀಲಿಸಿ, ವಿಚಾರಣೆ ಮಾಡೋಕೆ ಎಷ್ಟು ವರ್ಷ ಬೇಕಾಗಬಹುದು ಅನ್ನೋ ಕುತೂಹಲ ಹೆಚ್ಚಿದೆ. ಫಾಸ್ಟ್‌‌ ಟ್ರ್ಯಾಕ್ ಮಾಡಿ, ಎಷ್ಟೇ ತ್ವರಿತಗತಿಯಲ್ಲಿ ಮಾಡುತ್ತೆ ಅಂದ್ರೂ ಸಹ ಕನಿಷ್ಟ ಎರಡು ವರ್ಷಗಳಾದ್ರೂ ಬೇಕಾಗುತ್ತೆ ಅನ್ನೋದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಅಂದಹಾಗೆ ಆ ಇನ್ನೂರ ಎಪ್ಪತ್ತೆರಡು ಸಾಕ್ಷಿಗಳಲ್ಲಿ ಯಾವ್ಯಾವ ಸಾಕ್ಷಿಗಳು ಎಷ್ಟೆಷ್ಟು ಅನ್ನೋದ್ರ ಗ್ರಾಫಿಕಲ್ ಪ್ರೆಸೆಂಟೇಷನ್ ಇಲ್ಲಿದೆ ನೋಡಿ.

ರೇಣುಕಾಸ್ವಾಮಿ ಮರ್ಡರ್ ಕೇಸ್ ಸಾಕ್ಷಿಗಳ ಪಟ್ಟಿ (Header)

ಖಾಸಗಿ ಸಾಕ್ಷಿಗಳು                                     100

ಪ್ರತ್ಯಕ್ಷ ಸಾಕ್ಷಿಗಳು                                       02

ಭಾಗಶಃ ಪ್ರತ್ಯಕ್ಷ ಸಾಕ್ಷಿಗಳು                           05

ಮಹಜರ್ ಸಾಕ್ಷಿಗಳು                                   62

FSL/ CFSL ಸಾಕ್ಷಿಗಳು                                   15

ವೈದ್ಯ ಸಾಕ್ಷಿ                                                01

ತಾಂತ್ರಿಕ ಸಾಕ್ಷಿಗಳು                                      04

ಬ್ಯಾಂಕ್/ ಅಫಿಶಿಯಲ್ ಸಾಕ್ಷಿಗಳು                 17

ಮ್ಯಾಜಿಸ್ಟ್ರೇಟ್ ಸಾಕ್ಷಿಗಳು                               02

ಪೊಲೀಸ್ ಸಾಕ್ಷಿಗಳು                                      64

ಒಟ್ಟು ಸಾಕ್ಷಿಗಳು                                          272

ಇಷ್ಟೆಲ್ಲಾ ಸಾಕ್ಷ್ಯಾಧಾರಗಳನ್ನ ಪರಿಶೀಲಿಸಿ, ವಿಚಾರಣೆ ಮಾಡೋಕೆ ಕೋರ್ಟ್‌ಗೆ ಬಹುದೊಡ್ಡ ಕಾಲಾವಕಾಶ ಬೇಕಾಗಲಿದೆ. ಸೋ.. ಒಂದು ತಿಂಗಳಲ್ಲಿ ಎರಡು ತಿಂಗಳಲ್ಲಿ ಬರ್ತಾರೆ ಅನ್ನೋರ ಮಾತುಗಳನ್ನ ಸೀರಿಯಸ್ ಆಗಿ ತಗೊಳೋಕೆ ಕಷ್ಟಸಾಧ್ಯ. ಹಾಗಾಗಿ ಡಿಬಾಸ್ ಹೊರ ಬರೋದು ಅಷ್ಟು ಸುಲಭವಾಗಿಲ್ಲ. ಚಕ್ರವ್ಯೂಹ ಭೇದಿಸೋಕೆ ಹರಸಾಹಸ ಮಾಡಬೇಕಿದೆ ನಟ ದರ್ಶನ್.

 

 

 

Exit mobile version