• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಮೆದುಳು ತಿನ್ನುವ ಅಮೀಬಾ ಆತಂಕ: ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 18, 2025 - 8:20 pm
in Flash News
0 0
0
Untitled design 2025 11 18T201609.366

ಬೆಂಗಳೂರು, ನವೆಂಬರ್ 18: ಕೇರಳದ ಶಬರಿಮಲೆ ದೇವಸ್ಥಾನವನ್ನು ಭಕ್ತರ ದರ್ಶನಕ್ಕೆ ತೆರೆಯಿರುವ ಸಂದರ್ಭದಲ್ಲಿ, ರಾಜ್ಯದ ಆರೋಗ್ಯ ಇಲಾಖೆಯು ‘ನೇಗ್ಲೇರಿಯಾ ಫೌಲೇರಿ’ (Naegleria fowleri) ಎಂಬ ಮಿದುಳು ತಿನ್ನುವ ಅಮೀಬಾದ ಸೋಂಕು ಕುರಿತು ಗಂಭೀರ ಎಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಿದೆ. 

ಕೇರಳದಲ್ಲಿ ಅತ್ಯಂತ ಮಾರಕ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಿಂದ ಆತಂಕಗೊಂಡ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಯಾತ್ರಿಗಳಿಗಾಗಿ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ.

RelatedPosts

ಕರ್ನಾಟಕಕ್ಕೆ ಭಾರಿ ಬೇಸಿಗೆ: ಮಾರ್ಚ್‌ನಿಂದ ಮೇವರೆಗೆ ರೆಡ್ ಅಲರ್ಟ್ ಮುನ್ಸೂಚನೆ!

ಬೆಂಗಳೂರಿನಲ್ಲಿ ಫೆಬ್ರವರಿ 21-22ಕ್ಕೆ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ

ಪೊಲೀಸ್‌ನಿಂದಲೇ ಅಪಪ್ರಚಾರ: ಡೆತ್ ನೋಟ್ ಬರೆದಿಟ್ಟು ವಿಧವೆ ಆತ್ಮಹ*ತ್ಯೆ

ಗಲ್ವಾನ್ ವೇಳೆ ಚೀನಾಗೆ ಭಾರತದ ಭೂಮಿ ಬಿಟ್ಟುಕೊಟ್ಟಿಲ್ಲ: ರಾಹುಲ್ ಗಾಂಧಿಗೆ ನರವಾಣೆ ತಿರುಗೇಟು

ADVERTISEMENT
ADVERTISEMENT
ನೇಗ್ಲೇರಿಯಾ ಫೌಲೇರಿ ಎಂದರೇನು?

ನೇಗ್ಲೇರಿಯಾ ಫೌಲೇರಿ ಒಂದು ಸ್ವತಂತ್ರ ಬದುಕುವ (free-living) ಅಮೀಬಾ. ಇದು ಬೆಚ್ಚಗಿನ ಸಿಹಿ ನೀರು ಮತ್ತು ಮಣ್ಣಿನಲ್ಲಿ ವಾಸಿಸುತ್ತದೆ. ಕೊಳವೆ ನೀರು, ಕೆರೆ, ಸರೋವರ, ನಿಂತ ನೀರು, ಈಜುಕೊಳಗಳು ಇವೆಲ್ಲವೂ ಇದರ ನೆಚ್ಚಿನ ಆವಾಸಸ್ಥಾನಗಳು.

ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಕಲುಷಿತ ನೀರು ಕುಡಿದರೂ ಸೋಂಕು ಬರುವುದಿಲ್ಲ. ಆದರೆ ನೀರಿನಲ್ಲಿ ಈಜುವಾಗ ಅಥವಾ ಮುಳುಗುವಾಗ ಮೂಗಿನ ಮೂಲಕ ಒಳಗೆ ಹೋದರೆ ಮಾತ್ರ ಈ ಅಮೀಬಾ ಮೆದುಳಿನತ್ತ ಪಯಣ ಬೆಳೆಸುತ್ತದೆ. ಇದು ಮೆದುಳಿನ ರಕ್ತನಾಳಗಳ ಮೂಲಕ ಪ್ರಯಾಣಿಸಿ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (PAM) ಎಂಬ ಮಾರಣಾಂತಿಕ ಖಾಯಿಲೆ ಉಂಟುಮಾಡುತ್ತದೆ. ಸೋಂಕು ದೃಢಪಟ್ಟ ನಂತರ ಬದುಕುವ ಪ್ರಮಾಣ ಶೇ. 1-2 ಮಾತ್ರ!.

ಯಾತ್ರೆಯ ಸಂದರ್ಭದಲ್ಲಿ ಮಾಡಬೇಕಾದ ಮುನ್ನೆಚ್ಚರಿಕೆಗಳು

ಆರೋಗ್ಯ ಇಲಾಖೆ ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ.

  • ಪಂಪಾ ನದಿ, ಕೆರೆ, ನಿಂತ ನೀರಿನ ಕೊಳಗಳಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಿ.
  • ಮೂಗಿನ ಕ್ಲಿಪ್ (nose clip) ಬಳಸಿ ಅಥವಾ ಬೆರಳಿನಿಂದ ಮೂಗನ್ನು ಬಿಗಿಯಾಗಿ ಮುಚ್ಚಿಕೊಂಡು ಮುಳುಗಿ.
  • ಶುದ್ಧವಾದ, ಹರಿವಿನ ನೀರಿನಲ್ಲಿ ಮಾತ್ರ ಸ್ನಾನ ಮಾಡಿ.
  • ನಿಂತ ನೀರು ಅಥವಾ ಬೆಚ್ಚಗಿನ ಕೊಳಗಳಲ್ಲಿ ತಲೆ ಮುಳುಗಿಸಿ ಈಜಾಡಬೇಡಿ.
  • ಮಕ್ಕಳು ಆಟವಾಡುವಾಗ ಇನ್ನಷ್ಟು ಎಚ್ಚರಿಕೆ ವಹಿಸಿ.
ಲಕ್ಷಣಗಳು ಕಂಡರೆ ತಕ್ಷಣ ಏನು ಮಾಡಬೇಕು?

ನೀರಿನ ಸಂಪರ್ಕದ 1-9 ದಿನಗಳ ಒಳಗೆ (ಸಾಮಾನ್ಯವಾಗಿ 5 ದಿನಗಳಲ್ಲಿ) ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಟ್ಟರೆ ತಕ್ಷಣ ಆಸ್ಪತ್ರೆಗೆ ದೌಡಾಯಿಸಿ.

  • ತೀವ್ರ ಜ್ವರ
  • ತಲೆ ಸೀಳುವಂತೆ ನೋವು
  • ವಾಕರಿಕೆ, ವಾಂತಿ
  • ಕುತ್ತಿಗೆ ಬಿಗಿತ
  • ಗೊಂದಲ, ಪ್ರಜ್ಞಾಹೀನತೆ
  • ವರ್ತನೆಯಲ್ಲಿ ತೀವ್ರ ಬದಲಾವಣೆ
  • ದೃಷ್ಟಿ ಮಂದ, ಸೆಳೆತ

ಈ ಲಕ್ಷಣಗಳು ಕಂಡರೆ ತಡಮಾಡದೆ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಬದುಕುವ ಸಾಧ್ಯತೆ ಹೆಚ್ಚು.

ಕರ್ನಾಟಕದಲ್ಲಿ ಸ್ಥಿತಿ

ಇದುವರೆಗೆ ಕರ್ನಾಟಕದಲ್ಲಿ ನೇಗ್ಲೇರಿಯಾ ಫೌಲೇರಿ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೂ ಶಬರಿಮಲೆಗೆ ತೆರಳಿ ಮರಳುವ ಭಕ್ತರ ಸಂಖ್ಯೆ ದೊಡ್ಡದಿದ್ದರಿಂದ ಆರೋಗ್ಯ ಇಲಾಖೆ ಸಂಪೂರ್ಣ ಅಲರ್ಟ್ ಆಗಿದೆ. ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಕ್ತ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 02 21T071125.187

ಕರ್ನಾಟಕಕ್ಕೆ ಭಾರಿ ಬೇಸಿಗೆ: ಮಾರ್ಚ್‌ನಿಂದ ಮೇವರೆಗೆ ರೆಡ್ ಅಲರ್ಟ್ ಮುನ್ಸೂಚನೆ!

by ಶ್ರೀದೇವಿ ಬಿ. ವೈ
February 21, 2026 - 7:17 am
0

Rashi bavishya

ದಿನ ಭವಿಷ್ಯ: ಯಾವ ರಾಶಿಯವರಿಗೆ ಧನ ಲಾಭಕ್ಕೆ ಯಾರಿಗೆ ಅವಕಾಶ? ಯಾರಿಗೆ ನಷ್ಟ?

by ಶ್ರೀದೇವಿ ಬಿ. ವೈ
February 21, 2026 - 6:54 am
0

Untitled design 2026 02 20T202346.557

ಕಾಕ್ಟೇಲ್-2 ಚಿತ್ರದಲ್ಲಿ ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

by ಶಾಲಿನಿ ಕೆ. ಡಿ
February 20, 2026 - 8:25 pm
0

Untitled design 2026 02 20T194618.303

ಬೆಂಗಳೂರಿನಲ್ಲಿ ಫೆಬ್ರವರಿ 21-22ಕ್ಕೆ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ

by ಶಾಲಿನಿ ಕೆ. ಡಿ
February 20, 2026 - 7:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 21T071125.187
    ಕರ್ನಾಟಕಕ್ಕೆ ಭಾರಿ ಬೇಸಿಗೆ: ಮಾರ್ಚ್‌ನಿಂದ ಮೇವರೆಗೆ ರೆಡ್ ಅಲರ್ಟ್ ಮುನ್ಸೂಚನೆ!
    February 21, 2026 | 0
  • Untitled design 2026 02 20T194618.303
    ಬೆಂಗಳೂರಿನಲ್ಲಿ ಫೆಬ್ರವರಿ 21-22ಕ್ಕೆ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ
    February 20, 2026 | 0
  • Untitled design 2026 02 20T193701.636
    ಪೊಲೀಸ್‌ನಿಂದಲೇ ಅಪಪ್ರಚಾರ: ಡೆತ್ ನೋಟ್ ಬರೆದಿಟ್ಟು ವಿಧವೆ ಆತ್ಮಹ*ತ್ಯೆ
    February 20, 2026 | 0
  • Untitled design 2026 02 20T180647.142
    ಗಲ್ವಾನ್ ವೇಳೆ ಚೀನಾಗೆ ಭಾರತದ ಭೂಮಿ ಬಿಟ್ಟುಕೊಟ್ಟಿಲ್ಲ: ರಾಹುಲ್ ಗಾಂಧಿಗೆ ನರವಾಣೆ ತಿರುಗೇಟು
    February 20, 2026 | 0
  • Untitled design 2026 02 20T170506.057
    ಕಾಫಿನಾಡಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಮಿಸ್ಸಿಂಗ್
    February 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version