• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿಶೇಷ

ಚಿನ್ನದ ನಾಣ್ಯ, ಚೆಂಡು ಹೂ, ಸ್ವೀಟ್‌: ದೀಪಾವಳಿಗೆ ಇನ್‌ಸ್ಟಾಮಾರ್ಟ್‌ನಲ್ಲಿ ಮಧ್ಯರಾತ್ರಿಯೂ ನಿದ್ದೆ ಬಿಟ್ಟು ಶಾಪಿಂಗ್!

ಕವಿತಾ by ಕವಿತಾ
November 7, 2026 - 11:45 am
in ವಿಶೇಷ
0 0
0
Untitled design (20)

ಬೆಂಗಳೂರು: ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಮನೆ ಅಲಂಕಾರ, ಪೂಜಾ ಸಿದ್ಧತೆ, ಸಿಹಿ ಹಂಚುವುದು ಹಾಗೂ ಉಡುಗೊರೆ ನೀಡುವ ಭರಾಟೆ ಜೋರಾಗಿದೆ. ಈ ಬಾರಿಯ ದೀಪಾವಳಿಗೆ ಭಾರತೀಯರು ಇನ್‌ಸ್ಟಾಮಾರ್ಟ್ ಆ್ಯಪ್‌ನಲ್ಲಿ ಏನೇನು ಖರೀದಿಸುತ್ತಿದ್ದಾರೆ? ಮಧ್ಯರಾತ್ರಿ ಯಾವೆಲ್ಲಾ ವಸ್ತುಗಳು ಅತಿ ಹೆಚ್ಚು ಆರ್ಡರ್ ಆಗುತ್ತಿವೆ? ಯಾವ ನಗರದಲ್ಲಿ ಯಾವುದಕ್ಕೆ ಡಿಮ್ಯಾಂಡ್? ಎಂಬ ಕುತೂಹಲಕಾರಿ ಅಂಕಿ-ಅಂಶಗಳನ್ನು ಇನ್‌ಸ್ಟಾಮಾರ್ಟ್ ಬಿಡುಗಡೆ ಮಾಡಿದೆ.

ಆನ್‌ಲೈನ್‌ನಲ್ಲಿ ಚಿನ್ನ-ಬೆಳ್ಳಿ ಬೇಟೆ!

RelatedPosts

ಆರೋಗ್ಯಕರ ದೀಪಾವಳಿಗೆ ಸ್ವಿಗ್ಗಿ-ಆನಂದ್ ಸ್ವೀಟ್ಸ್ ಸಾಥ್, ಬೆಂಗಳೂರಿಗರಿಗಾಗಿ ಬಂತು ‘ಶುಗರ್ ಫ್ರೀ’ ಸಿಹಿತಿಂಡಿ!

ನವರಾತ್ರಿ ಆರಂಭ: ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆ

ನಾಳೆ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ರಕ್ಷಾಬಂಧನಕ್ಕೆ ದುಬಾರಿ ಬೆಲೆಯ ರಾಖಿಗಳದ್ದೇ ಹವಾ.!: ₹8 ಲಕ್ಷದ ಗೋಲ್ಡ್ ರಾಖಿ ವೈರಲ್

ADVERTISEMENT
ADVERTISEMENT

ದೀಪಾವಳಿಯ ಧನತ್ರಯೋದಶಿ (ಧನತೇರಸ್‌)ಯ ಪ್ರಯುಕ್ತ ಜನರು ಇನ್‌ಸ್ಟಾಮಾರ್ಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಚಿನ್ನದ ನಾಣ್ಯಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು ಧನತ್ರಯೋದಶಿಗೂ ಮುನ್ನ ಚಿನ್ನದ ನಾಣ್ಯಗಳ ಆರ್ಡರ್‌ಗಳು ಬರೋಬ್ಬರಿ 23 ಪಟ್ಟು ಹೆಚ್ಚಾಗಿವೆ. ಇದರಲ್ಲಿ 1 ಗ್ರಾಂ ಮತ್ತು 0.5 ಗ್ರಾಂ ನಾಣ್ಯಗಳು ಅತಿ ಹೆಚ್ಚು ಬಿಕರಿಯಾಗಿವೆ. ಬೆಳ್ಳಿಗೂ ಬೇಡಿಕೆ ವ್ಯಕ್ತವಾಗಿದ್ದು ಲಕ್ಷ್ಮೀ – ಗಣೇಶ ವಿನ್ಯಾಸದ 5 ಮತ್ತು 10 ಗ್ರಾಂ ಬೆಳ್ಳಿ ನಾಣ್ಯಗಳ ಆರ್ಡರ್ 7 ಪಟ್ಟು ಹೆಚ್ಚಾಗಿದೆ.

ಚಿನ್ನದ ನಾಣ್ಯ ಖರೀದಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಹೈದರಾಬಾದ್ ಮತ್ತು ಮುಂಬೈ ನಂತರದ ಸ್ಥಾನದಲ್ಲಿವೆ. ಇನ್ನು ಬೆಳ್ಳಿ ನಾಣ್ಯ ಖರೀದಿಯಲ್ಲಿ ದೆಹಲಿಗರೇ ಮುಂಚೂಣಿಯಲ್ಲಿದ್ದಾರೆ.

ನೋಯ್ಡಾದ ಗ್ರಾಹಕರೊಬ್ಬರು 9 ಆರ್ಡರ್‌ಗಳಲ್ಲಿ ಬರೋಬ್ಬರಿ 5 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಖರೀದಿಸಿದ್ದಾರೆ. ಮುಂಬೈನ ಗ್ರಾಹಕರೊಬ್ಬರು 4.31 ಲಕ್ಷ ರೂ. ವ್ಯಯಿಸಿದ್ದರೆ, ವಾರಂಗಲ್‌ನ ಗ್ರಾಹಕರೊಬ್ಬರು 3.86 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

ಮನೆ ಅಲಂಕಾರ, ಗೃಹೋಪಯೋಗಿ ವಸ್ತುಗಳಿಗೆ ಭರ್ಜರಿ ಡಿಮ್ಯಾಂಡ್‌

ಹಬ್ಬದ ಪ್ರಯುಕ್ತ ಕಿಚನ್ ಮತ್ತು ಡೈನಿಂಗ್ ವಸ್ತುಗಳ ಆರ್ಡರ್ ಶೇ. 45ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಡಿನ್ನರ್ ಸೆಟ್‌ಗಳ ಬೇಡಿಕೆ ಶೇ. 344ರಷ್ಟು ಮತ್ತು ಪ್ರೆಶರ್ ಕುಕ್ಕರ್‌ಗಳ ಬೇಡಿಕೆ ಶೇ. 171ರಷ್ಟು ಜಿಗಿದಿದೆ. ಹಬ್ಬದ ಕಳೆಯನ್ನು ಹೆಚ್ಚಿಸುವ ಚೆಂಡು ಹೂ, ಹೂವಿನ ಹಾರಗಳ ಆರ್ಡರ್ ಶೇ. 42ರಷ್ಟು ಏರಿಕೆಯಾಗಿದೆ. ಮಣ್ಣಿನ ದೀಪಗಳಿಗೆ ಶೇ. 45 ಹಾಗೂ ಎಲ್‌ಇಡಿ ದೀಪಗಳಿಗೆ ಶೇ. 88ರಷ್ಟು ಬೇಡಿಕೆ ಹೆಚ್ಚಾಗಿದೆ.

ಯಾವ ಊರಲ್ಲಿ ಯಾವುದಕ್ಕೆ ಡಿಮ್ಯಾಂಡ್?

ದೇಶಾದ್ಯಂತ ಸಿಹಿತಿಂಡಿ ಆರ್ಡರ್ ಶೇ. 55ರಷ್ಟು ಹೆಚ್ಚಾಗಿದೆ. ಲಡ್ಡು, ಕಾಜು ಕತ್ಲಿ, ಗುಲಾಬ್ ಜಾಮೂನು ಮತ್ತು ಪೇಡಾ ಹೆಚ್ಚು ಮಾರಾಟವಾಗಿವೆ. ವಿಶೇಷವೆಂದರೆ ಪ್ರತಿಯೊಂದು ನಗರವೂ ತನ್ನದೇ ಆದ ಪ್ರಾದೇಶಿಕ ತಿಂಡಿಗಳನ್ನು ನೆಚ್ಚಿಕೊಂಡಿದೆ:

ಸಿಹಿಯ ಜೊತೆಗೆ ಖಾರಕ್ಕೂ ಸೈ ಎಂದಿರುವ ಬೆಂಗಳೂರಿಗರು ಅತಿ ಹೆಚ್ಚು ವಡೆ ಮತ್ತು ಕೋಡುಬಳೆ ಆರ್ಡರ್ ಮಾಡಿದ್ದಾರೆ. ಚೆನ್ನೈ ನಿವಾಸಿಗಳು ಗುಲಾಬ್ ಜಾಮೂನು ಮತ್ತು ಸೀಡೈಗೆ ಜೈ ಎಂದಿದ್ದರೆ, ಅಹಮದಾಬಾದ್ ಹಾಗೂ ಜೈಪುರದಲ್ಲಿ ಸೋನ್ ಪಾಪಡಿ, ಸೇವ್ ಮತ್ತು ಭೇಲ್‌ಗೆ ಬೇಡಿಕೆ ಕಂಡು ಬಂದಿದೆ.

ಪುಣೆ ವಾಸಿಗರು ಭಾಕರ್ ವಾಡಿ ಮತ್ತು ಚೂಡಾಕ್ಕೆ ಮನಸೋತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್‌ ಮಾಡುತ್ತಿದ್ದಾರೆ.

ಹಬ್ಬದಲ್ಲೂ ಆರೋಗ್ಯದ ಕಾಳಜಿ

ಸಿಹಿತಿಂಡಿಗಳ ನಡುವೆಯೂ ಜನರು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಪ್ರೋಟೀನ್ ಚಿಪ್ಸ್ ಆರ್ಡರ್ ಶೇ. 239ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ. ಇದಲ್ಲದೆ ರಾಗಿ, ಜೋಳ, ಸಜ್ಜೆ ಮುಂತಾದ ಸಿರಿಧಾನ್ಯದ ಸ್ನ್ಯಾಕ್ಸ್ ಬೇಡಿಕೆ ಶೇ. 188ರಷ್ಟು ಹಾಗೂ ಮಖಾನಾ ಆರ್ಡರ್‌ ಶೇ. 52ರಷ್ಟು ಹೆಚ್ಚಾಗಿದೆ. ಸಕ್ಕರೆ ಮುಕ್ತ ಸಿಹಿತಿಂಡಿಗಳ ಖರೀದಿಯೂ ಶೇ. 71ರಷ್ಟು ಏರಿಕೆ ಕಂಡಿದೆ.

ಮಧ್ಯರಾತ್ರಿಯೂ ಶಾಪಿಂಗ್ ಭರಾಟೆ

ದೀಪಾವಳಿಯ ಸಿದ್ಧತೆಗಾಗಿ ಗ್ರಾಹಕರು ನಿದ್ದೆ ಬಿಟ್ಟು ಶಾಪಿಂಗ್ ಮಾಡುತ್ತಿದ್ದಾರೆ. ರಾತ್ರಿ 12 ರಿಂದ 2 ಗಂಟೆಯ ನಡುವೆ ಅಲಂಕಾರಿಕ ದೀಪಗಳು (ಶೇ. 903), ಮೇಣದಬತ್ತಿಗಳು (ಶೇ. 289) ಹಾಗೂ ವಿಸ್ಕಿ ಗ್ಲಾಸ್‌ಗಳ (ಶೇ. 136) ಆರ್ಡರ್ ಭಾರಿ ಏರಿಕೆ ಕಂಡಿದೆ. ಜೊತೆಗೆ ಮಧ್ಯರಾತ್ರಿಯ ಹಸಿವು ನೀಗಿಸಲು ಇನ್‌ಸ್ಟಂಟ್ ನೂಡಲ್ಸ್, ಚಿಪ್ಸ್, ಚಾಕಲೇಟ್ ಹಾಗೂ ಹಾಲಿನ ಪ್ಯಾಕೆಟ್‌ಗಳು ಅತಿ ಹೆಚ್ಚು ಡೆಲಿವರಿ ಆಗಿವೆ.

ಮೆಟ್ರೋ ನಗರಗಳನ್ನೇ ಮೀರಿಸಿದ ಸಣ್ಣ ನಗರಗಳು

ಕೇವಲ ಮಹಾನಗರಗಳು ಮಾತ್ರವಲ್ಲದೆ ನಮ್ಮ ಮೈಸೂರು, ತಮಿಳುನಾಡಿನ ಮಧುರೈ, ಬಿಹಾರದ ಪಟ್ನಾ ಮತ್ತು ಆಂಧ್ರದ ತಿರುಪತಿಯಂತಹ ಟೈರ್-2 ನಗರಗಳಲ್ಲೂ ಇನ್‌ಸ್ಟಾಮಾರ್ಟ್ ಮೂಲಕ ಅತಿ ಹೆಚ್ಚು ಆರ್ಡರ್‌ಗಳು ದಾಖಲಾಗುತ್ತಿರುವುದು ವಿಶೇಷವಾಗಿದೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (20)

ಚಿನ್ನದ ನಾಣ್ಯ, ಚೆಂಡು ಹೂ, ಸ್ವೀಟ್‌: ದೀಪಾವಳಿಗೆ ಇನ್‌ಸ್ಟಾಮಾರ್ಟ್‌ನಲ್ಲಿ ಮಧ್ಯರಾತ್ರಿಯೂ ನಿದ್ದೆ ಬಿಟ್ಟು ಶಾಪಿಂಗ್!

by ಕವಿತಾ
November 7, 2026 - 11:45 am
0

Untitled design (19)

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ; ಹೊಲದಲ್ಲಿ ಬೆಳೆದಿದ್ದ 9 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ!

by ಕವಿತಾ
November 7, 2026 - 11:39 am
0

Untitled design (18)

7 ಜನರ ಹತ್ಯೆ ಕೇಸ್‌; ಸೇಲಂ ಕಾಡಿನಲ್ಲಿ ಸುನೀತಾ, ರೂಪವತಿ ಮೃತದೇಹ ಪತ್ತೆ

by ಕವಿತಾ
November 7, 2026 - 11:32 am
0

Untitled design (17)

15 ದಿನಗಳಲ್ಲಿ 7 ಕೊ*ಲೆ, ಮತ್ತೆರಡು ಹತ್ಯೆಗೆ ಸ್ಕೆಚ್! ಪೊಲೀಸರನ್ನೇ ಬೆಚ್ಚಿಬೀಳಿಸಿದ ಇಂದುಶೇಖರ್!

by ಕವಿತಾ
November 7, 2026 - 11:19 am
0

ಸಂಬಂಧಿಸಿದ ಪೋಸ್ಟ್‌ಗಳು

  • ಗುರ್ಲಾಪುರದಲ್ಲಿ (18)
    ಆರೋಗ್ಯಕರ ದೀಪಾವಳಿಗೆ ಸ್ವಿಗ್ಗಿ-ಆನಂದ್ ಸ್ವೀಟ್ಸ್ ಸಾಥ್, ಬೆಂಗಳೂರಿಗರಿಗಾಗಿ ಬಂತು ‘ಶುಗರ್ ಫ್ರೀ’ ಸಿಹಿತಿಂಡಿ!
    November 6, 2026 | 0
  • Untitled design (1)
    ನವರಾತ್ರಿ ಆರಂಭ: ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆ
    October 11, 2026 | 0
  • ಹ್ಮೋ (5)
    ನಾಳೆ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ
    September 13, 2026 | 0
  • Untitled design 2026 08 28T162341.396
    ರಕ್ಷಾಬಂಧನಕ್ಕೆ ದುಬಾರಿ ಬೆಲೆಯ ರಾಖಿಗಳದ್ದೇ ಹವಾ.!: ₹8 ಲಕ್ಷದ ಗೋಲ್ಡ್ ರಾಖಿ ವೈರಲ್
    August 28, 2026 | 0
  • ಅಣ್ಣ ತಂಗಿಯ ಪ್ರೀತಿಯ ಹಬ್ಬ ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!
    ಅಣ್ಣ-ತಂಗಿಯ ಪ್ರೀತಿಯ ಹಬ್ಬ: ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!
    August 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version