ಯಲಹಂಕ ಜನತೆಗೆ ಎಸ್‌.ಆರ್‌ ವಿಶ್ವನಾಥ್‌ ಹಾಟ್ ಫೇವರಿಟ್

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Film 2025 04 04t202045.456

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 2023 ವಿಧಾನಸಭಾ ಫಲಿತಾಂಶದ ಕಡೆ ಗಮನ ಹರಿಸಿದರೆ ಎಸ್.ಆರ್. ವಿಶ್ವನಾಥ್‌ ಬಿಜೆಪಿಯಿಂದ ಸರ್ಧಿಸಿ 1,41,538 ( 52 %)ಮತ ಪಡೆದು 64,110 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೇಶವ ರಾಜಣ್ಣ.ಬಿ ಕಾಂಗ್ರೆಸ್‌ ಚಿಹ್ನೆಯಲ್ಲಿ ಸರ್ಧಿಸಿ 77,428 (28 %)ಮತ, ಜೆಡಿಎಸ್ ನ ಎಂ.ಮುನೇಗೌಡ 44,491 (16 %) ಮತಗಳಿಂದ ಪರಾಭವಗೊಂಡಿದ್ದರು.

ಯಲಹಂಕ ಕ್ಷೇತ್ರದ ಚಿತ್ರಣ..

ಯಲಹಂಕ ವಿಧಾನಸಭಾ ಕ್ಷೇತ್ರವು ಬಹಳ ವಿಶೇಷತೆಗಳಿಂದ ಕೂಡಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಮತ್ತು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಮತದಾರರನ್ನ ಒಳಗೊಂಡಿದೆ. 2008ಕ್ಕೂ ಮೊದಲು ಮೀಸಲಾತಿ ವಿಧಾನಸಭಾ ಕ್ಷೇತ್ರವಾಗಿದ್ದ ಯಲಹಂಕ ಕ್ಷೇತ್ರ ಪುನರ್‌‌ ವಿಂಗಡನೆ ಬಳಿಕ ಸಮಾನ್ಯ ಕ್ಷೇತ್ರವಾಗಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯ ವಿಶ್ವನಾಥ್‌ ಗೆದ್ದು ಬರುತಿದ್ದಾರೆ. ಶಾಸಕ ವಿಶ್ವನಾಥ್‌‌ ಸದ್ಯ ಆರು ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಇಲ್ಲಿ ಒಕ್ಕಲಿಗ ಮತದಾರರು ನಿರ್ಣಾಯಕವಾಗಿರುವ ಕ್ಷೇತ್ರವಾಗಿದ್ದು, ಒಕ್ಕಲಿಗರ ಬಳಿಕ ಮುಸ್ಲಿಂ ಮತ್ತು ದಲಿತ ಮತದಾರರೇ ಅಧಿಕ ವಾಗಿದ್ದರೆ.

ಎಸ್‌ ಆರ್‌ ವಿಶ್ವನಾಥ್‌ ಯಲಹಂಕದಿಂದ ಎಂಟು ಕೀಮೀ ದೂರದಲ್ಲಿ ಇರುವ ಸಿಂಗಾನಾಯಕನಹಳ್ಳಿಗೆ ಸೇರಿದವರಾಗಿದ್ದು, ರೆಡ್ಡಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. 1973ರಿಂದಲೂ ಆರ್‌‌ಎಸ್‌‌ಎಸ್‌‌ ಜತೆ ನಂಟು ಬೆಳಿಸಿದ್ದರು. ಎಚ್‌ಎಎಲ್‌ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ ಕಾರ್ಮಿಕರ ನಾಯಕರಾಗಿ ಗುರುತಿಸಿಕೊಂಡು ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟುರು. 2004ರಲ್ಲಿ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಗೆದಿದ್ದ ಅವರು 2008ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಯಾವುದೇ ಬಣ ಅಂತ ತಲೆ ಕೆಡಿಸಿಕೊಳ್ಳದೇ ಸಂಘಟನೆಯಲ್ಲಿ ಸಕ್ರಿಯವಾಗಿರುವುದು ಕ್ಷೇತ್ರದ ಸಂಪೂರ್ಣ ಹಿಡಿತವನ್ನು ವಿಶ್ವನಾಥ್‌‌ ಸಾಧಿಸಿದ್ದಾರೆ. ವಿಶ್ವನಾಥ್‌ ಮುಂದೆ ಕಾಂಗ್ರೆಸ್‌ನ ಕೇಶವ ರಾಜಣ್ಣ ಅಗ್ರೆಸಿವ್‌ ಪೊಲಿಟಿಷಿಯನ್‌ ಅಲ್ಲ, ಚುನಾವಣಾ ಸಂದರ್ಭದಲ್ಲಿ ಮಾತ್ರ ಕ್ಷೇತ್ರದ ಕಾಣಿಸಿಕೊಳ್ಳುತ್ತಾರೆ.ಜೆಡಿಎಸ್‌‌ ನ ಮುನೇಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಆದ್ರೆ ಜೆಡಿಎಸ್‌ ಸಂಘಟನೆ ಬಾರೀ ವೀಕ್‌‌ ಆಗಿದೆ.

ಮೂಡ್ ಆಫ್‌ ಕರ್ನಾಟಕ ಯಲಹಂಕದಲ್ಲಿ ಹೇಗಿದೆ ಚಿತ್ರಣ.?

ಎಸ್‌.ಆರ್‌ ವಿಶ್ವನಾಥ್‌ಗೆ ಲೋಕಲ್ ನಾಯಕರಾಗಿದ್ದು, ಒಕ್ಕಲಿಗ ಸಮುದಾಯದ ಜೊತೆಗೆ ಹಿಂದುತ್ವ, ಹಿಂದೂ ಮತದಾರರು ವಿಶ್ವನಾಥ್‌ ಪರ ಮತ ಹಾಕುತ್ತಾ ಬಂದಿದ್ದಾರೆ. ಜನರ ಕೈಗೆ 24x 7ಸಿಗುವ ನಾಯಕ.ಪತ್ನಿ ವಾಣಿ ‌, ಮಗ ಅಲೋಕ್‌ ಕೂಡ ಕ್ಷೇತ್ರದಲ್ಲಿ ಸಕ್ರಿಯವಾಗಿರುತ್ತಾರೆ.ಕಾಂಗ್ರೆಸ್‌ ಸರ್ಕಾರ ಇದ್ದರು ಅನುದಾನ ಪಡೆಯುವಲ್ಲಿ ಸಕ್ಸಸ್‌ ಕಂಡಿದ್ದಾರೆ.ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದುಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳ ಕೊರತೆ ವಿಶ್ವನಾಥ್‌ಗೆ ಲಾಭವಾಗಿದೆ.ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಈಗಲೂ ಯಲಹಂಕದಲ್ಲಿ ಹಾಟ್ ಫೇವರಿಟ್ ಎಸ್‌.ಆರ್‌ ವಿಶ್ವನಾಥ್‌.

ಯಲಹಂಕ ಕ್ಷೇತ್ರದ ಆಕಾಂಕ್ಷಿಗಳು?
ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಎಸ್.ಆರ್. ವಿಶ್ವನಾಥ್ ಗೆ ಬಿಜೆಪಿ ಟಿಕೆಟ್ ಸಿಗುವುದು ಖಚಿತ.
ಕಾಂಗ್ರೆಸ್‌ ನಿಂದ ಕೇಶವ ರಾಜಣ್ಣ, ಜೆಡಿಎಸ್ ಪರವಾಗಿ ಮುನೇಗೌಡ ಸರ್ಧೆ ಮಾಡುವ ನಿರೀಕ್ಷೆಗಳು ಇವೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version