ತುಮಕೂರು: ಬೇಸಿಗೆ ಆರಂಭ ಆಗುತ್ತಿದೆ ಮತ್ತೊಂದು ಕಡೆ ನೀರಿನ ಅಭಾವವು ಹೆಚ್ಚುತ್ತಿದೆ ಈ ಮಧ್ಯೆ ನಮ್ಮನ್ನ ಸರ್ಕಾರ ಕಡೆಗಣಿಸುತ್ತಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ವಾಟರ್ ಮ್ಯಾನ್‌ಗಲು ಆರೋಪಿಸಿದ್ದಾರೆ.
ಜಿಲ್ಲಾ ನೀರು ಸರಬರಾಜು ನೌಕರರ ಸಂಘದಿಂದ ವಾಟರ್ ಮ್ಯಾನ್‌ಗಳು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ನೇರ ನೇಮಕಾತಿ, ಖಾಲಿ ಹುದ್ದೆ ಭರ್ತಿ, ಬಾಕಿ ಪಿಎಫ್, ಗುತ್ತಿಗೆ ಪದ್ದತಿ ರದ್ದು, ಸಮಾನ ವೇತನ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ವಿವಿಧ ಬೇಡಿಕೆಗಳೊಂದಿಗೆ ಮುಷ್ಕರ ಆರಂಭಿಸಿರುವ ಈ ನೌಕರರು ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಈ ಬೇಡಿಕೆಗಳ ಸಂಬಂಧದಲ್ಲಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.