ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ವರ್ಷ ಕಳೆದರೂ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಜನಪ್ರತಿನಿಧಿಗಳ ಆಡಳಿತವಿಲ್ಲದೆ ಅಧಿಕಾರಿಗಳ ಅಂಧಾ ದರ್ಭಾರ್ ಸಾರ್ವಜನಿಕರನ್ನು ಹೈರಾಣಾಗಿಸಿದೆ.
ಇಂದು ರಾಜ್ಯ ಚುನಾವಣಾ ಆಯುಕ್ತರು ಸುದ್ದಿಗಾರರೊಂದಿಗೆ ಮಾತನಾಡಿ ಶಿವಮೊಗ್ಗ, ಮೈಸೂರು, ತುಮಕೂರು, ಮಂಗಳೂರು, ದಾವಣಗೆರೆ ಸೇರಿ ಐದು ಪಾಲಿಕೆಗಳ ಚುನಾವಣೆಯನ್ನು ಈ ವರ್ಷವೇ ನಡೆಸಲು ಆಯೋಗ ಸಿದ್ದವಿದೆ. ಸರ್ಕಾರ ಮೀಸಲಾತಿ ನಿಗಧಿ ಮಾಡಿಕೊಟ್ಟರೆ ಕೂಡಲೇ ಚುನಾವಣೆ ನಡೆಸಲಾಗುವುದು. ಒಂದು ವೇಳೆ ಮೀಸಲಾತಿ ಪಟ್ಟಿ ಕೊಡದಿದ್ದರೆ ಹಳೇ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಲಾಗುವುದು ಎಂದು ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.