ಕಲಬುರಗಿ: ದಾಸೋಹದ ದಿಗ್ಗಜ, ಲಕ್ಷಾಂತರ ಭಕ್ತರ ಪಾಲಿನ ಆಶ್ರಯಸ್ಥಾನರಾಗಿದ್ದ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ ಮಹಾದಾಸೋಹಿ ಪೂಜ್ಯ ಶರಣಬಸಪ್ಪ ಅಪ್ಪಾ (90) ಅವರು ತೀವ್ರ ಅನಾರೋಗ್ಯದಿಂದ ಇಂದು ಲಿಂಗೈಕ್ಯರಾದರು.
ಅಪ್ಪಾಜಿಯವರು ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ವೈದ್ಯರು ಗೃಹ ಹಾರೈಕೆ ಶಿಫಾರಸ್ಸು ಮಾಡಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರದೆ ಇಂದು ದಾಸೋಹ ಮಹಾಮನೆ, ಕಲಬುರಗಿಯಲ್ಲಿ ಲಕ್ಷಾಂತರ ಭಕ್ತರನ್ನು ಅಗಲಿ ಲಿಂಗೈಕ್ಯರಾದರು.
ADVERTISEMENT
ADVERTISEMENT
ಪೂಜ್ಯ ಅಪ್ಪಾಜಿಯವರು ಕಲಬುರಗಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ಸಮಾಜ ಸೇವೆ ಮತ್ತು ಶ್ರದ್ಧಾ-ಭಕ್ತಿಯ ಮೂಲಕ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದರು. ಅವರ ಲಿಂಗೈಕ್ಯದಿಂದ ಭಕ್ತಸಮುದಾಯ ದಿಗ್ಭ್ರಮೆಯಲ್ಲಿದೆ.





