ಬೆಂಗಳೂರು: ಅಕ್ರಮ ಚಿನ್ನ ಸಾಗಾಟ (ಗೋಲ್ಡ್ ಸ್ಮಗ್ಲಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಫಿಪೊಸಾ ಕಾಯ್ದೆಯಡಿ (COFEPOSA) ಬಂಧನಕ್ಕೊಳಗಾದ ಕಾಲಿವುಡ್ ನಟಿ ರನ್ಯಾ ರಾವ್‌ರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಅವರ ತಾಯಿ ರೋಹಿಣಿ ಸಲ್ಲಿಸಿದ ಹೆಬಿಯಾಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಇಂದು ಕೈಗೆತ್ತಿಕೊಂಡಿತು. ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಲಾಗಿದೆ.<
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಕಾಫಿಪೊಸಾ ಕಾಯ್ದೆಯಡಿ ರನ್ಯಾ ರಾವ್‌ರ ಬಂಧನವನ್ನು ಸಲಹಾ ಮಂಡಳಿಯು ದೃಢೀಕರಿಸಿದೆ ಎಂದು ಹೈಕೋರ್ಟ್‌ಗೆ ತಿಳಿಸಿದರು. ಆದರೆ, ಬಂಧನಕ್ಕೆ ನೀಡಲಾದ ಕಾರಣಗಳು ದೋಷಪೂರಿತವಾಗಿದ್ದು, ಕಾನೂನುಬಾಹಿರವಾಗಿವೆ ಎಂದು ವಾದಿಸಿದರು. ಈ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿದ ಹೈಕೋರ್ಟ್, ಮುಂದಿನ ವಿಚಾರಣೆಗೆ ಆಗಸ್ಟ್ 28ರ ದಿನಾಂಕವನ್ನು ನಿಗದಿಪಡಿಸಿತು.