ರಾಮ ನಾಮ ಹಾಡಿರೋ ರಾಮ ಬರುವನು. ನಾಳೆ ಎಲ್ಲೆಡೆ ರಾಮನವಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನಲೇ ದೇವಸ್ಥಾನಗಳಲ್ಲಿ ರಾಮನ ಪೂಜೆಗಾಗಿ ಸಕಲ ಸಿದ್ಧತೆಗಳು ಆರಂಭವಾಗಿದೆ. ರಾಮನವಮಿ ಅಂದ್ರೆ ಮೊದಲಿಗೆ ನೆನಪಾಗೋದು ಕೋಸಂಬರಿ ಹಾಗೂ ಪಾನಕ ಹೀಗಾಗಿ ರಾಮನ ದರ್ಶನಕ್ಕೆ ಹೇಗೆಲ್ಲ ಸಿದ್ಧತೆ ಅಗ್ತಿದೆ.
ನಮ್ಮ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬ ಕಳೆದ ಒಂದು ವಾರದಲ್ಲಿ ಬರುವ ಮೊಟ್ಟ ಮೊದಲ ಹಬ್ಬ ಶ್ರೀ ರಾಮ ನವಮಿ. ರಾಮನ ದರ್ಶನಕ್ಕೆ ಹಾಗೂ ಆಗಮನಕ್ಕಾಗಿ ಈಗಾಗಲೇ ಸಿಲಿಕಾನ್ ಸಿಟಿ ರೆಡಿ ಅಗ್ತಿದೆ. ರಾಜಾಜಿನಗರದ ಶ್ರೀರಾಮ ಮಂದಿರದಲ್ಲಿ ಸಕಲ ಸಿದ್ಧತೆಗಳು ಜೋರಾಗಿದ್ದು, ರಾಮನಿಗೆ ನಾಳೆ ವಿಶೇಷ ಪೂಜೆ, ಇಂದು ಕಲರ್ ಕಲರ್ ಹೂ, ವಿದ್ಯುತ್ ದೀಪಗಳಿಂದ ದೇವಸ್ಥಾನ ಅಲಂಕಾರ ಮಾಡಲಾಗಿದೆ. ರಾಮನ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ, ರಾಮನ ನಾಮ ಬರೆಯೋದಕ್ಕೆ ಮುಂದಾಗಿದ್ದಾರೆ.
ಇನ್ನೂ ಭಾನುವಾರ ಬಂದ್ರೆ ಸಾಕು ಎಲ್ಲರೂ ಪಾರ್ಟಿ ಮೂಡ್ ನಲ್ಲಿರುತ್ತಾರೆ. ಆದ್ರೆ ಬೆಂಗಳೂರಿಗರಿಗೆ ಶಾಕ್ ಆಗುವಂತೆ ಈ ಬಾರಿಯೂ ರಾಮನವಮಿ ಪ್ರಯುಕ್ತ ಸಿಲಿಕಾನ್ ಸಿಟಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹಿಂಸೆ ನಿಷೇಧ ಮಾಡಲಾಗಿದೆ. ಮೀನು,ಕೋಳಿ,ಕುರಿ ಸೇರಿದಂತೆ ಯಾವುದೇ ಮಾಂಸ ಏಪ್ರಿಲ್ 06 ಸಿಗೋದಿಲ್ಲ.
ರಾಮನವಮಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಾಜ್ಜಗಿದೆ. ಯುಗಾದಿ ಹಬ್ಬ ಕಳೆದ ಒಂದು ವಾರಕ್ಕೆ ಬರುವ ರಾಮನವಮಿಗೆ ತಯಾರಿ ಜೋರಾಗಿದೆ.





