• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು ಮೈಸೂರು

ದಸರಾ ಸಂಭ್ರಮಕ್ಕೆ ಗಜಪಡೆ ಸಜ್ಜು; ಈ ಬಾರಿ ಮೀಸಲು ಆನೆಯಾಗಿ ಭೀಮ!

ಕವಿತಾ by ಕವಿತಾ
August 21, 2026 - 3:56 pm
in ಮೈಸೂರು
0 0
0
Untitled design (94)

ಮೈಸೂರು ಆ. 21: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯ ಗಜಪಡೆಗಳ ಆಗಮನದೊಂದಿಗೆ ಮಹೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ.

ಆಗಸ್ಟ್ 26ರಂದು ಸಾಂಪ್ರದಾಯಿಕ ಗಜಪಯಣ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭವಾಗಲಿವೆ. ಈ ಬಾರಿ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ವೀರನಹೊಸಳ್ಳಿಯಿಂದ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಕಾಡಿನಿಂದ ನಾಡಿಗೆ ಆಗಮಿಸುವ ಆನೆಗಳಿಗೆ ವೀರನಹೊಸಳ್ಳಿಯಲ್ಲಿ ವಿಶೇಷ ಗಜಪೂಜೆ ನೆರವೇರಿಸಿ, ಸಂಪ್ರದಾಯ ಬದ್ಧವಾಗಿ ಸ್ವಾಗತಿಸಲಾಗುತ್ತದೆ.

RelatedPosts

ಹಿಂದೂ ದೇವಸ್ಥಾನದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಪತ್ತೆ: ಇಬ್ಬರ ವಿರುದ್ಧ FIR

ಮೈಸೂರು ದಸರಾ 2026ಕ್ಕೆ ನಾಳೆ ಚಾಲನೆ: ಅರಮನೆ-ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ

ಮೈಸೂರು ದಸರಾ ಪ್ರವಾಸಿಗರಿಗೆ ಗುಡ್‌ನ್ಯೂಸ್‌: ನಗರ ಸುತ್ತಾಟಕ್ಕೆ ಅಂಬಾರಿ ಬಸ್‌ ಸಿದ್ಧ

ಮೈಸೂರು ದಸರಾ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ಬ್ರೇಕ್‌

ADVERTISEMENT
ADVERTISEMENT

ಬಳಿಕ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಕರೆತರಲಾಗುತ್ತದೆ. ಅಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ನೀಡಿದ ನಂತರ ಆನೆಗಳನ್ನು ಮೈಸೂರು ಅರಮನೆ ಆವರಣಕ್ಕೆ ಕರೆತರಲಾಗುತ್ತದೆ. ಅರಮನೆ ಪ್ರವೇಶಿಸಿದ ಬಳಿಕ ಜಂಬೂಸವಾರಿಗೆ ಅಗತ್ಯವಿರುವ ತರಬೇತಿ ಹಾಗೂ ಸಿದ್ಧತೆಗಳು ಮತ್ತಷ್ಟು ಚುರುಕುಗೊಳ್ಳಲಿವೆ.

ಈ ಬಾರಿ ದಸರಾ ಮಹೋತ್ಸವಕ್ಕಾಗಿ ಒಟ್ಟು 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 12 ಆನೆಗಳು ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸಿ ತನ್ನ ಗಜಗಾಂಭಿರ್ಯದಿಂದ ದಸರಾಕ್ಕೆ ಮತ್ತಷ್ಟು ಮೆರಗು ನೀಡಲಿದೆ. ಇನ್ನು ಎರಡು ಆನೆಗಳನ್ನು ಮೀಸಲು ಪಡೆಯಾಗಿ ಇರಿಸಲಾಗುತ್ತದೆ. ಮುಖ್ಯ ಗಜಪಡೆಯಲ್ಲಿರುವ ಯಾವುದೇ ಆನೆಗೆ ಆರೋಗ್ಯ ಸಮಸ್ಯೆ ಅಥವಾ ಇತರ ತೊಂದರೆ ಎದುರಾದರೆ ಮೀಸಲು ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ.

ಮೊದಲ ಹಂತದಲ್ಲಿ 9 ಆನೆಗಳ ಆಗಮನ

ಆಗಸ್ಟ್ 26 ರಂದು ಮೊದಲ ಹಂತದಲ್ಲಿ ಒಟ್ಟು ಒಂಬತ್ತು ಆನೆಗಳು ವೀರನಹೊಸಳ್ಳಿಯಿಂದ ಮೈಸೂರಿಗೆ ಪ್ರಯಾಣಿಸಲಿವೆ. ದುಬಾರೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಕಾವೇರಿ ಆನೆಗಳು ಆಗಮಿಸಲಿವೆ. ಬಳ್ಳೆ ಶಿಬಿರದಿಂದ ಮಹೇಂದ್ರ ಮತ್ತು ಲಕ್ಷ್ಮಿ, ಮತ್ತಿಗೋಡು ಶಿಬಿರದಿಂದ ಏಕಲವ್ಯ ಗಜಪಡೆ ಸೇರಲಿದೆ.

ಎರಡನೇ ಹಂತದಲ್ಲಿ 3 ಆನೆಗಳು

ಎರಡನೇ ಹಂತದಲ್ಲಿ ದೊಡ್ಡ ಅರವೆ ಶಿಬಿರದ ರೂಪಾ, ರಾಮಾಪುರ ಬಂಡೀಪುರ ಶಿಬಿರದ ಚೈತ್ರಾ ಹಾಗೂ ಮತ್ತಿಗೋಡು ಶಿಬಿರದ ಶ್ರೀಕಂಠ ಮೈಸೂರಿಗೆ ಆಗಮಿಸಲಿವೆ. 57 ವರ್ಷದ ಶ್ರೀಕಂಠ ಈ ಬಾರಿ ದಸರಾ ಗಜಪಡೆಯಲ್ಲಿರುವ ಅತ್ಯಂತ ಹಿರಿಯ ಆನೆಯಾಗಿದೆ.

ಭೀಮ ಈ ಬಾರಿ ಮೀಸಲು ಪಟ್ಟಿಗೆ

ಮೈಸೂರು ದಸರೆಯೊಂದಿಗೆ ವಿಶೇಷವಾಗಿ ಗುರುತಿಸಿಕೊಂಡಿರುವ ಭೀಮ ಆನೆ ಈ ಬಾರಿ ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. 26 ವರ್ಷದ ಭೀಮ ತನ್ನ ಸರಳ ಸ್ವಭಾವ ಮತ್ತು ಸ್ನೇಹಪರ ಗುಣಗಳಿಂದ ಜನಪ್ರಿಯವಾಗಿದೆ. ಭೀಮ ಆನೆ ಜನರ ಅಚ್ಚು ಮೆಚ್ಚಿನ ಆನೆಗಳಲ್ಲಿ ಒಂದಾಗಿದೆ.  ರಸ್ತೆಯಲ್ಲಿ ಜನರು ‘ಭೀಮ’ ಎಂದು ಕರೆದಾಗ ತಿರುಗಿ ಪ್ರತಿಕ್ರಿಯಿಸುತ್ತಿದ್ದ ಭೀಮನ ವರ್ತನೆ ಜನರ ಗಮನ ಸೆಳೆದಿತ್ತು.

ಆದರೆ ಈ ಬಾರಿ ಭೀಮನಿಗೆ ಮದ ಇರುವ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಭಾಗವಹಿಸಲು ಸಿದ್ಧವಾಗಿಲ್ಲ. ಹೀಗಾಗಿ ಭೀಮನನ್ನು ಮೀಸಲು ಆನೆಯಾಗಿ ಇರಿಸಲಾಗಿದೆ. ದುಬಾರೆ ಶಿಬಿರದ 51 ವರ್ಷದ ಹರ್ಷ ಆನೆಯೂ ಮೀಸಲು ಪಡೆಯಲ್ಲಿರಲಿದೆ.

ಆನೆಗಳಿಗೆ ವಿಶೇಷ ತರಬೇತಿ

ದಸರಾ ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಹೀಗಾಗಿ ಗಜಪಡೆಗಳಿಗೆ ವಿಶೇಷ ತರಬೇತಿ ಮತ್ತು ಆರೈಕೆ ನೀಡಲಾಗುತ್ತದೆ. ಕಾಡಿನಿಂದ ನಾಡಿಗೆ ಬಂದ ಬಳಿಕ ಆನೆಗಳು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಿಸಲಾಗುತ್ತದೆ.

ಇದರ ಜೊತೆಗೆ ಪೌಷ್ಟಿಕ ಆಹಾರ, ಅಗತ್ಯ ವೈದ್ಯಕೀಯ ತಪಾಸಣೆ ಹಾಗೂ ಮೆರವಣಿಗೆಗೆ ಬೇಕಾದ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಅಕ್ಟೋಬರ್ 11 ರಂದು ದಸರಾ ಮಹೋತ್ಸವ ಆರಂಭವಾಗಲಿದ್ದು, ಅಕ್ಟೋಬರ್ 21 ರಂದು ಜಂಬೂಸವಾರಿ ನಡೆಯಲಿದೆ. ಹೀಗಾಗಿ ಆಗಸ್ಟ್ 26 ರಿಂದಲೇ ಗಜಪಡೆಯ ತರಬೇತಿ ಮತ್ತು ಸಿದ್ಧತೆಗಳು ಆರಂಭವಾಗಲಿವೆ.

ಗಜಪಡೆಗಳ ಆಗಮನದೊಂದಿಗೆ ಮೈಸೂರಿನಲ್ಲಿ ದಸರಾ ಸಂಭ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಅರಮನೆ ನಗರಿ ಮೈಸೂರು ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಲು ಸಜ್ಜಾಗುತ್ತಿದೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ರಸ್ತೆಯಲ್ಲಿ (10)

ವಿಚ್ಛೇದನದ ಬಳಿಕ ‘ಮದ್ಯದ ದಾಸನಾಗಿ ಪುನರ್ವಸತಿ ಕೇಂದ್ರ ಸೇರಿದ್ದೆ’: ಯುಜ್ವೇಂದ್ರ ಚಾಹಲ್

by ಶಾಲಿನಿ ಕೆ. ಡಿ
October 18, 2026 - 6:39 pm
0

ರಸ್ತೆಯಲ್ಲಿ (9)

ಹಿಂದೂ ದೇವಸ್ಥಾನದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಪತ್ತೆ: ಇಬ್ಬರ ವಿರುದ್ಧ FIR

by ಶಾಲಿನಿ ಕೆ. ಡಿ
October 18, 2026 - 6:08 pm
0

ರಸ್ತೆಯಲ್ಲಿ (8)

ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ

by ಶಾಲಿನಿ ಕೆ. ಡಿ
October 18, 2026 - 5:10 pm
0

ರಸ್ತೆಯಲ್ಲಿ (7)

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್

by ಶಾಲಿನಿ ಕೆ. ಡಿ
October 18, 2026 - 4:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಸ್ತೆಯಲ್ಲಿ (9)
    ಹಿಂದೂ ದೇವಸ್ಥಾನದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಪತ್ತೆ: ಇಬ್ಬರ ವಿರುದ್ಧ FIR
    October 18, 2026 | 0
  • ಮೈಸೂರು (5)
    ಮೈಸೂರು ದಸರಾ 2026ಕ್ಕೆ ನಾಳೆ ಚಾಲನೆ: ಅರಮನೆ-ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ
    October 10, 2026 | 0
  • ಮೈಸೂರು
    ಮೈಸೂರು ದಸರಾ ಪ್ರವಾಸಿಗರಿಗೆ ಗುಡ್‌ನ್ಯೂಸ್‌: ನಗರ ಸುತ್ತಾಟಕ್ಕೆ ಅಂಬಾರಿ ಬಸ್‌ ಸಿದ್ಧ
    October 10, 2026 | 0
  • Untitled design 2026 10 10T122422.459
    ಮೈಸೂರು ದಸರಾ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ಬ್ರೇಕ್‌
    October 10, 2026 | 0
  • ಕಾಳಸಂತೆಯಲ್ಲಿ ಮೈಸೂರು ದಸರಾ ಪಾಸ್ ಮಾರಾಟ
    ಕಾಳಸಂತೆಯಲ್ಲಿ ಮೈಸೂರು ದಸರಾ ಪಾಸ್ ಮಾರಾಟ: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
    October 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version