ಬಿಗ್ ಬಾಸ್ ರಿಯಾಲಿಟಿ ಶೋದ ಹಿಂದಿನ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಅವರ ಮೇಲೆ ಇತ್ತೀಚೆಗೆ ಲ್ಸ್‌ಗಾಗಿ ಮಕ್ಕೊಂದನ್ನು ಬಳಸಿ ವಿಚಾರಣೆಗೆಂದು ಬಂದಾಗ ಬೇರೊಂದು ಮಚ್ಚನ್ನು ನೀಡಿ ಸದ್ಯ ಪೊಲೀಸರು ಬಂಧನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಇನ್ನೊಬ್ಬ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಅವರಿಗೂ ಸಹ ಬಂಧನದ ಭೀತಿ ಎದುರಾಗಿದೆ. ಕಾರಣ? ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ನಾಡ ಚಾಮುಂಡೇಶ್ವರಿ ದೇವತೆಗೆ ಅವಮಾನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.
ರಕ್ಷಕ್, ತಮ್ಮೊಂದಿಗೆ ನಟಿಸುತ್ತಿದ್ದ ಕಲಾವಿದೆ ಒಬ್ಬರಿಗೆ, ‘ನಾವು ನಿಮ್ಮೂರವೋ ಕಣೋ. ಮಂಡ್ಯದವು. ನಿಮ್ಮನ್ನ ನೋಡ್ತಾ ಇದ್ದಂಗೇನೆ ಅನ್ನೊಂಡೆ.ತಾಯಿ ಚಾಮುಂಡೇಶ್ವರಿ ಸೀರೆ, ಒಡವೆ ಎಲ್ಲ ಬಿಚ್ಚಿಟ್ಟು ಪ್ಯಾಂಟ್ ಶರ್ಟ್ ಹಾಕೊಂಡು ಒಳ್ಳೆ ಟ್ರಿಪ್ ಹೊಡಿತಾ ಇದಾರೆ” ಎಂದು ರಕ್ಷಕ್ ಕಾರ್ಯಕ್ರಮ ತಮ್ಮ ಜತೆ ನಡಿಸುತ್ತಿದ್ದ ಕಲಾವಿದೆಗೆ ಹೇಳಿದ ಡೈಲಾಗ್ ಇದು. ಇದು ಕಾರ್ಯಕ್ರಮದ ಯಾರೊಬ್ಬರೂ ಬರೆದ ಸಂಭಾಷಣೆಯಲ್ಲ ಎಂದು ತಿಳಿದು ಬಂದಿದೆ. ಈ ಡೈಲಾಗ್ ನಟ ದರ್ಶನ್ ಅವರ ಬುಲ್ ಬುಲ್ ಚಿತ್ರದ್ದು ಎಂದು ತಿಳಿದರೂ, ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದರು.
Le so-called Rboss crct agi matadoddu kalyo…Hindu organizations
Nimma cheap tevlige tayi Chamundeshwari hesru yake togaltya😬
Yako Shavasa dosha ansutte 😴 pic.twitter.com/IZZ0H4j8MF— Virat👑Rocky✨️ (@Virat_Rocky18) March 20, 2025
ಸಂಘಟನೆಗಳು ರಕ್ಷಕ್‌ನಿಗೆ ಮೈಸೂರು ಚಾಮುಂಡಿಬೆಟ್ಟದಲ್ಲಿ ಕ್ಷಮೆ ಯಾಚಿಸಲು ಒತ್ತಾಯ ಮಾಡಿವೆ. “ಇಲ್ಲದಿದ್ದರೆ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುವುದು” ಎಂದು ಹೇಳಿದ್ದಾರೆ. ರಜತ್ ಮತ್ತು ವಿನಯ್ ಬಂಧನದ ನಂತರ ಈ ಹೊಸ ಪ್ರಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಗೆ ಎಡೆಮಾಡಿದೆ.
ಈ ಹಿಂದೆ ರಕ್ಷಕ್ ಅವರ ಈ ಡೈಲಾಗ್‌ಗೆ ಟೀಕೆಗಳು ಹೊರಹಾಕಲ್ಪಟ್ಟಿದ್ದವು. ಆದರೆ, ಇದೀಗ ಪೊಲೀಸ್ ಕ್ರಮ ಕೈಗೊಳ್ಳುವ ಸಾಧ್ಯತೆಯಿಂದ ಸ್ಥಿತಿ ಗಂಭೀರವಾಗಿದೆ. ರಕ್ಷಕ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡದಿರುವುದು ವಿವಾದವನ್ನು ಹೆಚ್ಚಿಸಿದೆ.





