ಕಲಬುರಗಿ: ಕಲಬುರಗಿ ನಗರದ ಗಾಜಿಪುರ ಬಡಾವಣೆಯ ನಿವಾಸಿ ಆನಂದ್ ಎಂಬಾತ ಕಳೆದ ಎರಡು ವರ್ಷದ ಹಿಂದೆ ಸ್ನೇಹಾ ಎಂಬ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಡ ಹೆಂಡತಿ ಇಬ್ಬರು ಚೆನ್ನಾಗಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಗಂಡ-ಹೆಂಡತಿಯ ಮಧ್ಯೆ ಗಲಾಟೆ ಆಗುತ್ತಿತ್ತು.
ಗಲಾಟೆ ಆದಾಗೆಲ್ಲಾ ಹೆಂಡತಿ ಸ್ನೇಹಾ ತವರು ಮನೆಗೆ ಹೋಗುತ್ತಿದ್ದಳು. ಮತ್ತೆ ಕೆಲ ದಿನಗಳ ಬಳಿಕ ವಾಪಸ್ ಆಗುತ್ತಿದ್ದಳು. ಅದರಂತೆ ಕಳೆದ ತಿಂಗಳು ಕೂಡ ಗಂಡ-ಹೆಂಡತಿಯ ಮಧ್ಯೆ ಜಗಳವಾಗಿ ಹೆಂಡತಿ ತವರು ಮನೆ ಸೇರಿಕೊಂಡಿದ್ದಳು.
ADVERTISEMENT
ADVERTISEMENT
ಇತ್ತ ಆನಂದ್ ಸಹೋದರನ ಮದುವೆ ಫಿಕ್ಸ್ ಆಗಿದ್ದರಿಂದ ಆನಂದ್ ತವರು ಮನೆಗೆ ಹೋಗಿದ್ದ ಹೆಂಡತಿಯನ್ನ ವಾಪಸ್ ಬರುವಂತೆ ಕರೆದಿದ್ದಾನೆ. ಇದರಿಂದ ಕೇರಳಿದ ಸ್ನೇಹಾ ಸಹೋದರರು ಚಾಕುವಿನಿಂದ ಇರಿದು ಆನಂದ್ ಕೊಲೆಗೆ ಯತ್ನಿಸಿದ್ದಾರೆ.