ಜಯನಗರದಲ್ಲಿ ಸೌಮ್ಯ ಪರ ಒಲವು, ಸೂರ್ಯನ ನಿರೀಕ್ಷೆಯಲ್ಲಿ ಬಿಜೆಪಿ

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Film 2025 04 04t215029.637

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಜಯನಗರ ವಿಧಾನಸಭಾ ಕ್ಷೇತ್ರದ 2023 ವಿಧಾನಸಭಾ ಫಲಿತಾಂಶ ನೋಡುವುದಾದರೆ ಸಿಕೆ ರಾಮಮೂರ್ತಿ ಬಿಜೆಪಿ ಪರ 57,797 ( 48 %) ಕಾಂಗ್ರೆಸ್ ನ ಸೌಮ್ಯ ರೆಡ್ಡಿ 57,781 ( 48 %) ಜೆಡಿಎಸ್ ನ
ಕಾಳೇಗೌಡ 1226 ( 1 %) ಮತಗಳು ಪಡೆದಿದ್ದರು. ಜಿದ್ದಾಜಿದ್ದಿನ ಫಲಿತಾಂಶದಲ್ಲಿ ಕೊನೆ ಕ್ಷಣದಲ್ಲಿ ಸಿಕೆ ರಾಮಮೂರ್ತಿ ಕೇವಲ 16 ಮತ ಗಳಿಂದ ಗೆಲವುಸಾದಿಸಿದ್ದರು.

ಜಯನಗರ ಕ್ಷೇತ್ರದ ಚಿತ್ರಣ..

ಅತಿಹೆಚ್ಚು ಸುಶಿಕ್ಷಿತರನ್ನ ಒಳಗೊಂಡಿರುವ ಜಯನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬರಲಿದೆ. 1989ರಿಂದಲೂ ರಾಮಲಿಂಗರೆಡ್ಡಿ ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ರಾಗಿದ್ದರು. ನಂತರ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಾದಾಗ ಬಿಟಿಎಂಗೆ ರಾಮಲಿಂಗಾ ರೆಡ್ಡಿ ಶಿಫ್ಟ್ ಆಗಿದ್ದರು. ಅಂದಿನಿಂದ ನಡೆದ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಬ್ರಾಹ್ಮಣ ಹಾಗೂ ಒಕ್ಕಲಿಗ ಸಮುದಾಯದ ನಿರ್ಣಾಯಕ ಮತಗಳು ಇದ್ದು. ಮುಸ್ಲಿಂ ಹಾಗು ದಲಿತ ಸಮುದಾಯಗಳ ಮತಗಳೇ ಹೆಚ್ಚು ಪ್ರಾಬಲ್ಯ ಇದೆ. ಶಾಸಕ ಸಿಕೆ ರಾಮಮೂರ್ತಿ ಸರಳ ಸಜ್ಜನಿಕೆಯ ರಾಜಕಾರಣಿ ಯಾಗಿದ್ದು, ಆರ್‌‌ಎಸ್‌‌ಎಸ್‌ ಹಾಗೂ ಬಿಜೆಪಿ ಕಟ್ಟಾಳು. ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೇ ಪಕ್ಷ ನಿಷ್ಠೆ ಹಾಗೂ ಕ್ಷೇತ್ರದಲ್ಲಿ ಫುಲ್‌ ಆಕ್ಟೀವ್‌‌‌ ಆಗಿದ್ದಾರೆ.

ವಿರುದ್ಧ ಸಾರ್ಧಿಸಿದ್ದ ಸೌಮ್ಯ ರೆಡ್ಡಿ ಈಗ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಯಾಗಿದ್ದು, ಚುನಾವಣೆಯಲ್ಲಿ ಸೋತ ಬಳಿಕವೂ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರೆ. ಜಯನಗರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡ ರಾಮಲಿಂಗರೆಡ್ಡಿ ಗ್ಯಾರೆಂಟಿ ಯೋಜನೆಗಳನ್ನು ಸಕ್ರಿಯವಾಗಿ ತಲುಪಿಸಲು ಪ್ಲಾನ್‌‌ ಮಾಡಿದ್ದಾರೆ. ಜೆಡಿಎಸ್‌‌ ಈ ಕ್ಷೇತ್ರದಲ್ಲಿ ಆಟಕೂಂಟು ಲೆಕ್ಕಕಿಲ್ಲ ಎಂಬಂತೆ ಆಗಿದೆ.

ಮೂಡ್‌ ಆಫ್‌‌ ಕರ್ನಾಟಕ ಜಯನಗರ ಮೂಡ್ ಹೇಗಿದೆ?

ಜಯನಗರದಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಕ್ಷೇತ್ರವಾಗುವದರಲ್ಲಿ ಯಾವುದೇ ಅನುಮಾನವಿಲ್ಲ. ಜಯನಗರದ ಜನತೆಗೆ ಅಭಿವೃದ್ಧಿ ವಿಚಾರದಲ್ಲಿ ಸಮಾಧಾನವಿಲ್ಲ, ಎಲ್ಲದಕ್ಕೂ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹೋಗುವ ನಡೆಗೆ ಬೇಸರ ತಂದಿದೆ. ಕಳೆದ ಚುನಾವಣೆಯಲ್ಲಿ ಮತ ಎಣಿಕೆಯಲ್ಲಿ ಗೆದ್ದಿದ್ದ ಸೌಮ್ಯಗೆ ಈ ಬಾರಿ ಗ್ಯಾರಂಟಿಗಳಿಂದ ಮಹಿಳಾ ಮತದಾರರು ಕೈ ಹಿಡಿಯುವ ಸಾಧ್ಯತೆ ಇದ್ದು, ಸದ್ಯ ಜಯನಗರದಲ್ಲಿ ಕಾಂಗ್ರೆಸ್‌ ಹವಾ ಇದೆ. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಈಗಲೂ ಜಯನಗರ ಜನತೆ ಕಾಂಗ್ರೆಸ್‌ ನ ಸೌಮ್ಯ ರೆಡ್ಡಿ ಪರ ಒಲವುತೋರಿದ್ದಾರೆ.

ಜಯನಗರದ ಆಕಾಂಕ್ಷಿಗಳು.!
ಜಯನಗರದಿಂದ ಬಿಜೆಪಿ ಅಭ್ಯರ್ಥಿಯಾಗಲು ಶಾಸಕ ಸಿಕೆ ರಾಮಮೂರ್ತಿ ಹಾಗೂ ಸಂಸದ ತೇಜಸ್ವಿ ಸೂರ್ಯ ನಡುವೆ ಫೈಟ್ ಇದೆ. ಕಾಂಗ್ರೆಸ್ ನಲ್ಲಿ ಸೌಮ್ಯ ರೆಡ್ಡಿ ಟಿಕೆಟ್ ಸಿಗುವುದು ಖಚಿತವಾಗಿದೆ. ತೇಜಸ್ವಿ ಸೂರ್ಯ ರಾಜ್ಯ ರಾಜಕಾರಣಕ್ಕೆ ಬರುವ ಮನಸು ಮಾಡಿದ್ದಾರೆ. ಕೆಲ ಆಪ್ತರು ಸಹ ಸೂರ್ಯ ರಾಜ್ಯಕ್ಕೆ ಬಂದು ರವಿ ಸುಬ್ರಮಣ್ಯ ದೆಹಲಿಗೆ ಹೋಗಲಿ ಎಂದು ಹೇಳುತ್ತಿದ್ದಾರೆ. ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಯಾದರೆ ಸೌಮ್ಯ ರೆಡ್ಡಿ ಗೆಲುವು ಕಷ್ಟ ಆಗಬಹುದು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version