ಹೆಬ್ಬಾಳದಲ್ಲಿ ಬೈರತಿ ಪರಾಕ್ರಮ

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t200223.630

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023ರ ಹೆಬ್ಬಾಳ ವಿಧಾನಸಭಾ ಫಲಿತಾಂಶದಲ್ಲಿ ಕಾಂಗ್ರೆಸ್‌‌‌ನ ಸುರೇಶ ಬಿ.ಎಸ್-91,838 – (58%), ಬಿಜೆಪಿಯಿಂದ ಸ್ಪರ್ಧಿಸಿದ್ದ ಕಟ್ಟಾ ಜಗದೀಶ್ 61,084 ( 38%), ಜೆಡಿಎಸ್‌‌‌ನ ಮೊಹಿದ್ ಅಲ್ತಾಫ್ 1,604-(1%) ಮತಗಳಿಸಿ ಸುರೇಶ ಗೆಲುವು ಸಾಧಿಸಿದ್ದರು.

ಹೆಬ್ಬಾಳ ಕ್ಷೇತ್ರದ ಚಿತ್ರಣ..

ಹೆಬ್ಬಾಳ ವಿಧಾನಸಭಾ ಕ್ಷೇತ್ರ ಹಲವು ಕಾರಣಗಳಿಗೆ ಖ್ಯಾತಿ ಮತ್ತು ಕುಖ್ಯಾತಿ ಪಡೆದಿರುವ ಕ್ಷೇತ್ರ. ಸಣ್ಣ ಸಣ್ಣ ಮನೆ, ಇಕ್ಕಟ್ಟಿನ ಗಲ್ಲಿಗಳಲ್ಲಿ ವಾಸಿಸುವ ಬಡವರು, ಕೆಳಮಧ್ಯಮ ವರ್ಗದವರು ಹಾಗೂ ಅಪಾರ್ಟ್‌ಮೆಂಟ್‌ಗಳು, ಗಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುವ ಶ್ರೀಮಂತರು ಹೀಗೆ ಎರಡೂ ರೀತಿಯ ಜನ ಇರುವ ಕ್ಷೇತ್ರವಿದಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಅಂಟಿಕೊಂಡಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರವು ಟೆಕ್ ಪಾರ್ಕ್ ಗಳು, ಫ್ಲೈ ಓವರ್ಗಳು, ಕೆರೆಗಳು ಇತ್ಯಾದಿಗಳಿಂದ ಸದಾ ಸುದ್ದಿಯಲ್ಲಿರುವ ಕ್ಷೇತ್ರ.

ಮೂಡ್ ಆಫ್ ಕರ್ನಾಟಕ ಹೆಬ್ಬಾಳ ಮೂಡ್ ಹೇಗಿದೆ.?
ಕ್ಷೇತ್ರದಲ್ಲಿ ಒಕ್ಕಲಿಗರು, ಮುಸ್ಲಿಮರುಹಾಗೂ ಕುರುಬರ ಪ್ರಾಬಲ್ಯಹೊಂದಿದ್ದು, ಅಹಿಂದ ಮತದಾರರೇ ಸಚಿವ ಬೈರತಿ ಸುರೇಶ್‌‌‌‌‌ಗೆ ವರದಾನವಾಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೋತ ಬಳಿಕ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಗ್ಯಾರಂಟಿ ಯೋಜನೆಗಳೇ ಬೈರತಿ ಸುರೇಶ್ ಗೆ ಆಸರೆಯಾಗಿದ್ದು, ಹೆಬ್ಬಾಳದಲ್ಲಿ ಜೆಡಿಎಸ್ ಗೆ ನೆಲೆ ಇಲ್ಲದಿರುವುದು ‘ಕೈ’ಗೆ ಪ್ಲಸ್ ಆಗಿದೆ.

ಹೆಬ್ಬಾಳ ಕ್ಷೇತ್ರದ ಆಕಾಂಕ್ಷಿಗಳು ಯಾರು.?
ಹೆಬ್ಬಾಳದಲ್ಲಿ ಸಚಿವ ಬೈರತಿ ಸುರೇಶ್ ಹೆಚ್ಚು ಆಕ್ಟಿವಿ ಇದ್ದು, ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಅವರಿಗೆ ಕಾಂಗ್ರೆಸ್ ಟೆಕೆಟ್ ಫಿಕ್ಸ್. ಇನ್ನು ಬಿಜೆಪಿಯಲ್ಲಿ ಕಟ್ಟಾ ಜಗದೀಶ್ ಗೆ ಅವಕಾಶ ಸಿಗಬಹುದು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version