ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಾಕಷ್ಟು ಅವಾಂತರ ಸೃಷ್ಟಿ ಆಗುತ್ತೆ. ಅದೇ ರೀತಿ ಇಂದು ಬೆಳ್ಳಗಿನ ಜಾವ ಸುರಿದ ಮಳೆಗೆ ಬೆಂಗಳೂರು ಮುಳುಗಿ ಹೋಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಮಳೆ ಅವಾಂತರ ಹೇಗಿದೆ.
ಕಳೆದ ಮೂರು ನಾಲ್ಕು ವಾರಗಳ ಹಿಂದೆ ಬೆಂಗಳೂರಿನಲ್ಲಿ ವಿಪರೀತ ಮಳೆ ಸುರಿದು ಸಿಲಿಕಾನ್ ಸಿಟಿ ಮಂದಿಗೆ ನಡುಕ ಹುಟ್ಟಿಸಿ ಸುಮ್ಮನಾಗಿದ್ದ ಮಳೆರಾಯ ಇಂದು ಮತ್ತೆ ಎಂಟ್ರಿ ನೀಡಿ ನಾನಾ ಅವಾಂತರ ಸೃಷ್ಟಿಸಿದೆ. ಜನರನ್ನು ಕಂಗಾಲಾಗಿಸಿದೆ.
ಇಂದು ಮದ್ಯಾಹ್ನ ಸುರಿದ ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿ ಜನರು ತತ್ತರಿಸಿ ಹೋಗಿದ್ದಾರೆ. ಮಳೆಗೆ ರಸ್ತೆ, ಪಾರ್ಕ್, ದೇವಾಲಯಗಳು ಅಂಡರ್ ಪಾಸ್ ಅಪಾರ್ಟ್ ಮೆಂಟ್‌ಗಳು ಸಂಪೂರ್ಣ ಜಲಾವೃತವಾಗಿತ್ತು. ವಾಹನ ಸವಾರರು ಪರಾದಾಟ ನಡೆಸೋ ಸ್ಥಿತಿ ನಿರ್ಮಾಣವಾಗಿತ್ತು. ಸಿಲಿಕಾನ್ ಸಿಟಿಯಲ್ಲಿ ಗಾಳಿ ಮಳೆ ಸುರಿದಿದ್ದು ಬೃಹತಾಕಾರದ ಮರಗಳು ಧರೆಗುರುಳಿದವು.
ಮಳೆರಾಯನ ಆರ್ಭಟದಿಂದಾಗಿ ನಗರದ ಪ್ರಮುಖ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಅದರಲ್ಲೂ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಸರ್ಜಾಪುರ,ವಿಲ್ಸನ್ ಗಾರ್ಡನ್, ಸಂಪಿಗೆ ರಸ್ತೆ, ಮಲ್ಲೇಶ್ವರಂ ರೈಲ್ವೆ ರೋಡ್ ಸಂಪೂರ್ಣ ಜಾಲವೃತ ಗೊಂಡಿತ್ತು ಇದರಿಂದಾಗಿ ಆಟೋ, ಬೈಕ್, ಶಾಲಾ ವಾಹನ ಓಡಾಡಲು ಬಹಳಷ್ಟು ಕಷ್ಟವಾಗಿದ್ದು. ನೀರನ ಮದ್ಯೆ ಮುಚ್ಚಿ ಹೋಗಿದ್ದ ಗುಂಡಿಗಳಿಂದಾಗಿ ಒಂದಿಷ್ಟು ಸಾವಾರರು ಆಯಾತಪ್ಪಿ ಕೆಳಗೆ ಬಿದ್ದಿದ್ದು. ಮಳೆಗೆ ಹಾಗೂ ಬಿಬಿಎಂಪಿಯ ಈ ಅವ್ಯವಸ್ಥೆಗೆ ಜನರು ಹಿಡಿ ಶಾಪ ಹಾಕಿದ್ರು. ಇನ್ನೂ ಸಚಿವರ ಕಾರು ಮಳೆ ನೀರಿನಲ್ಲಿ ಸಂಚಾರ ನಡೆಸಲು ಪರಾದಾಟ ನಡಸಿದ್ರು.
ರಾಜಾಜಿನಗರದಲ್ಲು ಬೃಹತ್ ಮರವೊಂದು ಧರೆಗುಳಿದ್ದು.ನಾಲ್ಕು ಕಾರು ಐದು ಬೈಕ್ ಹಾಗೂ ಆಟೋ ಜಾಖಂ ಆಗಿತ್ತು. ಬೇಸಿಗೆ ಮಳೆಗೆ ಈ ರೀತಿ ಅವಾಂತರಗಳು ಸೃಷ್ಟಿಯಾದ್ರೆ ಮುಂದೆ ಹೇಗೆ ಅಂತಾ ಜನರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ರೆ. ಇತ್ತ ದುರ್ಬಲವಾದ ಮರಗಳನ್ನು ತೆರವೂಗಳಿಸಬೇಕಾದ ಪಾಲಿಕ ಸುಮ್ಮನಾಗಿರೊದನ್ನು ನೋಡಿ ಪಾಲಿಕೆಗೆ ಚೀಮಾರಿ ಹಾಕಿದ್ರು. ಇನ್ನು ದೊಮ್ಮಲೂರು ಬಳಿ ಹಲಸೂರು ಸಂಚಾರಿ ಪೋಲಿಸರೆ ನೀರು ತೆರೆವು ಮಾಡಿದ್ರು.ಸಂಚಾರ ನಿರ್ವಹಣೆ ಜೊತೆ ಜೊತೆಗೆ ಪೋಲಿಸರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಯಿತು.
ಸಿಲಿಕಾನ್ ಸಿಟಿ ಜನರಿಗೆ ಒಂದೆಡೆ ಮಳೆ ಬಂದು ತಂಪೆರೆದಿದ್ರೆ ಇನ್ನೊಂದೆಡೆ ನಾನಾ ಅವಾಂತರಗಳನ್ನೆ ಸೃಷ್ಟಿಸಿ ಜನರನ್ನು ಕಂಗಾಲು ಮಾಡಿದ್ದು.ಇದೇ ರೀತಿ ಮಳೆಯಾದರೆ ಮುಂದಿನ ಗತಿ ಏನು ಅಂತ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.