ಮಹಾವೀರ ಜನ್ಮ ಕಲ್ಯಾಣೋತ್ಸವ (ಭಗವಾನ್ ಮಹಾವೀರ ಜಯಂತಿ) ಸಂಭ್ರಮರಣೆಗೆ ಚಾಲನೆ ಸಿಕ್ಕಿದೆ. ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ದಿಗಂಬರ ಜೈನ ಮಹಿಳಾ ಸಮಾಜ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ, ಅಹಿಂಸಾ ಧ್ವಜ ಬೀಸಿ ಲಾವಣ್ಯ ಬಳ್ಳಾಲ್, ಡಾ.ವಿಎಸ್ ಪ್ರಸಾದ್, ಶ್ರೀ ಮಹೇಂದ್ರ ಸಿಂಘಿ ಅವರು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್‌ವಿ ಪ್ರಸಾದ್ ಮಾತನಾಡಿ, ನಮ್ಮ ದೇಶದಲ್ಲಿ ಬಹಳಷ್ಟು ಜಾತಿ, ಮತಗಳು ಇದ್ದರೂ ಪ್ರತಿಯೊಬ್ಬರೂ ಅಹಿಂಸೆಗೆ ತಲೆ ಬಾಗಲೇ ಬೇಕು, ಯಾವುದೇ ಜಾತಿಗಳು ಧರ್ಮದ ಆಧಾರದ ಮೇಲೆ ನಿಂತಿದೆ. ಇವತ್ತು ಹುಬ್ಬಳ್ಳಿಯ ದಿಗಂಬರ ಜೈನ ಮಹಿಳಾ ಸಮಾಜ ದಿಂದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಜನತೆಗೆ ಅಹಿಂಸೆಯನ್ನು ಅಳವಡಿಸಲು ಕೊಡುತ್ತಿರುವ ಸಂದೇಶ ದೇಶಕ್ಕೆ ಮಾದರಿ ಮಹಿಳಾ ಸಮಾಜವಾಗಿದೆ ಎಂದರು. ಜೈನ ಮಹಿಳಾ ಸಮಾಜದ ನಾಯಕಿ ತ್ರಿಶಾಲ ಮಾಲಗತ್ತಿ ಅವರ ನಾಯಕತ್ವವನ್ನು ಕೊಂಡಾಡಿ ವೇಗದ ದಿನಚರಿಗಳಿಗೆ ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಇದೆ ಎಂದರು.
ಅತಿಥಿಗಳಾದ ಶ್ರೀ ಮಹೇಂದ್ರ ಸಿಂಘಿ ಅವರು ಮಾತನಾಡಿ ಭಗವಾನ್ ಮಹಾವೀರರ ಸಂದೇಶವು ಸರ್ವ ಧರ್ಮಕ್ಕೆ ಅವಶ್ಯಕವಿದೆ, ಪ್ರೀತಿ, ಅಹಿಂಸೆಯಿಂದ ಜಗತ್ತನ್ನು ಗೆಲ್ಲ ಬಹುದು , ದಿಗಂಬರ ಜೈನ ಮಹಿಳಾ ಸಮಾಜ ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಅದ್ಬುತ ಕಾರ್ಯಕ್ರಮಗಳನ್ನು , ಕೊಡುಗೆಯನ್ನು ದೇಶಕ್ಕೆ ಕೊಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ತ್ರಿಶಲ ಮಾಲಗತ್ತಿ ಎಲ್ಲರನ್ನು ಸ್ವಾಗತಿಸಿದರು, ಇನ್ನೂ ಪದಾಧಿಕಾರಿಗಳು ಅಥಿತಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ಶುಭಾಷ್ ಸಿಂಗ್ ಜಮಾದಾರ್, ಭುಜಬಲಿ ಮಾಲಗತ್ತಿ, ಪಂಕಜ್ ಎಂ, ಉದಯ್ ರೋಖಡೆ, ಖರೀಘಾರ್, ಬ್ರಹ್ಮ ಕುಮಾರ್ ಬೀಳಿಗಿ , ಉದಯ್ ಧಡೋತಿ , ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಅಹಿಂಸಾ ವಾಕ್
ಕಾರ್ಯಕ್ರಮದ ಬಳಿಕ ಅಹಿಂಸಾ ಸಂದೇಶಗಳ ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ವಾಕಿಂಗ್ ಮಾಡಲಾಯಿತು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅತಿಥಿಗಳು ಹಾರ ಹಾಕಿ ಗೌರವಿಸಿದರು. ಡಾ.ವಿಎಸ್ ಪ್ರಸಾದ್, ಲಾವಣ್ಯ ಬಳ್ಳಾಲ್, ಮಹೇಂದ್ರ ಸಿಂಘಿ ಅವರು ಕೂಡ ಅಹಿಂಸಾ ನಡೆಗೆಯಲ್ಲಿ ಪಾಲ್ಗೊಂಡಿದ್ದರು, ಮಹಾವೀರ ಗಲ್ಲಿಯಲ್ಲಿ ಅಹಿಂಸಾ ವಾಕ್ ಮುಕ್ತಾಯ ಗೊಳಿಸಿ ಆಗಮಿಸಿದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.




