ಧರ್ಮಸ್ಥಳ, ಬೆಳ್ತಂಗಡಿ: 38 ವರ್ಷಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಪದ್ಮಲತಾ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಇದೀಗ ಈ ಬಹುಚರ್ಚಿತ ಪ್ರಕರಣಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸಹ ಎಂಟ್ರಿ ಕೊಟ್ಟಿದ್ದು, ತನಿಖೆಗೆ ಹೊಸ ತಿರುವು ನೀಡಿದೆ.
ಇಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತಂಡ ಬೆಳ್ತಂಗಡಿಯ ಎಸ್‌ಐಟಿ (SIT) ಕಚೇರಿಗೆ ಭೇಟಿ ನೀಡಲಿದೆ. ಧರ್ಮಸ್ಥಳದ ಬಳಿ ಅಸ್ಥಿಪಂಜರ ಮತ್ತು ಮೂಳೆಗಳ ಪತ್ತೆಯಾದ ಕುರಿತು ಸೂಕ್ತ ಮಾಹಿತಿ ಸಂಗ್ರಹಿಸಲಿದೆ.
ಈ ನಡುವೆ, ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಅವರು, ತಮ್ಮ ತಂಗಿಯ ಅಸಹಜ ಸಾವು ಕುರಿತು ಮರು ತನಿಖೆ ನಡೆಸಬೇಕು ಎಂದು ಎಸ್‌ಐಟಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಧರ್ಮಸ್ಥಳದ ಬೋಳಿಯಾರ್ ನಿವಾಸಿಯಾಗಿರುವ ಇಂದ್ರಾವತಿ, 38 ವರ್ಷಗಳ ಹಿಂದೆ ನೇತ್ರಾವತಿ ನದಿಯ ತೀರದಲ್ಲಿ ಶವವಾಗಿ ಪತ್ತೆಯಾದ ಪದ್ಮಲತಾ ಅವರ ಸಾವು ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.