ನೆಲಮಂಗಲ ತಾಲೂಕಿನ ಬಿನ್ನಮಂಗಲದಲ್ಲಿ ಇರುವ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಕಳ್ಳತನದ ಘಟನೆ ನಡೆದಿದೆ. ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹60ಸಾವಿರ ನಗದನ್ನು ಕಳವು ಮಾಡಿರುವುದಾಗಿ ಬೆಳಕಿಗೆ ಬಂದಿದೆ.
ಕಚೇರಿಯ ಬೀರುವಿನೊಳಗೆ ಭದ್ರವಾಗಿ ಲಾಕ್ ಮಾಡಿ ಇಡಲಾಗಿತ್ತು. ಎಂದಿನಂತೆ ಅಟೆಂಡರ್ ರಾಜೇಶ್ ಕಚೇರಿ ತೆಗೆಯಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಯೋಜನಾಧಿಕಾರಿ ಸುಜಾತ ಎಸ್. ಶೆಟ್ಟಿ ಅವರಿಗೆ ವಿಷಯ ತಿಳಿಸಲಾಗಿದ್ದು, ನಂತರ ಟ್ರಸ್ಟ್‌ನ ಮ್ಯಾನೇಜರ್ ದಿವ್ಯ ಅವರು ನೆಲಮಂಗಲ ಟೌನ್ ಠಾಣೆಯಲ್ಲಿ ಪೊಲೀಸರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.