ದಾವಣಗೆರೆ : ಔಡಲ (ಹರಳೆ) ಎಲೆ ತಿಂದು 86 ಕುರಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೊಮರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಕೊಲಹಾಳ್ ಗ್ರಾಮದ ತಿಮ್ಮೇಶ್ ಎಂಬುವರಿಗೆ ಸೇರಿದ ಕುರಿಗಳಾಗಿವೆ. ತಿಮ್ಮೇಶ್ 150 ಕುರಿಗಳನ್ನ ಮೇಯಿಸಲು ಚನ್ನಗಿರಿ ಗೊಪೆನಹಳ್ಳಿ ಗ್ರಾಮದ ಹೊಲದಲ್ಲಿ ಬೀಡು ಬಿಟ್ಟಿದ್ದರು. ಹೊಲದಲ್ಲಿ ಬೀಡು ಬಿಟ್ಟ ವೇಳೆ ಮೇಯುತ್ತಿದ್ದಾಗ ಔಡಲ (ಹರಳೆ) ಎಲೆ ತಿಂದು ಅಸ್ವಸ್ಥಗೊಂಡು ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಚನ್ನಗಿರಿ ತಹಶಿಲ್ದಾರ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





