ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರಿನ ಸಿಡೇದಹಳ್ಳಿಯಲ್ಲಿ ಅಪರಿಚಿತ ಮಹಿಳೆಯೊಬ್ಬಳು ನಡೆಸಿದ ವಂಚನೆಯೊಂದು ಬೆಳಕಿಗೆ ಬಂದಿದೆ. ನಾಗಸಂದ್ರದ ಚಾಲಕ ಅನಂತಕುಮಾರ್ ಎಂಬವರು ಈ ವಂಚನೆಗೆ ಒಳಗಾಗಿದ್ದು, ತಮ್ಮ ಕಾರು ಹಾಗೂ ದುಬಾರಿ ಮೊಬೈಲ್ ಕಳೆದುಕೊಂಡಿದ್ದಾರೆ.
ನೆನ್ನೆ 8ನೇ ಮೈಲಿ ಸಿಗ್ನಲ್ ಬಳಿ ಚಾಲಕರಿಗೆ ಕರೆ ಮಾಡಿದ ಮೇನಾಕಾ, ತಾತ್ಕಾಲಿಕವಾಗಿ ವಿಶ್ರಾಂತಿಗಾಗಿ ಹೆಸರಘಟ್ಟ ರಸ್ತೆಯ ಸಿಡೇದಹಳ್ಳಿಯ ಪಿ.ವಿ. ರೆಸಿಡೆನ್ಸಿಯಲ್ಲಿ ರೂಮ್ ಬುಕ್ ಮಾಡಿಸಿದ್ದಳು. ಚಾಲಕ ಬಾತ್‌ರೂಮಿಗೆ ಹೋದ ಸಂದರ್ಭದಲ್ಲಿ ಬಾಗಿಲು ಲಾಕ್ ಮಾಡಿ, ಬೇರೊಬ್ಬರನ್ನು ಕರೆಸಿ ಕಾರು ಮತ್ತು ಮೊಬೈಲ್ ಜೊತೆಗೆ ಪರಾರಿಯಾಗಿದ್ದಾಳೆ.
ಚಾಲಕ ಅನಂತಕುಮಾರ್ ಲಾಡ್ಜ್‌ನ ರೂಮ್ ಬಾಯ್ ಸಹಾಯದಿಂದ ಹೊರಬಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತ್ತೆಗಾಗಿ ಪೊಲೀಸರು ಸಿಸಿಟಿವಿ ಫೂಟೇಜ್ ಮತ್ತು ಮೊಬೈಲ್ ಟವರ್ ಲೊಕೇಷನ್ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ