ಬೆಂಗಳೂರಿನಲ್ಲಿ ‘ಶೋಭಾ ಆಂಟಿ’ ಎಂದೇ ಪ್ರಸಿದ್ಧಳಾದ ಒಬ್ಬ ಮಹಿಳೆಯ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂದೇ ಜೀವನದಲ್ಲಿ ನಾಲ್ಕು ಮದುವೆಗಳು, ಒಬ್ಬರ ಹಿಂದೊಬ್ಬರು ಗಂಡಂದಿರನ್ನು ಮೋಸ ಮಾಡಿ, ಕೊನೆಗೆ ರೌಡಿಗಳ ಸಹಾಯದಿಂದ ನಾಲ್ಕನೇ ಪತಿಗೆ ಧಮಕಿ ನೀಡಿ ಮನೆ ಬಿಟ್ಟು ತಪ್ಪಿಸಿಕೊಂಡ ಘಟನೆಯು ಭಾರೀ ಚರ್ಚೆಗೆ ಕಾರಣವಾಗಿದೆ.
ಶೋಭಾ ಆಂಟಿಯ ‘ಮ್ಯಾರೇಜ್ ಜರ್ನಿ’ ಹೀಗಿದೆ:
- ಮೊದಲ ಮದುವೆ: ತನ್ನ ಮೊದಲ ಪ್ರೀತಿಯ ಪ್ರಿಯತಮನೊಂದಿಗೆ ಮದುವೆಯಾಗಿ ಸಂಸಾರ ಆರಂಭಿಸಿದಳು. ಆದರೆ ಇದೇ ಸಮಯದಲ್ಲಿ ಮತ್ತೊಬ್ಬ ಯುವಕನ ಜೊತೆಗೂ ಸಂಬಂಧ ಬೆಳೆಸಿದಳು.
- ಎರಡನೇ ಮದುವೆ: ಮೊದಲ ಗಂಡನ ಜೊತೆಯಲ್ಲಿದ್ದಾಗಲೇ ಎರಡನೇ ಗಂಡನನ್ನು ಮದುವೆಯಾಗಿ ಸಂಸಾರ ಕಟ್ಟಿದಳು. ಎರಡನೇ ಪತಿಗೆ ಇದರ ಬಗ್ಗೆ ತಿಳಿಯಲಿಲ್ಲ.
- ಮೂರನೇ ಮದುವೆ: ಎರಡನೇ ಗಂಡನಿಗೆ ತಿಳಿಯದಂತೆ ಮೂರನೇ ಮದುವೆ ಮಾಡಿಕೊಂಡಳು. ಮೂರನೇ ಪತಿಗೆ ನಾಮ ಹಾಕಿ ನಾಲ್ಕನೇ ಮದುವೆಗೆ ಕಾಲಿಟ್ಟಳು.
- ನಾಲ್ಕನೇ ಮದುವೆ : ನಾಲ್ಕನೇ ಗಂಡನ ಜೊತೆ ಸಂಸಾರ ನಡೆಸುತ್ತಿದ್ದಂತೆಯೇ ತನ್ನ ಹಳೆಯ ಪ್ರಿಯತಮನ ಜೊತೆಗೆ ರಹಸ್ಯ ಸಂಬಂಧವನ್ನು ಮುಂದುವರೆಸಿದಳು. ರಾತ್ರಿ 2 ಗಂಟೆಯವರೆಗೂ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಅನುಮಾನಗೊಂಡ ನಾಲ್ಕನೇ ಪತಿ ಪ್ರಶ್ನಿಸಿದಾಗ ಶೋಭಾ ಭಾರೀ ಡ್ರಾಮಾ ಮಾಡಿದಳು. “ನಾನು ಎಲ್ಲಿದ್ದರೂ, ಏನು ಮಾಡಿದರೂ ನೀನು ಕೇಳಬಾರದು” ಎಂದು ಗಲಾಟೆ ಮಾಡಿ, ರೌಡಿಗಳನ್ನು ಬಿಟ್ಟು ಗಂಡನಿಗೆ ಧಮಕಿ ಕೊಡಿಸಿದಳು. ಕೊನೆಗೆ ಮನೆ ಬಿಟ್ಟು ತಪ್ಪಿಸಿಕೊಂಡಳು. ನಾಲ್ಕನೇ ಗಂಡ ದುಡಿದ ಹಣವನ್ನೆಲ್ಲಾ ಶೋಭಳಿಗೆ ಕೊಟ್ಟು ಈಗ ಬೀದಿಗೆ ಬಿದ್ದ ಸ್ಥಿತಿಗೆ ತಲುಪಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ “ನೌಟಂಕಿ ಆಂಟಿ” ಎಂದು ಕಿರಿಕಿರಿ ಹೆಸರು ಬಿದ್ದಿದ್ದು, ಇದು ಗ್ಯಾರಂಟಿ ನ್ಯೂಸ್‌ನಲ್ಲಿ ಪ್ರಮುಖ ಸುದ್ದಿಯಾಗಿ ಹರಡುತ್ತಿದೆ. ಪೊಲೀಸ್ ದಾಖಲೆ ಅಥವಾ ಕಾನೂನು ಕ್ರಮದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ.




