ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸೀಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಜುಲೈ 26ರ ಶನಿವಾರ ಬೆಳಗ್ಗೆ 10:00 ರಿಂದ ಸಂಜೆ 4:00 ಗಂಟೆವರೆಗೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
66/11 ಕೆವಿ IISC ಉಪಕೇಂದ್ರದ C6 ಉಪವಿಭಾಗದ (ಮಲ್ಲೇಶ್ವರಂ ವಿಭಾಗ) ನಿರ್ವಹಣಾ ಕಾರ್ಯದಿಂದ ಈ ವಿದ್ಯುತ್ ಕಡಿತ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಪೀಡಿತ ಪ್ರದೇಶಗಳು
ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ:
|
ಕ್ರ.ಸಂ. |
ಪ್ರದೇಶಗಳು |
|---|---|
| 1 |
ಮಲ್ಲೇಶ್ವರಂ |
| 2 |
ಎಂ.ಡಿ. ಬ್ಲಾಕ್ |
| 3 |
ವೈಯಾಲಿಕಾವಲ್ |
| 4 |
ಈಜುಕೊಳ ವಿಸ್ತರಣೆ |
| 5 |
ಕೋದಂಡರಾಮಪುರ |
| 6 |
ರಂಗನಾಥಪುರ |
| 7 |
ಬಿಎಚ್‌ಇಎಲ್ |
| 8 |
ಐಐಎಸ್‌ಸಿ ಬ್ರೈನ್ ಸೆಂಟರ್ |
| 9 |
ಅಂಬೇಡ್ಕರ್ ನಗರ |
| 10 |
ಯಶವಂತಪುರ ಪೈಪ್‌ಲೈನ್ ರಸ್ತೆ |
| 11 |
ಎಲ್‌ಎನ್ ಕಾಲೋನಿ |
| 12 |
ಸುಬೇದ್ರಪಾಳ್ಯ |
| 13 |
ದಿವಾನರ ಪಾಳ್ಯ |
| 14 |
ಕೆ.ಎನ್. ವಿಸ್ತರಣೆ |
| 15 |
ಯಶವಂತಪುರ 1ನೇ ಮುಖ್ಯ ರಸ್ತೆ |
| 16 |
ಎಚ್.ಎಂ.ಟಿ. ಮುಖ್ಯ ರಸ್ತೆ |
| 17 |
ಮಾಡೆಲ್ ಕಾಲೋನಿ |
| 18 |
ಶರೀಫ್ ನಗರ |
| 19 |
ಸುತ್ತಮುತ್ತಲಿನ ಪ್ರದೇಶಗಳು |
ಶುಕ್ರವಾರದವರೆಗೆ ತೈಲಗೆರೆ, ಬಿದಲೂರು, ಯಲಿಯೂರು, ಕೊರಮಂಗಲ, ಗೊಬ್ಬರಗುಂಟೆ ಗ್ರಾಮಗಳು, ಕುಂದಣ ಗ್ರಾಮ ಪಂಚಾಯಿತಿ, ಮತ್ತು ಬೆಂಗಳೂರು ಗ್ರಾಮಾಂತರ ಡಿಸಿ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಕಡಿತವಾಗಿತ್ತು. ಈ ಕಾಮಗಾರಿಗಳು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಭವಿಷ್ಯದಲ್ಲಿ ಅನಿರೀಕ್ಷಿತ ಕಡಿತವನ್ನು ತಡೆಗಟ್ಟಲು ಅಗತ್ಯವಾಗಿವೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್ ಸಂಪರ್ಕಿಸಿ.





