ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ!

KPTCL ಕಾಮಗಾರಿಯಿಂದ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ!

111 (39)

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸೀಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಜುಲೈ 26ರ ಶನಿವಾರ ಬೆಳಗ್ಗೆ 10:00 ರಿಂದ ಸಂಜೆ 4:00 ಗಂಟೆವರೆಗೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

66/11 ಕೆವಿ IISC ಉಪಕೇಂದ್ರದ C6 ಉಪವಿಭಾಗದ (ಮಲ್ಲೇಶ್ವರಂ ವಿಭಾಗ) ನಿರ್ವಹಣಾ ಕಾರ್ಯದಿಂದ ಈ ವಿದ್ಯುತ್ ಕಡಿತ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಪೀಡಿತ ಪ್ರದೇಶಗಳು

ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ:

ಕ್ರ.ಸಂ.

ಪ್ರದೇಶಗಳು

1

ಮಲ್ಲೇಶ್ವರಂ

2

ಎಂ.ಡಿ. ಬ್ಲಾಕ್

3

ವೈಯಾಲಿಕಾವಲ್

4

ಈಜುಕೊಳ ವಿಸ್ತರಣೆ

5

ಕೋದಂಡರಾಮಪುರ

6

ರಂಗನಾಥಪುರ

7

ಬಿಎಚ್‌ಇಎಲ್

8

ಐಐಎಸ್‌ಸಿ ಬ್ರೈನ್ ಸೆಂಟರ್

9

ಅಂಬೇಡ್ಕರ್ ನಗರ

10

ಯಶವಂತಪುರ ಪೈಪ್‌ಲೈನ್ ರಸ್ತೆ

11

ಎಲ್‌ಎನ್ ಕಾಲೋನಿ

12

ಸುಬೇದ್ರಪಾಳ್ಯ

13

ದಿವಾನರ ಪಾಳ್ಯ

14

ಕೆ.ಎನ್. ವಿಸ್ತರಣೆ

15

ಯಶವಂತಪುರ 1ನೇ ಮುಖ್ಯ ರಸ್ತೆ

16

ಎಚ್.ಎಂ.ಟಿ. ಮುಖ್ಯ ರಸ್ತೆ

17

ಮಾಡೆಲ್ ಕಾಲೋನಿ

18

ಶರೀಫ್ ನಗರ

19

ಸುತ್ತಮುತ್ತಲಿನ ಪ್ರದೇಶಗಳು

ಶುಕ್ರವಾರದವರೆಗೆ ತೈಲಗೆರೆ, ಬಿದಲೂರು, ಯಲಿಯೂರು, ಕೊರಮಂಗಲ, ಗೊಬ್ಬರಗುಂಟೆ ಗ್ರಾಮಗಳು, ಕುಂದಣ ಗ್ರಾಮ ಪಂಚಾಯಿತಿ, ಮತ್ತು ಬೆಂಗಳೂರು ಗ್ರಾಮಾಂತರ ಡಿಸಿ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಕಡಿತವಾಗಿತ್ತು. ಈ ಕಾಮಗಾರಿಗಳು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಭವಿಷ್ಯದಲ್ಲಿ ಅನಿರೀಕ್ಷಿತ ಕಡಿತವನ್ನು ತಡೆಗಟ್ಟಲು ಅಗತ್ಯವಾಗಿವೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್ ಸಂಪರ್ಕಿಸಿ.

Exit mobile version