ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸರ್ಜಾಪುರ ಮತ್ತು ಅತ್ತಿಬೆಲೆ ವ್ಯಾಪ್ತಿಯಲ್ಲಿ 66 ಕೆವಿ ವಿದ್ಯುತ್ ತಂತಿಗಳ ಜೋಡಣೆ ಕಾರ್ಯಾಚರಣೆಯಿಂದಾಗಿ ಇಂದು (ಆಗಸ್ಟ್ 2) ಮತ್ತು ನಾಳೆ (ಆಗಸ್ಟ್ 3) ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಘೋಷಿಸಿದೆ. ಈ ಕಾರ್ಯಾಚರಣೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಈ ಅವಧಿಯಲ್ಲಿ ಸಹಕರಿಸುವಂತೆ ಬೆಸ್ಕಾಂ ಕೋರಿದೆ.
ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು
66/11 ಕೆವಿ ಅತ್ತಿಬೆಲೆ ವ್ಯಾಪ್ತಿ:
-
ಯಡವನಹಳ್ಳಿ
ADVERTISEMENTADVERTISEMENT -
ಇಚ್ಚಂಗೂರು
-
ವಡ್ಡರಪಾಳ್ಯ
-
ಅತ್ತಿಬೆಲೆ ಕೈಗಾರಿಕಾ ಪ್ರದೇಶ
-
ಬಳಗಾರನಹಳ್ಳಿ
-
ಮಂಚನಹಳ್ಳಿ
-
ಅತ್ತಿಬೆಲೆ ಟೌನ್
-
ಮಾಯಸಂದ್ರ
-
ದಾಸನಾಪುರ
-
ಬಲ್ಲೂರು
-
ಕಂಬಳಿಪುರ
-
ಚಿಕ್ಕ ಕಾನಹಳ್ಳಿ
-
ಇಂಡ್ಲಬೆಲೆ
-
ಹಾರೋಹಳ್ಳಿ
66/11 ಕೆವಿ ಆನೇಕಲ್ ವ್ಯಾಪ್ತಿ:
-
ಆನೇಕಲ್ ಟೌನ್
-
ಕಾವಲಹೊಸಹಳ್ಳಿ
-
ಗೌರೇನಹಳ್ಳಿ
-
ಹಾಲ್ದೇನಹಳ್ಳಿ
-
ಹೊಂಪಲಘಟ್ಟ
-
ಚೂಡೇನಹಳ್ಳಿ
-
ಹೊನ್ನ ಕಳಸಾಪುರ
-
ಕರ್ಪೂರು
-
ಬ್ಯಾಗಡದೇನಹಳ್ಳಿ
-
ಕಾದ ಅಗ್ರಹಾರ
-
ಚಿಕ್ಕಹಾಗಡೆ
-
ದೊಡ್ಡಹಾಗಡೆ
66/11 ಕೆವಿ ಸಮಂದೂರು ವ್ಯಾಪ್ತಿ:
-
ಸಮಂದೂರು
-
ರಾಚಮನಹಳ್ಳಿ
-
ಗುಡ್ಡನಹಳ್ಳಿ
-
ಅರವಂಟಿಗೆ ಪುರ
-
ಪಿ.ಗೊಲ್ಲಹಳ್ಳಿ
-
ತೆಲಗಾರ ಹಳ್ಳಿ
-
ವನಕನಹಳ್ಳಿ
ಎಟಿಪಿ ಸೇವೆ ಸ್ಥಗಿತಗೊಳಿಸಿದ ಬೆಸ್ಕಾಂ:
ಬೆಸ್ಕಾಂನ ಎನಿ ಟೈಮ್ ಪೇಮೆಂಟ್ (ಎಟಿಪಿ) ಸೇವೆಯನ್ನು ಆಗಸ್ಟ್ 1ರಿಂದ ಸ್ಥಗಿತಗೊಳಿಸಲಾಗಿದೆ. ಎಟಿಪಿ ಯಂತ್ರ ಸೇವಾ ಪೂರೈಕೆದಾರರ ಗುತ್ತಿಗೆ ಅವಧಿ ಮುಕ್ತಾಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಹಕರು ವಿದ್ಯುತ್ ಬಿಲ್ ಪಾವತಿಗಾಗಿ ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳು ಅಥವಾ ಯುಪಿಐ ಮೂಲಕ ಪಾವತಿಯನ್ನು ಮಾಡಬಹುದು.
ಗ್ರಾಹಕರು ಈ ವಿದ್ಯುತ್ ಕಡಿತದ ಅವಧಿಯಲ್ಲಿ ಅಗತ್ಯವಾದ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಸಹಕರಿಸುವಂತೆ ಬೆಸ್ಕಾಂ ಕೋರಿದೆ.