ಬೆಂಗಳೂರಿನ ಕ್ರಿಕೆಟ್ ಕೋಚ್ ಮ್ಯಾಥ್ಯೂ ಅವರ ಮೊಬೈಲ್‌ನಲ್ಲಿ 2500ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋಗಳಿವೆ ಎಂಬ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ನನಗೆ ಯಾವುದೇ ವಿಡಿಯೋಗಳ ಬಗ್ಗೆ ಗೊತ್ತಿಲ್ಲ, ಅದು AI ಅಥವಾ ಚಾಟ್‌ಜಿಪಿಟಿ ವಿಡಿಯೋ ಇರಬಹುದು. ಅವರನ್ನೇ ಕೇಳಬೇಕು” ಎಂದು ಮ್ಯಾಥ್ಯೂ ಹೇಳಿದ್ದಾರೆ. ಈ ಆರೋಪವು ಪ್ರಜ್ವಲ್ ರೇವಣ್ಣ ಕೇಸ್‌ಗೆ ಹೋಲಿಕೆಯಾಗಿ ಚರ್ಚೆಗೆ ಬಂದಿದ್ದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮೀರಾ ಎಂಬ ಮಹಿಳೆಯ ದೂರಿನಿಂದ ತೀವ್ರ ಆರೋಪಗಳು ಬಂದಿವೆ.
ಮೀರಾ ಅವರು ದೂರು ನೀಡಿದ್ದಾಗ, ಮ್ಯಾಥ್ಯೂ ಅವರ ಮೊಬೈಲ್‌ನಲ್ಲಿ 2500ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋಗಳಿವೆ ಎಂದು ಬಾಂಬ್ ಎಸೆದಿದ್ದರು. ಇದರಲ್ಲಿ ಒಬ್ಬಳು ಮೈನರ್ ಆಗಿದ್ದು, ಉಳಿದವುಗಳು ಆಂಟಿಯರ ಜೊತೆಗಿನವುಗಳು ಎಂದು ಹೇಳಿದ್ದಾರೆ. ಮ್ಯಾಥ್ಯೂ ಅವರೊಂದಿಗಿನ ವೈಯಕ್ತಿಕ ದೂರಿನೊಂದಿಗೆ ಈ ಆರೋಪಗಳು ಸಂಬಂಧ ಹೊಂದಿವೆ. ಮೀರಾ ಅವರು ಮಾಧ್ಯಮಗಳಿಗೆ, “ಮೈಸೂರಿಗೆ ಹೋಗುವಾಗ ಮ್ಯಾಥ್ಯೂ ಅವರ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದ. ಅದರಲ್ಲಿ ವಿಡಿಯೋಗಳನ್ನು ನೋಡಿ ನಾನು ಪ್ರಶ್ನೆ ಮಾಡಿದ್ದೆ. ಮ್ಯಾಥ್ಯೂ, ‘ಮೊಬೈಲ್ ಮುಟ್ಟುವ ಹಕ್ಕು ನಿನಗಿಲ್ಲ’ ಎಂದು ಹೇಳಿದ್ದರು. ಎರಡು ದಿನಗಳ ನಂತರ ಮೈಸೂರಿನಿಂದ ಬಂದು ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ಆದರೆ ನಾನು ಕೆಲವುಗಳನ್ನು ತೆಗೆದಿಟ್ಟುಕೊಂಡಿದ್ದೆ” ಎಂದು ಹೇಳಿದ್ದಾರೆ.
“ನನಗೆ ಮೀರಾ ಅವರು ಮಗಳ ಮೂಲಕ ಪರಿಚಯವಾಗಿದ್ದರು. ಮೀರಾ ಮಗಳು ಓದುತ್ತಿದ್ದ ಶಾಲೆಯಲ್ಲಿ ನಾನು ಪಿಟಿ ಟೀಚರ್ ಆಗಿದ್ದೆ. ಆಗ ಪರಿಚಯ ಆಯ್ತು, ಆಕೆಯೇ ನನ್ನ ಫೋನ್ ನಂಬರ್ ತೆಗೆದುಕೊಂಡಿದ್ದಳು. ಮೊದಲು ಸ್ಪೋರ್ಟ್ ವಿಚಾರಕ್ಕೆ ಮಾತು ಶುರು ಆಯ್ತು. 2 ಸಾವಿರ ಕೇಳಿದ್ದರು. ಮೊದಲು ಕೊಡಲಿಲ್ಲ, ಆಮೇಲೆ ಕೊಟ್ಟೆ. ಗಂಡ ಟಾರ್ಚರ್ ಕೊಡುತ್ತಾನೆ ಎಂದು ಮೀರಾ ಮಾತು ಶುರು ಮಾಡಿದ್ದಳು. ಗಂಡ ಟಾರ್ಚರ್ ಆತನನ್ನು ಬಿಟ್ಟು ಬಂದಿದ್ದೇನಿ, ನನಗೆ ರೂಮ್ ಬೇಕು ಎಂದಿದ್ದರು. ಸಹಾಯ ಮಾಡಿದ್ದೆ. ಆಮೇಲೆ ಮನೆಯಲ್ಲಿ ಇರು ಎಂದಿದ್ದರು. ನಾನು ಇರಲು ಆರಂಭಿಸಿದ್ದೆ” ಎಂದು ಹೇಳಿದ್ದಾರೆ.
“ನನ್ನ ಮದುವೆ ಆಗುವಂತೆ ಪೀಡಿಸುತ್ತಾ ಇದ್ದರು. ಮದುವೆ ಆಗಿದ್ದು ನಿಜ, ಒಟ್ಟಿಗೆ ಇದ್ದಿದ್ದು ನಿಜ. ಯಾವುದೇ ವಿಡಿಯೋ ವಿಚಾರ ನನಗೆ ಗೊತ್ತಿಲ್ಲ. ನನ್ನ ಫೋನ್ ಅನ್ನು ನಾನು ತೆಗೆದುಕೊಂಡು ಹೋಗಿದ್ದೆ. ಜಮೀನು ವಿಚಾರಕ್ಕೆ ಊರಿಗೆ ಹೋಗಿದ್ದೆ. ಈಗ ಕೇಸ್ ಏನಿದೆ ಅದನ್ನು ನಾನು ಎದುರಿಸುತ್ತೇನೆ” ಎಂದು ಮ್ಯಾಥ್ಯೂ ಸ್ಪಷ್ಟಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್‌ಗೆ ಹೋಲಿಕೆ
ಈ ಆರೋಪಗಳು ಪ್ರಜ್ವಲ್ ರೇವಣ್ಣ ಕೇಸ್‌ಗೆ ಹೋಲಿಕೆಯಾಗಿ ಚರ್ಚೆಗೆ ಬಂದಿವೆ. ಮೀರಾ ಅವರ ದೂರಿನಿಂದ ಮ್ಯಾಥ್ಯೂ ವಿರುದ್ಧ ವೈಯಕ್ತಿಕ ದೂರು, ಗರ್ಭಿಣಿ ಮಾಡಿ ನಾಪತ್ತೆ ಮತ್ತು ಅಶ್ಲೀಲ ವಿಡಿಯೋಗಳ ಆರೋಪಗಳು ಉದ್ಭವಿಸಿವೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆಯಲ್ಲಿ ಈ ವಿಷಯಗಳು ಬೆಳಕಿಗೆ ಬಂದಿವೆ.