ಕಾಮುಕ ಬ್ಯಾಡ್ಮಿಂಟನ್ ಕೋಚ್ ಬಂಧನ

8 ಅಪ್ರಾಪ್ತೆಯರ ಲೈಂಗಿಕ ದೌರ್ಜನ್ಯದ ಆರೋಪ

Siddu stalin kcr (25)

ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಹೌದು ಶಾಲೆಗಳಿಗೆ ಬೇಸಿಗೆ ರಜೆ ಇರೋವಾಗ ಪೋಷಕರು ಮಕ್ಕಳನ್ನು ಸಮ್ಮರ್ ಕ್ಯಾಂಪ್‌ಗಳಿಗೆ  ಕಳುಹಿಸೋ ಪೋಷಕರುಬೆಚ್ಚಿಬೀಳೋದು ಗ್ಯಾರಂಟಿ.

ಬೆಂಗಳೂರಿನಲ್ಲಿ ಕಾಮ ಕ್ರಿಮಿ ಬ್ಯಾಡ್ಮಿಂಟನ್ ಕೋಚ್ ಸಿಕ್ಕಿಬಿದ್ದಿದ್ದಾನೆ.  ಹುಳಿಮಾವು ಪೊಲೀಸರು ಆರೋಪಿ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ನಿಜಕ್ಕೂ ಶಾಕ್ ಆಗಿದ್ದಾರೆ. ತಮಿಳುನಾಡು ಮೂಲದ ಸುರೇಶ್ ಬಾಲಾಜಿ (26) ಹುಳಿಮಾವು ಪೊಲೀಸ್ ಠಾಣೆಯಲ್ಲಿ ಬ್ಯಾಡ್ಮಿಂಟನ್ ಕೋಚ್ ಆಗಿದ್ದ. 16 ವರ್ಷದ ಬಾಲಕಿಯೊಬ್ಬಳಿಗೆ ಬಾಲಾಜಿಯ ಬ್ಯಾಡ್ಮಿಂಟನ್ ಕೋಚಿಂಗ್ ಸೇರಿದ್ದಳು. ಈ ಪಾಪಿ ಕೋಚಿಂಗ್ ನೀಡುವ ನೆಪದಲ್ಲಿ ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ದಾಖಲಿಸಲಾಗಿದೆ.

ಆಗಾಗ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಬ್ಯಾಡ್ಮಿಂಟನ್ ಕೋಚ್ ಸುರೇಶ್ ಬಾಲಾಜಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಯಾರ ಬಳಿಯೂ ಬಾಯಿ ಬಿಡದಂತೆ ಬೆದರಿಕೆಯನ್ನು ಹಾಕಿದ್ದಾನೆ.

ಬೇಸಿಗ ರಜೆಯ ಹಿನ್ನಲೆಯಲ್ಲಿ ಬಾಲಕಿ ಅಜ್ಜಿಯ ಮನೆಗೆ ಬ್ಯಾಡ್ಮಿಂಟನ್ ಕೋಚಿಂಗ್ ಸೆಂಟರ್‌ಗೆ ಸೇರಿದ್ದಳು. ಬಾಲಕಿ ಅಜ್ಜಿಯ ಮೊಬೈಲ್‌ನಿಂದ ಕೋಚ್‌ನ ಮೊಬೈಲ್‌ಗೆ ನಗ್ನ ಫೋಟೊಗಳನ್ನು ಕಳುಹಿಸಿದ್ದಳು. ಮೊಬೈಲ್ ಚೆಕ್ ಮಾಡಿದಾಗ ಬಾಲಕಿಯ ಅಜ್ಜಿಗೆ ಮೊಮ್ಮಗಳು ನಗ್ನ ಫೋಟೊ ಶೇ್ರ್ ಮಾಡಿರೋದು ಗೊತ್ತಾಗಿದೆ. ಕೂಡಲೇ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಬ್ಯಾಡ್ಮಿಂಟನ್ ಕೋಚ್‌ನ ಕರ್ಮಕಾಂಡ ಬೆಳಕಿಗೆ ಬಂದಿದೆ.  ಪೋಷಕರ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಹುಳಿಮಾವು ಪೋಲಿಸರು ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪರಶೀಲಿನೆ ನಡೆಸಿದಾಗ ಕ್ರೀಡಾ ತರಬೇತಿ ಕೇಂದ್ರದಲ್ಲಿ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ  ನೀಡಿರೋದು ಬೆಳಕಿಗೆ ಬಂದಿದೆ. ಸುರೇಶ್ ಬಾಲಾಜಿ ಮೊಬೈಲ್‌ನಲ್ಲಿ 13-16 ವರ್ಷ ವಯಸ್ಸಿನ 8 ಹುಡುಗಿಯರ ಜಗ್ನ ಪೋಟೊಗಳು ಮತ್ತು ವೀಡಿಯೋಗಳು ಪತ್ತೆಯಾಗಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಯರ ಹೇಳಿಕೆ ದಾಖಲು ಮಾಡಿಕೊಂಡಿರುವ ಪೋಲಿಸರು ಆರೋಪಿ ಸುರೇಶ್ ಬಾಲಾಜಿಯನ್ನು 8 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

Exit mobile version