ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಆರೋಗ್ಯ, ಪರಿಸರ ಹಾಗೂ ಸಮಾಜ ಕಲ್ಯಾಣ ಕುರಿತು ಶಾಂತಿ ಸಮ್ಮೇಳನವನ್ನ ರೋಟರಿ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ರೋಟರಿ ಸಂಸ್ಥೆಯ ಮಹದೇವ ಪ್ರಸಾದ್, ಶಂಕರ್ ಶ್ರೀನಿವಾಸ್ ಮೂರ್ತಿ ಅವರು, ಬೆಂಗಳೂರಿನ ಡಾ. ಬಾಬುರಾವ್ ಜಗನ್ಜೀವನರಾವ್ ಸಭಾಂಗಣದಲ್ಲಿ ನಡೆದ ಸಮ್ಮೇಳನಕ್ಕೆ ತ್ರೀನೇತ್ರ ಮಹಾಶಿವಯೋಗಿ ಸ್ವಾಮೀಜಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ದಕ್ಷಿಣ ಏಷ್ಯಾದ ದೇಶದ ರೋಟರಿ ಸಂಸ್ಥೆಗಳ ಅಧ್ಯಕ್ಷರು ಜೊತೆಗೆ ರಾಜ್ಯದ ವಿವಿಧ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ ದೇಶ, ವಿದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ಕಲಾವಿದರು ನೇರವೇರಸಿದ್ರೆ, ಪ್ರಮುಖ ನಾಯಕರು ವಿವಿಧ ವಿಯಷಗಳ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಸಂಸದ ಡಾ. ಮಂಜುನಾಥ್ ಜೀವನದಲ್ಲಿ ಆರೋಗ್ಯ ಬಹಳ ಮಹತ್ವದ್ದು. ಅದರ ರಕ್ಷಣೆಯ ಜೊತೆಗೆ ರೋಟರಿ ಸಂಸ್ಥೆಗಳು ಸಮಾಜ ಸುಧಾರಣೆಯ ಕೆಲಸವನ್ನು ಅದ್ಭುತವಾಗಿ ಕೆಸಲ ಮಾಡುತ್ತಿದೆ ಎಂದು ಸಂಸ್ಥೆಯನ್ನ ಕೊಂಡಾಡಿದರು.
ಇನ್ನೂ ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತ್ರೀನೇತ್ರ ಮಹಾ ಶಿವಯೋಗಿ ಸ್ವಾಮೀಜಿ, ಜಗತ್ತಿನಲ್ಲಿ ಯಾರು ಶಾಂತಿಯಿಂದ ಇದ್ದಾರೆ ಅವರೇ ಶ್ರೀಮಂತರು. ಎಷ್ಟು ಆಸ್ತಿ, ಐಶ್ವರ್ಯ ಇದೆ ಎಂದು ನಾವು ಡಿಕ್ಲೇರ್ ಮಾಡಿಕೊಳ್ಳಲು ಆಗಲು ಆಗಲ್ಲ. ಆದರೆ ನಾವು ಎಷ್ಟು ನೆಮ್ಮದಿಯಾಗಿದ್ದೇವೆ ಅನ್ನೋದು ಮುಖ್ಯ ಆಗುತ್ತದೆ ಎಂದರು.
ಜಾಗತಿಕ ಶಾಂತಿ, ಆರೋಗ್ಯ-ಸೌಹಾರ್ದತೆ ಕಾಪಾಡಲು ಮುಂದಾದ ರೋಟರಿ ಸಂಸ್ಥೆ
ರೋಟರಿ ಇಂಟರ್ ನ್ಯಾಷನಲ್, ರೋಟರಿ ಡಿಸ್ಟ್ರಿಕ್ 3192 ಆಯೋಜಿಸುತ್ತಿರುವ ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನದ ಕುರಿತಾದ ಸಮಗ್ರ ಮಾಹಿತಿ ನೀಡಲಾಗುತ್ತಿದೆ.ಜಾಗತಿಕ ಶಾಂತಿ, ಜಾಗತಿಕ ಆರೋಗ್ಯ ಮತ್ತು ಜಾಗತಿಕ ಸಮುದಾಯಗಳ ನಡುವೆ ಸೌಹಾರ್ಧತೆ ಮೂಡಿಸುವ ಉದಾತ್ತ ಉದ್ದೇಶದಿಂದ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ರೋಟರಿ ಜಿಲ್ಲೆ 3192 ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ ಆಯೋಜಿಸಿದೆ ಎಂದು ರೋಟರಿ ಇಂಟರ್ ನ್ಯಾಷನಲ್ ಜಿಲ್ಲಾ ಗವರ್ನರ್ ಮಹದೇವ್ ಪ್ರಸಾದ್ ಹೇಳಿದರು. ನಗರದ ಪ್ರೆಸ್ ಕ್ಲಬ್ ನ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಅವರು ಶಾಂತಿ ಸಮ್ಮೇಳನದ ವಿವರಗಳನ್ನು ಹಂಚಿಕೊಂಡಿದರು.
ಈ ಶಾಂತಿ ಸಮ್ಮೇಳನವನ್ನು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರು, ರಾಜ್ಯದ ಗೃಹಸಚಿವರಾದ ಶ್ರೀ ಡಾ. ಜಿ ಪರಮೇಶ್ವರ್, ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ ಉಪಸ್ಥಿತರಿರಲಿದ್ದಾರೆ. ಶಾಂತಿ ಸಮ್ಮೇಳನದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಜಿ ಮತ್ತು ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿಯವರ ದಿವ್ಯ ಸಾನಿಧ್ಯವೂ ಇರಲಿದೆ ಎಂದರು.