ಸ್ವಾಮೀಜಿ ಕಾಲಿಗೆ ಬಿದ್ದ ಬಿಜೆಪಿ ಎಂಎಲ್‌ಎ!

Befunky collage 2025 03 15t121318.035

ಬಾಗಲಕೋಟೆ  ಜಿಲ್ಲೆಯಲ್ಲಿ  ಸ್ವಾಮೀಜಿಯ ಕಾಲಿಗೆ ಬಿದ್ದು ಪೋಲಿಸ್ ಅಧಿಕಾರಿಗಳು ಆಶೀರ್ವಾದ  ಪಡೆದ ಸುದ್ದಿ ಸದ್ದು ಮಾಡುತ್ತಿದೆ. ಇದರ ನಡುವೆ  ಬಿಜೆಪಿ ಎಂಎಲ್ಎ ಮಲ್ಲಿಕಾರ್ಜುನ ಮುತ್ಯಾ  ಸ್ವಾಮೀಜಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿದೆ. ಎಂಎಲ್ಎ ಮುತ್ಯಾ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.  

ಪೊಲೀಸ್ ರಿಂದ ಎಂಎಲ್ಎ ವರೆಗೆ: ಸ್ವಾಮೀಜಿ ಗೌರವದ ಸರದಿ

ಬಾಗಲಕೋಟೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳೀಯ ಸ್ವಾಮೀಜಿಯನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದು ವೈರಲ್ ಆಗಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳುಧಾರ್ಮಿಕ ಸಾಮರಸ್ಯಎಂದು ಪರಿಗಣಿಸಿದ್ದವು. ಆದರೆ, ಈಗ ಬಿಜೆಪಿ ಎಂಎಲ್ಎ  ಅದೇ  ರೀತಿ ಸ್ವಾಮೀಜಿಯ ಕಾಲಿಗೆ ಬೀಳುವ ದೃಶ್ಯಗಳು ಹೊಸ ವಿವಾದವನ್ನು ಸೃಷ್ಟಿಸಿವೆ.ಇದನ್ನುರಾಜಕೀಯ ಹಾಗೂ ಧಾರ್ಮಿಕ ಭಾವನೆಗಳ ದುರುಪಯೋಗಎಂದು ಟೀಕಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿರೋಧ: “ಸ್ವಾಮೀಜಿಯೇ ಅಲ್ಲಎನ್ನುವ ಆರೋಪ
ಯಾದಗಿರಿ ಜಿಲ್ಲೆಯ ಎಂಎಲ್ಎ  ಕಾಲಿಗೆ ಬಿದ್ದ ವ್ಯಕ್ತಿಯು ನಿಜವಾದ ಸ್ವಾಮೀಜಿಯೇ ಅಲ್ಲವೆಂದು ಕೆಲವರು  ಆರೋಪ ಮಾಡಿದ್ದಾರೆ. ಘಟನೆಯ ವೀಡಿಯೋವನ್ನು ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು,  ರಾಜಕಾರಣಿಗಳು ಧಾರ್ಮಿಕ ಭಾವನೆಗಳನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆಎಂದು ಟೀಕಿಸಿದ್ದಾರೆ.  

Exit mobile version