ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರನ್ನು ನೇಮಿಸಲಾಗಿದೆ. ಭಾನುವಾರ ಮುಂಬೈನಲ್ಲಿ ನಡೆದ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಮುಕ್ತಾಯದ ನಂತರ ಈ ಘೋಷಣೆ ಮಾಡಲಾಗಿದೆ. ರೋಜರ್ ಬಿನ್ನಿ ಅವರ ಸ್ಥಾನವನ್ನು ಮಿಥುನ್ ಮನ್ಹಾಸ್ ವಹಿಸಿಕೊಳ್ಳಲಿದ್ದಾರೆ.
ನೂತನ ಆಡಳಿತ ಮಂಡಳಿ
ಮಿಥುನ್ ಮನ್ಹಾಸ್ ಅವರ ನೇತೃತ್ವದ ಜೊತೆಗೆ, ಬಿಸಿಸಿಐನ ಆಡಳಿತ ಮಂಡಳಿಯ ಇತರ ಪ್ರಮುಖ ಹುದ್ದೆಗಳಿಗೂ ನೇಮಕಗಳಾಗಿವೆ. ಮಾಜಿ ಕ್ರಿಕೆಟಿಗ ರಾಜೀವ್ ಶುಕ್ಲಾ ಅವರನ್ನು ಉಪಾಧ್ಯಕ್ಷರಾಗಿ, ದೇವಜಿತ್ ಸೈಕಿಯಾ ಅವರನ್ನು ಕಾರ್ಯದರ್ಶಿಯಾಗಿ, ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಮತ್ತು ಎ. ರಘುರಾಮ್ ಭಟ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ, ಜಯದೇವ್ ನಿರಂಜನ್ ಶಾ ಅವರು ಸುಪ್ರೀಂ ಕೌನ್ಸಿಲ್‌ನ ಏಕೈಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರುಣ್ ಸಿಂಗ್ ಧುಮಾಲ್ ಮತ್ತು ಎಂ. ಖೈರುಲ್ ಜಮಾಲ್ ಮಜುಂದಾರ್ ಅವರನ್ನು ಆಡಳಿತ ಮಂಡಳಿಗೆ ಸೇರಿಸಲಾಗಿದೆ.
ಮಿಥುನ್ ಮನ್ಹಾಸ್ ಅವರ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ನಂತರ, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಅಭಿನಂದಿಸಿದ್ದಾರೆ.
ಮಿಥುನ್ ಮನ್ಹಾಸ್ ಯಾರು?
45 ವರ್ಷದ ಮಿಥುನ್ ಮನ್ಮಾಸ್ ದೆಹಲಿಯ ಮಾಜಿ ಆಲ್‌ರೌಂಡರ್ ಆಗಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು 157 ಪ್ರಥಮ ದರ್ಜೆ ಪಂದ್ಯಗಳು, 130 ಲಿಸ್ಟ್ ಎ ಪಂದ್ಯಗಳು ಮತ್ತು 91 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.