ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಸೇರಿರುವ ಘಟನೆ ನಡೆದಿದೆ.
ಮಹಾಂತೇಶ ಹಿಪ್ಪರಗಿ ಎಂಬ ಆರೋಪಿ, ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಬಾಲಕಿ ತಕ್ಷಣವೇ ತನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಾಳೆ. ಬಳಿಕ, ಬಾಲಕಿಯ ಪೋಷಕರು ಐಗಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಐಗಳಿ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಕಾಮುಕ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಮೇಲೆ ಅ*ತ್ಯಾಚಾರ-ಕೊ*ಲೆ ಪ್ರಕರಣ: ಪೊಲೀಸರ ಗುಂಡೇಟಿಗೆ ಆರೋಪಿ ಬಲಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ 5 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರದ ಯತ್ನ ಮತ್ತು ಕೊಲೆ ಪ್ರಕರನದಿಂದ ಮನುಷ್ಯ ಕುಲವೇ ತಲೆ ತಗ್ಗಿಸುವಂತಾಗಿದೆ. ಈ ನೀಚ ಕೃತ್ಯವನ್ನು ಮಾಡಿದ ಬಿಹಾರ್ ಮೂಲದ ಆರೋಪಿ ರಕ್ಷಿತ್ ಕ್ರಾಂತಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಘಟನೆ. ಮಾತಾಡಲಾಗದ, ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ಅಪಹರಿಸಿ, ಪಾಳುಬಿದ್ದ ಕಟ್ಟಡವೊಂದಕ್ಕೆ ಕರೆದೊಯ್ದು ಅಮಾನವೀಯ ರೀತಿಯಲ್ಲಿ ವರ್ತಿಸುತ್ತಾನೆ. ಅತ್ಯಾಚಾರ ಯತ್ನ ಮಾಡಿದಾಗ ಮಗು ಕೂಗಲು ಆರಂಭಿಸಿದ್ದರಿಂದ ಆಕ್ರೋಶದಿಂದ ಕುತ್ತಿಗೆ ಹಿಸುಕಿದ್ದು, ಹತ್ಯೆ ಮಾಡಿದ್ದಾನೆ. ಬಳಿಕ ಆ ಸ್ಥಳದಿಂದ ಬಾಲಕಿ ಮೃತದೇಹ ಬಿಟ್ಟು ಪರಾರಿಯಾಗಿದ್ದ.
ಮಗುವಿನ ಶವ ಪಾಳು ಕಟ್ಟಡದಲ್ಲಿರುವ ಸುದ್ದಿ ತಿಳಿದ ಕೂಡಲೇ, ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಪೊಲೀಸ್ ಇಲಾಖೆ ಐದು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿತು. ಕೆಲವೇ ಗಂಟೆಗಳೊಳಗೆ ಆರೋಪಿ ಪತ್ತೆಯಾಗಿದ್ದು, ಅಶೋಕನಗರ ಠಾಣಾ ವ್ಯಾಪ್ತಿಯ ಪೋಲೀಸರು ಬಂಧನಕ್ಕೆ ಮುಂದಾದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ, ಇಬ್ಬರು ಕಾನ್ಸ್‌ಟೇಬಲ್ ಹಾಗೂ ಒಬ್ಬ ಪಿಎಸ್ಐ ಗಾಯಗೊಂಡರು.
ಇದನ್ನು ತಡೆಯಲು ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ತೀವ್ರ ರಕ್ತಸ್ರಾವಗೊಂಡ ಆರೋಪಿ ರಕ್ಷಿತ್ ಕ್ರಾಂತಿಯನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಆರೋಪಿ ಸಾವನ್ನಪ್ಪಿದ್ದಾನೆ.
ಈ ಘಟನೆ ಹಿನ್ನೆಲೆ ನಗರದಲ್ಲಿ ಭಾರೀ ಆಕ್ರೋಶ ಉಂಟಾಗಿದೆ. ಹಲವೆಡೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. “ಈ ದುಷ್ಟನಿಗೆ ಕಠಿಣ ಶಿಕ್ಷೆ ಆಗಬೇಕು”, “ಅವನಿಗೆ ತಕ್ಷಣವೇ ಶಾಶ್ವತ ಶಿಕ್ಷೆ ನೀಡಿ ಮಾನವಕುಲಕ್ಕೆ ನ್ಯಾಯ ನೀಡಿ” ಎಂಬ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಾಲಕಿಯ ಕುಟುಂಬದವರು, ಈ ಆರೋಪಿಗೆ ಎನ್‌ಕೌಂಟರ್ ಆಗಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ತಕ್ಷಣ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪೊಲೀಸರು ಆರೋಪಿ ಬಿಹಾರ್ ಮೂಲದವನಾಗಿದ್ದು, ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ನೀಡಿದ್ದಾರೆ.