ಜಾರ್ಜ್ ಪರ ಸರ್ವಜ್ಞ ನಗರ ಒಲವು

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t190047.104

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023ರ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ನೋಡುವುದಾದರೇ ಕೆ.ಜೆ.ಜಾರ್ಜ್ ರವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ 118,783 (61%) ಮತಗಳಿಂದ ಗೆದಿದ್ದರು. ಬಿಜೆಪಿಯ ಪದ್ಮನಾಭ ರೆಡ್ಡಿ 63,015 ಹಾಗೂ ಜೆಡಿಎಸ್‌‌ನ ಮೊಹಮ್ಮದ್ ಮುಸ್ತಫಾ 3,839 (2%) ಮತಗಳಿಸಿದ್ದರು.

ಸರ್ವಜ್ಞ ನಗರ ಕ್ಷೇತ್ರದ ಚಿತ್ರಣ..

ಕೇಂದ್ರ ಸಚಿವ ಜೋಸೆಫ್ ಜಾರ್ಜ್ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಸೋಲಿಲ್ಲದ ಸರದಾರ ಖ್ಯಾತಿ ಪಡೆದಿದ್ದು, ಕಾಂಗ್ರಸ್ಸಿನ ಪ್ರಭಾವಿ ನಾಯಕ ಕೆ ಜೆ ಜಾರ್ಜ್ ರಿಂದ ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ. ಸರ್ವಜ್ಷ ನಗರ ಕ್ಷೇತ್ರದಲ್ಲಿ ಸತತವಾಗಿ 5 ಭಾರಿ ಶಾಸಕರಾಗಿ ಸಚಿವರಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಸಿದ್ದರಾಮಯ್ಯ ನವರ ಮೊದಲ ಅವಧಿಯ ಸರ್ಕಾರದಲ್ಲಿ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಮೂಲಕ ಸಚಿವ ಸ್ಥಾನ ಕಳೆದುಕೊಂಡಿದ್ದ ಜಾರ್ಜ್ ಇದೀಗ ಸ್ಮಾರ್ಟ್ ಮೀಟರ್ ವಿಚಾರದಲ್ಲೂ ವಿವಾದದಲ್ಲಿ ಸಿಲುಕಿದ್ದಾರೆ. ಬಿಜೆಪಿಯಿಂದ ಪ್ರತಿ ಭಾರಿ ಅಭ್ಯರ್ಥಿಯನ್ನ ಬದಲಿಸುತ್ತಿರುವುದರಿಂದ ಕಾಂಗ್ರೆಸ್ ಗೆ ವರದಾನವಾಗಿದ್ದು, ಜೊತೆಗೆ ಗ್ಯಾರಂಟಿ ಯೋಜನೆ ಸಹ ಜಾರ್ಜ್ ಬಲ ತುಂಬಲಿದೆ.

ಮೂಡ್ ಆಫ್ ಕರ್ನಾಟಕ ಸರ್ವಜ್ಞ ನಗರ ಮೂಡ್ ಹೇಗಿದೆ.?

ಸರ್ವಜ್ಞ ನಗರದಲ್ಲಿ ಕಾಂಗ್ರೆಸ್ ಪರವಾದ ಬಲವಾದ ವಾತಾವರಣವಿದ್ದು, ತಮಿಳು ಹಾಗೂ ಮಲಯಾಳಂ ಭಾಷಿಕರೇ ಹೆಚ್ಚು ವಾಸಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಸಚಿವ ಕೆ.ಜೆ. ಜಾರ್ಜ್ ಬಿಗಿ ಹಿಡಿತ ಸಾಧಿಸಿದ್ದು, ಅಲ್ಪಸಂಖ್ಯಾತರ ಜೊತೆಗೆ ದಲಿತ ಮತದಾರರು ಕಾಂಗ್ರೆಸ್ ಗೆ ಆಸರೆ. ಜಾರ್ಜ್ ಬೆನ್ನಿಗೆ ಕ್ರೈಸ್ತ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಚಿವ ಜಾರ್ಜ್ ವೇಗ ನೀಡಿದ್ದಾರೆ. ಸರ್ವಜ್ಞನಗರದಲ್ಲಿ ವಿಪಕ್ಷಗಳ ಅಸ್ತಿತ್ವವೇ ಇಲ್ಲ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version