ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಯಾದ ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಕಳೆದ ಮೂರು ದಶಕಗಳಿಂದ ವಿವಿಧ ಭಾಷೆಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸುತ್ತಿದೆ. ಕರ್ನಾಟಕದಲ್ಲಿ ಝೀ ಕನ್ನಡ ವಾಹಿನಿಯು ಕೇವಲ ಒಂದು ಚಾನೆಲ್‌ಗಿಂತ ಹೆಚ್ಚಾಗಿ, ಪ್ರತಿ ಕನ್ನಡಿಗನ ಮನೆಯ.. ಮನರಂಜನೆಯ ಮೊದಲ ಆಯ್ಕೆಯಾಗಿದೆ. ಝೀ ಪವರ್ ಮೂಲಕ ಝೀ ಕನ್ನಡದ ಯಶಸ್ಸಿನ ನಂತರ, ಕನ್ನಡ ಮನರಂಜನಾ ಜಗತ್ತಿನಲ್ಲಿ ಮತ್ತೊಂದು ಕ್ರಾಂತಿಕಾರಿ ಅಲೆಯನ್ನು ಸೃಷ್ಟಿಸಲು ಸಿದ್ಧವಾಗಿದೆ. ಆಗಸ್ಟ್ 23, 2025 ರಂದು ಭವ್ಯವಾಗಿ ಆರಂಭವಾಗಲಿರುವ ಝೀ ಪವರ್, ಕನ್ನಡಿಗರಿಗೆ ಹೊಸ ಯುಗದ ಮನರಂಜನೆಯನ್ನು ಒದಗಿಸಲಿದೆ.
ಝೀ ಪವರ್, ಕರ್ನಾಟಕದ ಸಂಸ್ಕೃತಿ, ಶ್ರೀಮಂತ ಪರಂಪರೆ, ಮತ್ತು ಆಧುನಿಕ ಕನ್ನಡಿಗರ ಜೀವನಶೈಲಿಯನ್ನು ಒಳಗೊಂಡಿರುವ ವಿಶಿಷ್ಟ ಕಾರ್ಯಕ್ರಮಗಳನ್ನು ಒದಗಿಸಲಿದೆ. ಮಹಿಳಾ ಕೇಂದ್ರಿತ ಧಾರಾವಾಹಿಗಳು, ಸಾಮಾಜಿಕ ವಿಷಯಗಳನ್ನು ಒಳಗೊಂಡ ರಿಯಾಲಿಟಿ ಶೋಗಳು, ಬ್ಲಾಕ್‌ಬಸ್ಟರ್ ಚಿತ್ರಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಮತ್ತು ಭಕ್ತಿಗೀತೆಗಳೊಂದಿಗೆ ಈ ವಾಹಿನಿಯು ಎಲ್ಲಾ ವಯಸ್ಸಿನ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಲಿದೆ.
ZEEL ನ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರ್, ಮಾತನಾಡಿ “ಝೀ ಪವರ್ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ವಾಹಿನಿಯ ಧಾರಾವಾಹಿಗಳು ತಮ್ಮ ವಿಶಿಷ್ಟ ಕಥೆಗಳ ಮೂಲಕ ಯುವಜನರನ್ನು ಆಕರ್ಷಿಸಲಿದೆ. ಕರ್ನಾಟಕದ ಜನರಿಗೆ ಹೊಸತನದ ಮನರಂಜನೆಯನ್ನು ಒದಗಿಸುವ ಮೂಲಕ ಝೀ ಸಂಸ್ಥೆಯು ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ,” ಎಂದು ಹೇಳಿದರು.
ಸೌತ್ ಅಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್, ZEEL, ಸಿಜು ಪ್ರಭಾಕರನ್, ಮಾತನಾಡಿ “ಝೀ ಪವರ್‌ನ ಆರಂಭವು ಕರ್ನಾಟಕದಲ್ಲಿನ ನಮ್ಮ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಎಲ್ಲಾ ವಯಸ್ಸಿನವರಿಗೂ ತಲುಪುವಂತಹ ಕಥೆಗಳನ್ನು ಒದಗಿಸುವ ಗುರಿಯನ್ನು ಈ ವಾಹಿನಿಯು ಹೊಂದಿದೆ,” ಎಂದರು.
ಬಿಸಿನೆಸ್ ಹೆಡ್, ಝೀ ಪವರ್, ಭಾಸ್ಕರ್ ಅಯ್ಯರ್, “ಝೀ ಪವರ್ ಒಂದು ಹೈಬ್ರಿಡ್ ಚಾನೆಲ್ ಆಗಿದ್ದು, ಇದರ ಕಾರ್ಯಕ್ರಮಗಳು ಎಲ್ಲಾ ವರ್ಗದ ಜನರನ್ನು ಆಕರ್ಷಿಸಲಿವೆ. ಕರ್ನಾಟಕದ ಸಂಸ್ಕೃತಿ, ವಿಶಾಲ ಮನೋಭಾವ, ಮತ್ತು ಶ್ರೀಮಂತ ಪರಂಪರೆಯನ್ನು ಒಳಗೊಂಡಿರುವ ಈ ವಾಹಿನಿಯು ಕನ್ನಡಿಗರಿಗೆ ಮೊದಲ ದಿನದಿಂದಲೇ ಆಕರ್ಷಕವಾಗಿರಲಿದೆ,” ಎಂದು ತಿಳಿಸಿದರು.
ಝೀ ಪವರ್ ಕನ್ನಡದ ಮೊದಲ ಹೈಬ್ರಿಡ್ ಚಾನೆಲ್ ಆಗಿದ್ದು, ಆಗಸ್ಟ್ 25, 2025 ರಿಂದ ಉತ್ತಮ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಲಿದೆ.