ಕಲ್ಟ್..ಕಲ್ಟ್..ಕಲ್ಟ್.. ಎಲ್ಲೆಲ್ಲೂ ಝೈದ್ ಖಾನ್ ಕಲ್ಟ್‌ದೇ ಸೌಂಡು, ಬ್ಯಾಂಡು. ಮೂರೇ ದಿನದಲ್ಲಿ ಮೂರು ಕೋಟಿ 87 ಲಕ್ಷ ಗಳಿಸಿರೋ ಕಲ್ಟ್, ಯೂತ್ ದಿಲ್ ದೋಚುತ್ತಿದೆ. ಮಗನ ಸಿನಿಮಾ ನೋಡಿ ಸಚಿವ ಜಮೀರ್ ಹೇಳಿದ್ದೇನು..? ಸಕ್ಸಸ್ ಖುಷಿಯಲ್ಲಿರೋ ಝೈದ್, ಕರುನಾಡಿನ ಮಂದಿಗೆ ಧನ್ಯವಾದ ಹೇಳಲು ವಿಜಯಯಾತ್ರೆ ಹೊರಟ ಪರಿ ಹೇಗಿದೆ ಅನ್ನೋದ್ರ ಕಂಪ್ಲೀಟ್ ಝಲಕ್ ನಿಮಗಾಗಿ ಕಾಯ್ತಿದೆ.
ಕಲ್ಟ್..ಇದು ಬರೀ ಸಿನಿಮಾ ಅಲ್ಲ. ಸ್ಯಾಂಡಲ್‌ವುಡ್‌ಗೆ ಒಬ್ಬ ಪ್ರಾಮಿಸಿಂಗ್ ಹೀರೋನ ಕೊಟ್ಟ ಸಿನಿಮಾ. ದಿಲ್‌ವಾಲಾ ಅನಿಲ್ ನಿರ್ದೇಶನದ ಹಾಗೂ ಝೈದ್ ಖಾನ್ ನಟನೆಯ ಚಿತ್ರ. ಈ ಹಿಂದಿನ ಬನಾರಸ್‌ಗಿಂತ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿ ಕಾಣ್ತಾರೆ ಝೈದ್. ಅಲ್ಲದೆ ಝೈದ್ ಜೊತೆ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಹಾಗೂ ಮಲೈಕಾ. ಹೀಗೆ ಇಬ್ಬಿಬ್ಬರು ಗ್ಲಾಮರ್ ಡಾಲ್‌ಗಳಿಂದ ಯೂತ್‌ಫುಲ್ ಸಿನಿಮಾ ಆಗಿ ಅಬ್ಬರಿಸಿ, ಆರ್ಭಟಿಸುತ್ತಿದೆ.
‘ಕಲ್ಟ್’ಗೆ ಜಮೀರ್ ಖುಷ್..ಖಾನ್ ವಿಜಯಯಾತ್ರೆ ಶುರು
ಓ ಮೈ ಗಾಡ್..3 ದಿನಕ್ಕೆ 3.87 ಕೋಟಿ ದಾಖಲೆ ಕಲೆಕ್ಷನ್..!
ಕಲ್ಟ್ ಸಿನಿಮಾ ರಾಜ್ಯದ ಮೂಲೆ ಮೂಲೆಗಳಲ್ಲಿ ಅಬ್ಬರಿಸಿ, ಆರ್ಭಟಿಸುತ್ತಿದೆ. ಟಾರ್ಗೆಟ್ ಆಡಿಯೆನ್ಸ್ ಯೂತ್ ಆಗಿರೋದ್ರಿಂದ ಕಾಲೇಜು ಹುಡುಗರು, ಹುಡಿಗಿಯರ ಹಾರ್ಟ್ ಫೇವರಿಟ್ ಚಿತ್ರವಾಗಿ ಪರಿಣಮಿಸಿದೆ. ಝೈದ್ ಕ್ರೇಜಿ ಆ್ಯಕ್ಟಿಂಗ್ ಸ್ಕಿಲ್ಸ್‌ಗೆ ಕ್ಲೀನ್ ಬೋಲ್ಡ್ ಆಗ್ತಿದ್ದಾರೆ ಪ್ರೇಕ್ಷಕ ಪ್ರಭುಗಳು. ಹಾಗಾಗಿಯೇ ಮೂರೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 3 ಕೋಟಿ 87 ಲಕ್ಷ ದಾಖಲೆ ಮೊತ್ತ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ ಕಲ್ಟ್.
ಸ್ಟಾರ್ ಚಿತ್ರಗಳ ರೇಂಜ್‌ಗೆ ಎಲ್ಲೆಡೆ ಹೌಸ್‌ಫುಲ್..ಕಲ್ಟ್ ಹಿಟ್
128 ಹೌಸ್‌ಫುಲ್ ಶೋಗಳು..268 ಶೋ ಫಾಸ್ಟ್ ಫಿಲ್ಲಿಂಗ್..!
ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳೇ ಬಾಕ್ಸ್ ಆಫೀಸ್‌ನಲ್ಲಿ ಈ ರೀತಿ ಕೋಟಿ ರೂಪಾಯಿಗಳನ್ನ ನೋಡೋದು ಕಷ್ಟಸಾಧ್ಯ. ಅಂಥದ್ರಲ್ಲಿ ಝೈದ್ ತನ್ನ ಎರಡನೇ ಚಿತ್ರದಲ್ಲೇ ಇಂಥದ್ದೊಂದು ಕಲೆಕ್ಷನ್ ಮಾಡಿರೋದು ವಿಶೇಷ. ಅದಕ್ಕೆ ಅವ್ರ ಕರ್ನಾಟಕ ಯಾತ್ರೆ ಕೂಡ ಪ್ಲಸ್ ಆಗಿದೆ. ಸುಮಾರು 16 ಸಾವಿರಕ್ಕೂ ಅಧಿಕ ಕಿಲೋಮೀಟರ್ ಸುತ್ತಿ, ಕಲ್ಟ್ ಪ್ರಮೋಷನ್ಸ್ ಮಾಡಿದ್ರು. ಇದೀಗ ವಿಜಯಯಾತ್ರೆ ಕೂಡ ಆರಂಭಿಸಿದ್ದಾರೆ. ಮಂಡ್ಯ, ಮಳವಳ್ಳಿಯಿಂದ ಮೈಸೂರು ವರೆಗೂ ಕಲರ್ ಮಾಡಿ, ಆ ಸಕ್ಸಸ್ ಸಂಭ್ರಮವನ್ನ ಚಿತ್ರಪ್ರೇಮಿಗಳ ಜೊತೆ ಹಂಚಿಕೊಳ್ತಿರೋದು ಖುಷಿಯ ವಿಚಾರ.
134 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಹಾಗೂ 82 ಮಲ್ಟಿಪ್ಲೆಕ್ಸ್‌ಗಳಲ್ಲಿ 128 ಥಿಯೇಟರ್‌ಗಳು ಹೌಸ್‌ಫುಲ್ ಆಗಿದ್ದು, 263 ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿವೆ. ಇದು ಒಂದು ಗಟ್ಟಿಯಾದ ಕಥೆ, ಒಳ್ಳೆಯ ಪರ್ಫಾಮೆನ್ಸ್‌ಗೆ ಸಿಕ್ಕ ಪ್ರಶಂಸೆ ಹಾಗೂ ಪ್ರತಿಕ್ರಿಯೆ ಆಗಿದೆ. ಒಟ್ಟಾರೆ ಝೈದ್ ಖಾನ್ ಇದೇ ವೇಗದಲ್ಲಿ ಸಾಗಿದ್ರೆ, ಆದಷ್ಟು ಬೇಗ ಸ್ಟಾರ್ ಆಗಿ ರಾರಾಜಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.
